ಭರ್ಜರಿ ಗೆಲುವಿನತ್ತ 25ರ ಹರೆಯದ ಗಾಯಕಿ ಮೈಥಿಲಿ ಠಾಕೂರ್

Picture of Savistara

Savistara

Bureau Report

ಪಾಟ್ನಾ: ಬಿಹಾರ ಚುನಾವಣಾ ಕಣಕ್ಕೆ ಧುಮುಕಿ ಎಲ್ಲರ ಅಚ್ಚರಿಗೆ ಕಾರಣವಾಗಿದ್ದ 25ರ ಹರೆಯದ ಗಾಯಕಿ ಮೈಥಿಲಿ ಠಾಕೂರ್ (Maithili Thakur) ಇದೀಗ ವಿಧಾನಸಭೆ ಮೆಟ್ಟಿಲು ಹತ್ತುವ ಉತ್ಸಾಹದಲ್ಲಿದ್ದಾರೆ. ಅಲಿನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮೈಥಿಲಿ ಗೆಲುವಿನತ್ತ ಸಾಗುವತ್ತ ಹೆಜ್ಜೆ ಹಾಕಿದ್ದಾರೆ.ಬಿಹಾರ ಚುನಾವಣೆ ಘೋಷಣೆಯಾದ ಬಳಿಕ ಮೈಥಿಲಿ ಠಾಕೂ‌ರ್ ಬಿಜೆಪಿ ಸೇರಿದ್ದರು. ಅಲಿನಗರ ಕ್ಷೇತ್ರದಲ್ಲಿ ಅವರಿಗೆ ಟಿಕೆಟ್ ನೀಡಲಾಗಿತ್ತು. ಜಾನಪದ ಗಾಯಕಿಯಾಗಿರುವ ಮೈಥಿಲಿ ಠಾಕೂರ್ ಅವರು ಬಿಹಾರ ಚುನಾವಣೆಗೆ ಸ್ಟಾರ್ ಅಟ್ರಾಕ್ಷನ್ ತಂದಿತ್ತು.ಅಲಿನಗರದಲ್ಲಿ ಬಿಜೆಪಿಯ ಮೈಥಿಲಿ ಠಾಕೂರ್ ಅವರ ವಿರುದ್ಧವಾಗಿ ಪ್ರಮುಖವಾಗಿ ಆರ್‌ಜೆಡಿಯ ಬಿನೋದ್ ಮಿಶ್ರಾ ಮತ್ತು ಜನ್ ಸುರಾಜ್ ಪಕ್ಷದ ಅಭ್ಯರ್ಥಿ ಬಿಪ್ಲಾವ್ ಕುಮಾ‌ರ್ ಚೌಧರಿ ಸ್ಪರ್ಧೆ ಮಾಡಿದ್ದರು. 18 ಸುತ್ತಿನ ನಂತರ, ಬಿಜೆಪಿಯ ಮೈಥಿಲಿ ಠಾಕೂರ್ 8,500 ಮತಗಳ ಅಂತರದಿಂದ ಮುನ್ನಡೆಯಲ್ಲಿದ್ದಾರೆ, ಆರ್‌ಜೆಡಿಯ ಬಿನೋದ್ ಮಿಶ್ರಾ ಹತ್ತಿರದ ಪ್ರತಿಸ್ಪರ್ಧಿಯಾಗಿದ್ದಾರೆ.

ಆರಂಭಿಕ ಟ್ರೆಂಡ್‌ಗಳ ಬಗ್ಗೆ ಪ್ರತಿಕ್ರಿಯಿಸಿದ ಮೈಥಿಲಿ ಠಾಕೂರ್, “ನನಗೆ ನಿಜವಾಗಿಯೂ ಸಂತೋಷವಾಗುತ್ತಿದೆ. ಫಲಿತಾಂಶದ ಬಗ್ಗೆ ನನಗೆ ಅನುಮಾನ ಇರಲಿಲ್ಲ. ಜನರು ನನಗೆ ಮತ್ತು ನನ್ನ ಪಕ್ಷಕ್ಕೆ ತೋರಿಸಿದ ಪ್ರೀತಿಯಿಂದ ಹೃದಯ ತುಂಬಿ ಬಂದಿದೆ. ಮುಂಬರುವ ಐದು ವರ್ಷಗಳಲ್ಲಿ ನಾನು ಜನರ ಪರವಾಗಿ ಇರುತ್ತೇನೆ. ನಾನು ಈ ಮಣ್ಣಿನ ಮಗಳು. ಮತದಾರರನ್ನು ಕೇವಲ ಮತದಾರರಾಗಿ ನೋಡಲಿಲ್ಲ, ಕುಟುಂಬವಾಗಿ ನೋಡಿದೆ, ಜನರು ಅದೇ ರೀತಿ ಪ್ರತಿಕ್ರಿಯಿಸಿದ್ದಾರೆ. ನನಗೆ ಕೇವಲ 25 ವರ್ಷ, ಆದರೆ ಮುಂದಿನ ದಿನಗಳಲ್ಲಿ ನಾನು ನನ್ನನ್ನು ಸಾಬೀತುಪಡಿಸುತ್ತೇನೆ” ಎಂದರು.

ಬಿಹಾರ ಚುನಾವಣೆಯ ಮತದಾನದಲ್ಲಿ ಆರಂಭಿಕ ಟ್ರೆಂಡ್ ನಲ್ಲಿ ಎನ್‌ಡಿಎ ಮುನ್ನಡೆ ಸಾಧಿಸಿದೆ. ಜೆಡಿಯು ಮತ್ತು ಬಿಜೆಪಿ ಮೈತ್ರಿಕೂಟವು 200ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಕಾಂಗ್ರೆಸ್‌ ಮತ್ತು ಆರ್ ಜೆಡಿಯ ಮೈತ್ರಿಕೂಟ ಮಹಾಘಟಬಂಧನ್ ನ ಭಾರೀ ಹಿನ್ನಡೆ ಸಾಧಿಸಿದೆ.

News Updates

ಅಂತಿಮ ಹಂತ ತಲುಪಿದ ಕೋಟೆಗಂಗೂರು ರೈಲ್ವೆ ಕೋಚಿಂಗ್ ಡಿಪೋ ಕಾಮಗಾರಿ; ಸಂಸದ ಬಿ.ವೈ.ರಾಘವೇಂದ್ರ ಅವರ ನಿರಂತರ ಪರಿಶ್ರಮದ ಪ್ರತಿಫಲ | ಯೋಜನೆಗೆ ಇಲ್ಲಿವರೆಗೆ 58.82 ಕೋಟಿ ರೂ. ವೆಚ್ಚ; ನಿಲ್ದಾಣ ಹಾಗೂ ಸೇವಾ ಕಟ್ಟಡಗಳ ನಿರ್ಮಾಣ ಕಾಮಗಾರಿ ಪೂರ್ಣ; ಪ್ರಸಕ್ತ ಸಾಲಿಗೆ 9.5 ಕೋಟಿ ರೂ. ಅನುದಾನ ಬಿಡುಗಡೆ

News Updates

ಅಂತಿಮ ಹಂತ ತಲುಪಿದ ಕೋಟೆಗಂಗೂರು ರೈಲ್ವೆ ಕೋಚಿಂಗ್ ಡಿಪೋ ಕಾಮಗಾರಿ; ಸಂಸದ ಬಿ.ವೈ.ರಾಘವೇಂದ್ರ ಅವರ ನಿರಂತರ ಪರಿಶ್ರಮದ ಪ್ರತಿಫಲ | ಯೋಜನೆಗೆ ಇಲ್ಲಿವರೆಗೆ 58.82 ಕೋಟಿ ರೂ. ವೆಚ್ಚ; ನಿಲ್ದಾಣ ಹಾಗೂ ಸೇವಾ ಕಟ್ಟಡಗಳ ನಿರ್ಮಾಣ ಕಾಮಗಾರಿ ಪೂರ್ಣ; ಪ್ರಸಕ್ತ ಸಾಲಿಗೆ 9.5 ಕೋಟಿ ರೂ. ಅನುದಾನ ಬಿಡುಗಡೆ

News Updates

ಮೋದಿ ಸರ್ಕಾರದ ಮಾತೃ ಆರೋಗ್ಯ ರಕ್ಷಣೆಯ ಉಪಕ್ರಮಗಳಿಗೆ ದೊರೆಯುತ್ತಿರುವ ಉತ್ತಮ ಫಲಿತಾಂಶ: ಕರ್ನಾಟಕದಲ್ಲಿ PMSMA ಅಡಿ ಪತ್ತೆಯಾದ 12 ಲಕ್ಷಕ್ಕೂ ಹೆಚ್ಚು ಅಪಾಯಕಾರಿ ಗರ್ಭಧಾರಣೆಗಳಿಗೆ ಅಗತ್ಯ ವೈದ್ಯಕೀಯ ನೆರವು; ಸಂಸದ ಬಿ.ವೈ. ರಾಘವೇಂದ್ರ ಅವರಿಗೆ ಮಾಹಿತಿ ನೀಡಿದ ಕೇಂದ್ರ ಸರ್ಕಾರ

[t4b-ticker]
error: Content is protected !!