ಗಾಜಾ ಪರಿಹಾರ: ಅರಬ್ ಮತ್ತು ಮುಸ್ಲಿಂ ರಾಷ್ಟ್ರಗಳ ನಾಯಕರೊಂದಿಗೆ ಟ್ರಂಪ್ ಮಹತ್ವದ ಮಾತುಕತೆ

Picture of Savistara

Savistara

Bureau Report

ಗಾಜಾದಲ್ಲಿ ಸಂಘರ್ಷ ಕೊನೆಗೊಳಿಸಲು ಬಯಸಿದ್ದೇವೆ…ಕೊನೆಗೊಳಿಸುತ್ತೇವೆ

ನ್ಯೂಯಾರ್ಕ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರುವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಸಂದರ್ಭದಲ್ಲಿ ಮಂಗಳವಾರ ತಡರಾತ್ರಿ(ಅಮೆರಿಕ ಕಾಲಮಾನ) ಅರಬ್ ಮತ್ತು ಮುಸ್ಲಿಂ ರಾಷ್ಟ್ರಗಳ ನಾಯಕರೊಂದಿಗೆ ಗಾಜಾ ಯುದ್ಧಕ್ಕೆ ಸಂಬಂಧಿಸಿ ಮಹತ್ವದ ಮಾತುಕತೆ ನಡೆಸಿದ್ದಾರೆ.ಕತಾರ್, ಸೌದಿ ಅರೇಬಿಯಾ, ಇಂಡೋನೇಷ್ಯಾ, ಟರ್ಕಿ, ಪಾಕಿಸ್ಥಾನ, ಈಜಿಪ್ಟ್, ಯುಎಇ ಮತ್ತು ಜೋರ್ಡಾನ್ ಪ್ರತಿನಿಧಿಗಳು ಸೇರಿದಂತೆ ಅರಬ್ ರಾಷ್ಟ್ರಗಳು ತ್ತು ಮುಸ್ಲಿಂ ರಾಷ್ಟ್ರಗಳ ನಾಯಕರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.ಭೇಟಿ ಬಳಿಕ ಮಾತನಾಡಿದ ಟ್ರಂಪ್ “ನನ್ನ ಅಧಿಕಾರಾವಧಿಯಲ್ಲಿ ಇದು ಅತ್ಯಂತ ಮುಖ್ಯವಾದದ್ದು. ನಾವು ಗಾಜಾದಲ್ಲಿ ಯುದ್ಧವನ್ನು ಕೊನೆಗೊಳಿಸಲು ಬಯಸುತ್ತೇವೆ. ಕೊನೆಗೊಳಿಸಲಿದ್ದೇವೆ” ಎಂದು ಹೇಳಿದರು. ಸಭೆಯಲ್ಲಿ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಮತ್ತು ವಿಶೇಷ ರಾಯಭಾರಿ ಸ್ಟೀವ್ ವಿಟ್ಕಾಫ್ ಕೂಡ ಹಾಜರಿದ್ದರು.ಕತಾರ್‌ನ ಎಮಿ‌ರ್ ತಮೀಮ್ ಬಿನ್ ಹಮದ್ ಅಲ್ ಥಾನಿ ಮಾತನಾಡಿ “ನಾವು ಗಾಜಾ ಬಗ್ಗೆ ಚರ್ಚಿಸಿದ್ದೇವೆ. ಇಸ್ರೇಲ್ ಹೊರತುಪಡಿಸಿ ಎಲ್ಲಾ ದೊಡ್ಡ ರಾಷ್ಟ್ರಗಳೊಂದಿಗೆ ಇದು ಅತ್ಯಂತ ಯಶಸ್ವಿ ಸಭೆಯಾಗಿತ್ತು. ಮುಂದಿನ ಹಂತವು ಇಸ್ರೇಲಿಗಳೊಂದಿಗಿನ ಸಭೆಯಾಗಿರುತ್ತದೆ. ಗಾಜಾದೊಂದಿಗೆ ಏನಾಗುತ್ತದೆ ಎಂದು ನಾವು ನೋಡುತ್ತೇವೆ, ಆದರೆ ಇದು ಮಹಾನ್ ನಾಯಕರೊಂದಿಗೆ ಉತ್ತಮ ಸಭೆಯಾಗಿತ್ತು” ಎಂದು ಹೇಳಿದ್ದಾರೆ.

“ಗಾಜಾ ಯುದ್ಧವನ್ನು ಕೊನೆಗೊಳಿಸಲು ಟ್ರಂಪ್ ನಾಯಕತ್ವವನ್ನು ನಾವು ನಂಬುತ್ತೇವೆ. ಪರಿಸ್ಥಿತಿ ಭೀಕರವಾಗಿದ್ದು, ಮತ್ತು ಹೋರಾಟವನ್ನು ನಿಲ್ಲಿಸಲು ಮತ್ತು ಒತ್ತೆಯಾಳುಗಳನ್ನು ಹಿಂದಿರುಗಿಸಲು ಎಲ್ಲವನ್ನು ಮಾಡಲು ಇಲ್ಲಿದ್ದೇವೆ’ ಎಂದರು.ಟರ್ಕಿಶ್ ಅಧ್ಯಕ್ಷ ರೆಸೆಪ್ ತಯ್ಯಪ್ ಎರ್ಡೊಗನ್ ಮಾತನಾಡಿ ಸಭೆಯು ಉತ್ಪಾದಕ ಮತ್ತು ತುಂಬಾ ಒಳ್ಳೆಯ ರೀತಿಯಲ್ಲಿ ನಡೆದಿದೆ. ನನಗೆ ತೃಪ್ತಿ ಇದೆ ಮತ್ತು ಫಲಿತಾಂಶವು ಸಕಾರಾತ್ಮಕವಾಗಿರುತ್ತದೆ ಎಂದು ಭಾವಿಸುತ್ತೇನೆ” ಎಂದಿದ್ದಾರೆ.ಯುಎಇ “ನಡೆಯುತ್ತಿರುವ ಗಾಜಾ ಯುದ್ಧವನ್ನು ಕೊನೆಗೊಳಿಸುವುದು, ಶಾಶ್ವತವಾದ ಕದನ ವಿರಾಮವನ್ನು ಭದ್ರಪಡಿಸುವುದು, ಎಲ್ಲಾ ಒತ್ತೆಯಾಳುಗಳನ್ನು ಬಿಡುಗಡೆ ಮಾಡುವುದು ಮತ್ತು ಹದಗೆಡುತ್ತಿರುವ ಮಾನವೀಯ ಬಿಕ್ಕಟ್ಟನ್ನು ಪರಿಹರಿಸುವತ್ತ ಗಮನಹರಿಸಿದೆ ಎಂದು ಹೇಳಿದೆ.ಮಂಗಳವಾರ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಫ್ರಾನ್ಸ್ ಪ್ಯಾಲೆಸ್ತೀನ್ ರಾಷ್ಟ್ರವನ್ನು ಗುರುತಿಸುವುದಾಗಿ ಘೋಷಿಸಿದ ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್, ತಮ್ಮ ಭಾಷಣಕ್ಕೂ ಮೊದಲು, ಟ್ರಂಪ್ ಅವರ ಭಾಷಣಕ್ಕೆ ಪ್ರತಿಕ್ರಿಯಿಸಿದ್ದರು” ಟ್ರಂಪ್ ಅವರಿಗೆ ನೊಬೆಲ್ ಶಾಂತಿ ಪ್ರಶಸ್ತಿ ಬೇಕಾದರೆ, ಅವರು ಗಾಜಾ ಯುದ್ಧವನ್ನು ಕೊನೆಗೊಳಿಸಬೇಕು” ಎಂದು ಹೇಳಿದ್ದರು.

[t4b-ticker]
error: Content is protected !!