ಬಂಡಾಜೆ ಜಲಪಾತ ಚಾರಣಕ್ಕೆ ಗ್ರೀನ್ ಸಿಗ್ನಲ್: ಆನ್‌ಲೈನ್ ನೋಂದಣಿ ಕಡ್ಡಾಯ

Picture of Savistara

Savistara

Bureau Report

ಮಳೆಗಾಲದ ಅಬ್ಬರ ಹಾಗೂ ಕಾಡಿಚ್ಚಿನ ಭೀತಿಯಿಂದಾಗಿ ಕಳೆದ ಕೆಲ ತಿಂಗಳುಗಳಿಂದ ಪ್ರವಾಸಿಗರಿಗೆ ಬಂದ್ ಆಗಿದ್ದ ಪಶ್ಚಿಮ ಘಟ್ಟದ ಸುಂದರ ತಾಣ ಬಂಡಾಜೆ ಜಲಪಾತ (ಬಂಡಾಜೆ ಅರ್ಬಿ) ವೀಕ್ಷಣೆಗೆ ನವೆಂಬ‌ರ್ 20ರಿಂದ (ಇಂದಿನಿಂದ) ಮತ್ತೆ ಅವಕಾಶ ಕಲ್ಪಿಸಲಾಗಿದೆ.

ಬೆಳ್ತಂಗಡಿ: ಮಳೆಗಾಲದ ಅಬ್ಬರ ಹಾಗೂ ಕಾಡಿಚ್ಚಿನ ಭೀತಿಯಿಂದಾಗಿ ಕಳೆದ ಕೆಲ ತಿಂಗಳುಗಳಿಂದ ಪ್ರವಾಸಿಗರಿಗೆ ಬಂದ್‌ ಆಗಿದ್ದ ಪಶ್ಚಿಮ ಘಟ್ಟದ ಸುಂದರ ತಾಣ ಬಂಡಾಜೆ ಜಲಪಾತ (ಬಂಡಾಜೆ ಅರ್ಬಿ) ವೀಕ್ಷಣೆಗೆ ನವೆಂಬ‌ರ್ 20ರಿಂದ (ಇಂದಿನಿಂದ) ಮತ್ತೆ ಅವಕಾಶ ಕಲ್ಪಿಸಲಾಗಿದೆ.

ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ವ್ಯಾಪ್ತಿಯಲ್ಲಿ ನೂರಾರು ಅಡಿ ಎತ್ತರದಿಂದ ಧುಮ್ಮಿಕ್ಕುವ ಈ ಜಲಪಾತಕ್ಕೆ ಬೆಳ್ತಂಗಡಿ ತಾಲೂಕಿನ ಕಡಿರುದ್ಯಾವರದಿಂದ ಸುಮಾರು 11 ಕಿ.ಮೀ. ಕಾಲ್ನಡಿಗೆಯ ಮೂಲಕವೇ ಸಾಗಬೇಕು. ದಟ್ಟ ಕಾಡಿನ ನಡುವೆ ಸಾಗುವ ಈ ದುರ್ಗಮ ಹಾದಿಯಲ್ಲಿ ಕಾಡಾನೆ ಸೇರಿದಂತೆ ವನ್ಯಜೀವಿಗಳು ಎದುರಾಗುವ ಸಾಧ್ಯತೆ ಹೆಚ್ಚಿರುವುದರಿಂದ ಚಾರಣಿಗರು ಅರಣ್ಯ ಇಲಾಖೆಯ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಿದೆ ಮತ್ತು ಹೆಚ್ಚಿನ ಮುನ್ನೆಚ್ಚರಿಕೆ ವಹಿಸಬೇಕಿದೆ.

ಆನ್‌ಲೈನ್ ನೋಂದಣಿ ಕಡ್ಡಾಯ::D16ಈ ಕುರಿತು ಮಾಹಿತಿ ನೀಡಿರುವ ಬೆಳ್ತಂಗಡಿ ವನ್ಯಜೀವಿ ವಿಭಾಗದ ಆರ್‌ಎಫ್‌ಒ ಶರ್ಮಿಷ್ಠಾ ಅವರು, “ಜಲಪಾತ ವೀಕ್ಷಣೆಗೆ ಬರುವವರು ಅರಣ್ಯ ಇಲಾಖೆಯ ಅಧಿಕೃತ ವೆಬ್‌ಸೈಟ್‌ನಲ್ಲಿ ಮುಂಚಿತವಾಗಿ ನೋಂದಣಿ ಮಾಡಿಕೊಳ್ಳುವುದು ಕಡ್ಡಾಯ. ನೋಂದಣಿ ಮಾಡದೆ ನೇರವಾಗಿ ಸ್ಥಳಕ್ಕೆ ಬರುವವರಿಗೆ ಪ್ರವೇಶಕ್ಕೆ ಅವಕಾಶ ನೀಡುವುದಿಲ್ಲ. ಪ್ರವಾಸಿಗರು ಸುರಕ್ಷತಾ ನಿಯಮಗಳನ್ನು ಪಾಲಿಸಿ ಸಹಕರಿಸಬೇಕು.” ಎಂದು ತಿಳಿಸಿದ್ದಾರೆ.

News Updates

ಸುಳ್ಯದ ಗುತ್ತಿಗಾರಿನಲ್ಲಿ ಅಡಿಕೆಯಲ್ಲಿ ಎಲೆಚುಕ್ಕೆ ರೋಗ ನಿರ್ವಹಣೆ ಕುರಿತು ಮಾಹಿತಿ ಮತ್ತು ಸಂವಾದ ಕಾರ್ಯಕ್ರಮ | ಕೇಂದ್ರ ಸರ್ಕಾರ ಅಡಿಕೆ ಬೆಳೆಗಾರರ ಹಿತಕ್ಕೆ ಸದಾ ಬದ್ದವಾಗಿದ್ದು ಎಲೆ ಚುಕ್ಕಿ ರೋಗ ದಿಂದ ಅಡಿಕೆ ಬೆಳೆಗಾರರ ಸಂಕಷ್ಟಕ್ಕಿಡಾಗಿದ್ದು ಕೇಂದ್ರ ಕೃಷಿ ಸಚಿವರ ಗಮನಕ್ಕೆ ತಂದಿದ್ದು ಶೀಘ್ರದಲ್ಲಿ ಈ ಬಗ್ಗೆ ಪರಿಹಾರ : ಸಂಸದ ಕ್ಯಾ. ಬ್ರಿಜೇಶ್ ಚೌಟ

[t4b-ticker]
error: Content is protected !!