ಚಿನ್ನದ ಬೆಲೆ ₹2,700 ಏರಿಕೆ

Picture of Savistara

Savistara

Bureau Report

ನವದೆಹಲಿ: ಇಲ್ಲಿನ ಚಿನಿವಾರ ಪೇಟೆಯಲ್ಲಿ ಚಿನ್ನದ ಬೆಲೆಯು 10 ಗ್ರಾಂಗೆ ₹2,700ರಷ್ಟು ಏರಿಕೆ ಆಗಿದ್ದು, ಸಾರ್ವಕಾಲಿಕ ಗರಿಷ್ಠ ಮಟ್ಟವಾದ ₹1,18,900ಕ್ಕೆ ತಲುಪಿದೆ.

ಅಮೆರಿಕವು ಎಚ್-1ಬಿ ವೀಸಾ ಶುಲ್ಕವನ್ನು ಹೆಚ್ಚಿಸಿದ ನಂತರದಲ್ಲಿ ಅಮೆರಿಕದ ಡಾಲರ್ ಎದುರು ರೂಪಾಯಿ ಮೌಲ್ಯವು ಮತ್ತಷ್ಟು ಕುಸಿದಿದೆ. ಈ ನಡುವೆ ಸುರಕ್ಷಿತ ಹೂಡಿಕೆಯಾದ ಚಿನ್ನಕ್ಕೆ ಬೇಡಿಕೆ ಹೆಚ್ಚಾಗಿದೆ.ಶೇಕಡ 99.9ರಷ್ಟು ಪರಿಶುದ್ಧತೆಯ ಚಿನ್ನದ ಬೆಲೆಯು ಸೋಮವಾರದ ವಹಿವಾಟಿನ ಅಂತ್ಯದ ವೇಳೆಗೆ 10 ಗ್ರಾಂಗೆ ₹1,16,200 ಆಗಿತ್ತು. ಶೇ 99.5ರಷ್ಟು ಪರಿಶುದ್ಧತೆಯು ಚಿನ್ನದ ಬೆಲೆಯು ₹2,650ರಷ್ಟು ಹೆಚ್ಚಳವಾಗಿ, ₹1,18,300ಕ್ಕೆ ತಲುಪಿದೆ ಎಂದು ಅಖಿಲ ಭಾರತ ಸರಾಫ್‌ ಒಕ್ಕೂಟ ತಿಳಿಸಿದೆ.

ಅಮೆರಿಕದ ಡಾಲರ್ ಎದುರು ರೂಪಾಯಿ ಮೌಲ್ಯವು ತೀವ್ರವಾಗಿ ಕುಸಿದಿದ್ದು ಕೂಡ ಚಿನ್ನದ ಬೆಲೆ ಏರಿಕೆಗೆ ಕಾರಣವಾಯಿತು ಎಂದು ವರ್ತಕರು ತಿಳಿಸಿದ್ದಾರೆ.ಮಂಗಳವಾರ ಬೆಳ್ಳಿಯ ಬೆಲೆಯು ಕೆ.ಜಿ.ಗೆ ₹3,220ರಷ್ಟು ಹೆಚ್ಚಳವಾಗಿ ₹1,39,600ಕ್ಕೆ ತಲುಪಿದೆ.

News Updates

BREAKING NEWS ಸುಳ್ಯ :ಪಂಜ ಕಾಂಗ್ರೆಸ್ ಪಕ್ಷದ ಹುದ್ದೆಗೆ ರಾಜಿನಾಮೆ ನೀಡಿದ ದಿನೇಶ್ ಪುಂಡಿಮನೆ, ಕುಸುಮಾಧರ ಕೆರೆಯಡ್ಕ,ಲೋಕನಾಥ್ ಕುದ್ವ |ನಮ್ಮ ಮಾತನ್ನು ಪಕ್ಷದ ನಾಯಕರು ಉಳಿಸಿಕೊಂಡಿಲ್ಲ, ದೇವಸ್ಥಾನ ವ್ಯವಸ್ಥೆ ಸರಿದಾರಿಗೆ ತರುವ ಕೆಲಸವಾಗಲಿ: ದಿನೇಶ್ ಪುಂಡಿಮನೆ

News Updates

ಬೆಳ್ತಂಗಡಿ : ಮೊಗ್ರು ಜೈ ಶ್ರೀರಾಮ ಸೇವಾ ಟ್ರಸ್ಟ್ ಅಲೆಕ್ಕಿ -ಮುಗೇರಡ್ಕ ಮೊಗ್ರು, ಶ್ರೀ ರಾಮ ಶಿಶುಮಂದಿರದ 5 ನೇ ವರ್ಷದ ಶ್ರೀ ಕೃಷ್ಣೋತ್ಸವ. |ಕಾಶಿ ಶೆಟ್ಟಿ ನವಶಕ್ತಿ ಗುರುವಾಯನಕೆರೆ ಇವರ ಸ್ಮರಣಾರ್ಥ ಕಾಶಿ ಶೆಟ್ಟಿ ವಿದ್ಯಾ ಮಂದಿರ, ಹಾಗೂ ಶಾಸಕ ಹರೀಶ್ ಪೂಂಜಾರವರ ನೆರವಿನ ಅಡುಗೆ ಕೋಣೆ ಉದ್ಘಾಟನಾ ಕಾರ್ಯಕ್ರಮ |ಮಕ್ಕಳ ಶ್ರೀಕೃಷ್ಣ ಮತ್ತು ರಾಧೆಯರ ಸ್ಪರ್ಧೆ, ಮೊಸರು ಕುಡಿಕೆ, ಆಟೋಟ ಸ್ಪರ್ಧೆ

[t4b-ticker]
error: Content is protected !!