ಗೆಜ್ಜೆಗಿರಿ ಕ್ಷೇತ್ರದಲ್ಲಿ ಯಾತ್ರಿ ನಿವಾಸ ಶಿಲಾನ್ಯಾಸ ಕಾರ್ಯಕ್ರಮ

Picture of Savistara

Savistara

Bureau Report

ಆದಿ ಧೂಮಾವತಿ ಕ್ಷೇತ್ರ, ಸಾಯನ ಬೈದ್ಯರ ಗುರುಪೀಠ, ದೇಯಿಬೈದೈತಿ-ಕೋಟಿ ಚೆನ್ನಯ ಮೂಲಸ್ಥಾನ ಶ್ರೀ ಕ್ಷೇತ್ರ ಗೆಜ್ಜೆಗಿರಿಯಲ್ಲಿ ಸುಮಾರು 7 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ `ಯಾತ್ರಿ ನಿವಾಸ’ಕ್ಕೆ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಇಂಧನ ಇಲಾಖೆ ರಾಜ್ಯ ಸಚಿವ ಶ್ರೀಪಾದ ನಾಯ್ಕ ಭಾಗವಹಿಸಿ ಮಾತನಾಡಿದರು.

ಪುತ್ತೂರು: ಶ್ರದ್ಧಾ ಕೇಂದ್ರಗಳು ಸಂರಕ್ಷಣೆ, ಸದ್ಭಾವನೆ,ಸೇವೆಯ ಪ್ರತೀಕ. ಧರ್ಮ ರಕ್ಷಣೆ ಮಾಡುವವನನ್ನು ಧರ್ಮವೇ ರಕ್ಷಿಸುತ್ತದೆ. ಬ್ರಹ್ಮಶ್ರೀ ನಾರಾಯಣ ಗುರುಗಳು ಪ್ರತಿಪಾದಿಸಿದ ಸಮಾನತೆ, ಸಂಸ್ಕಾರದ ಪರಂಪರೆ ಮುಂದಿನ ಜನಾಂಗಕ್ಕೂ ದಾಟಬೇಕು. ಆ ಕಾರ್ಯಕ್ಕೆ ಶ್ರದ್ಧಾಕೇಂದ್ರಗಳು ಪೂರಕವಾಗಿರಬೇಕು ಎಂದು ಕೇಂದ್ರ ವಿದ್ಯುತ್ ಹಾಗೂ ಹೊಸ ಮತ್ತು ನವೀಕರಿಸಬಹುದಾದ ಇಂಧನ ಇಲಾಖೆ ರಾಜ್ಯ ಸಚಿವ ಶ್ರೀಪಾದ ನಾಯ್ಕ ಹೇಳಿದರು.

ಆದಿ ಧೂಮಾವತಿ ಕ್ಷೇತ್ರ. ಸಾಯನ ಬೈದ್ಯರ ಗುರುಪೀಠ, ದೇಯಿಬೈದೈತಿ ಕೋಟಿ ಚೆನ್ನಯ ಮೂಲಸ್ಥಾನ ಶ್ರೀ ಕ್ಷೇತ್ರ ಗೆಜ್ಜೆಗಿರಿಯಲ್ಲಿ ಸುಮಾರು 7 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಯಾತ್ರಿ ನಿವಾಸ’ಕ್ಕೆ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಸರ್ವರನ್ನೂ ಸಮಾನತೆಯಲ್ಲಿ ಕಾಣುವ ಧರ್ಮ ಹಿಂದೂ ಧರ್ಮ. ಋಷಿ ಮುನಿಗಳೂ ಇದೇ ಸಂದೇಶವನ್ನು ನೀಡಿದ್ದಾರೆ. ಬೇರೆ ಬೇರೆ ಆಚರಣೆ, ಸಂಸ್ಕೃತಿಗಳನ್ನು ಹೊಂದಿರುವವರನ್ನು ಒಗ್ಗೂಡಿಸುವುದು ಸುಲಭದ ವಿಚಾರವಲ್ಲ. ಹಿಂದೂ ಧರ್ಮಕ್ಕೆ ಆ ಶಕ್ತಿ ಇದೆ. ಸಂಘಟನಾತ್ಮಕ ಪ್ರಯತ್ನ ಇದಕ್ಕೆ ಅಗತ್ಯ ಇದೆ. ಇಂದು ನಮ್ಮಲ್ಲಿ ಎಲ್ಲಾ ವ್ಯವಸ್ಥೆಗಳು ಇವೆ. ಈ ಸಂದರ್ಭದಲ್ಲಿ ಸಮಾಶದ ಕೆಲಸವನ್ನೂ ನಾವು ಮಾಡಬೇಕು. ಸೇವಾ ಮನೋಭಾವ ತುಳುನಾಡಿನ ಗೌರವ ಎಂದರು. ಅತಿಥಿಗಳು ದೇವರು ಎನ್ನುವವರು ನಾವು. ಇದು ನಮ್ಮ ಸಂಸ್ಕೃತಿ. ಯಾವುದೇ ಭೇದವಿಲ್ಲದೆ ನಡೆಯುವ ಅನ್ನದಾನ ಪವಿತ್ರ ಸೇವೆ. ಇದರಿಂದ ಶಾಂತಿ, ಸಮಾಧಾನ ಸಿಗುತ್ತದೆ. ಶ್ರದ್ಧಾ ಕೇಂದ್ರದ ಮೂಲಕ ಪ್ರತಿಯೊಬ್ಬರಿಗೂ ಶಾಂತಿ, ಸಮೃದ್ಧಿ ಸಿಗುತ್ತದೆ. ಇಂತಹ ಉತ್ತಮ ಕೆಲಸ ಗೆಜಗೈಗಿರಿ ಕ್ಷೇತ್ರದಲ್ಲಿ ನಡೆಯುತ್ತಿರುವುದು ಎಲ್ಲವೂ ಮೆಚ್ಚುವ ಕಾರ್ಯವಾಗಿ ಜಗತ್ತಿನಾದ್ಯಂತ ಗುರುತಿಸಿಕೊಳ್ಳಲಿ ಎಂದು ಶ್ರೀಪಾದ್ ಶುಭಹಾರೈಸಿದರು.

ಹಿರಿಯ ಮುಖಂಡ, ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್‌ ಮಾತನಾಡಿ, ಬಿಲ್ಲವ ಸಮುದಾಯದಲ್ಲಿ ೨೪ ಪಂಗಡಗಳಿವೆ. ಕೇರಳದಲ್ಲಿ 100 ಶೇ. ಸಾಕ್ಷರತೆಗೆ ಬ್ರಹ್ಮಶ್ರೀ ನಾರಾಯಣ ಗುರುಗಳ ಪಾತ್ರವೂ ಇದೆ. ಯುವ ಪೀಳಿಗೆ ಜೈಲಿಗೆ ಹೋಗದೆ ಉನ್ನತ ಶಿಕ್ಷಣ ಪಡೆದು ಉದ್ಯೋಗದತ್ತ ಗಮನಹರಿಸಬೇಕು. ಬುದ್ಧಿ, ಸಾಮರ್ಥ್ಯದಿಂದ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಬೇಕು. ಸ್ವಾಭಿಮಾನಕ್ಕೆ ಪ್ರೇರಣೆಯಾದ ಕೋಟಿ ಚೆನ್ನಯರು, ನಾರಾಯಣ ಗುರುಗಳು ನಮಗೆಲ್ಲರಿಗೂ ಮಾದರಿಯಾಗಬೇಕು ಎಂದರು.

ದ.ಕ. ಸಂಸದ ಕ್ಯಾ. ಬೃಜೇಶ್ ಚೌಟ ಮಾತನಾಡಿ. ತುಳುನಾಡು ಸತ್ಯಧರ್ಮ, ನ್ಯಾಯದ ನೆಲ. ಹಿಂದೂ ಧರ್ಮಕ್ಕೆ ಆದರ್ಶ ನೆಲ. ಹಿಂದೂ ಸಮಾಜಕ್ಕೆ ಶಕ್ತಿ ಕೊಡುವೆ ಕೇಂದ್ರವಾಗಿ ಗೆಜ್ಜೆಗಿರಿ ಬೆಳಗಲಿ ಎಂದು ಆಶಯ ವ್ಯಕ್ತಪಡಿಸಿದರು. ಆಯುರ್ವೇದ ಚಿಕಿತ್ಸೆಯ ಪರಂಪರೆ ಹೊಂದಿರುವ ಗೆಜ್ಜೆಗಿರಿಯಲ್ಲಿ ಆಯುರ್ವೇದ ಕೇಂದ್ರ ಸ್ಥಾಪಿಸುವ ಉದ್ದೇಶವನ್ನು ಸಮಿತಿಯವರು ಹೊಂದಿದ್ದು. ಈ ನಿಟ್ಟಿನಲ್ಲಿ ಕೇಂದ್ರ ಸರಕಾರದ ಜತೆಗೂ ತಾನು ಪ್ರಯತ್ನ ನಡೆಸುವುದಾಗಿ ಚೌಟ ಹೇಳಿದರು.ಯಾತ್ರಿ ನಿವಾಸಕ್ಕೆ ಶಿಲಾನ್ಯಾಸ ನೆರವೇರಿಸಿದ ಗುಜರಾತ್ ಬರೋಡಾದ ಉದ್ಯಮಿ ದಯಾನಂದ ಬೊಂಟ್ರ ಮಾತನಾಡಿ, ಐಕ್ಯತೆಯಿಂದ ಮಾಡುವ ಕೆಲಸಕ್ಕೆ ಯಶಸ್ಸು ಲಭಿಸುತ್ತದೆ. ಗೆಜ್ಜೆಗಿರಿ ಕ್ಷೇತ್ರದ ಅಭಿವೃದ್ಧಿಯೊಂದಿಗೆ ಸಮಾಜದ ಉನ್ನತಿ ಪಡೆಯಲಿದೆ ಎಂದು ಹಾರೈಸಿದರು.ಸೋಲೂರು ಮಠ ಆರ್ಯಈಡಿಗ ಮಹಾಸಂಸ್ಥಾನದ ಪೀಠಾಧಿಪತಿ ಶ್ರೀ ವಿಖ್ಯಾತಾನಂದ ಸ್ವಾಮೀಜಿ ಆಶೀರ್ವಚನ ನೀಡಿ, ಸ್ವಾಭಿಮಾನದ ಪ್ರವೃತ್ತಿ ನಮ್ಮಲ್ಲಿ ಬೆಳೆಯಬೇಕು. ಏರಿದ ಏಣಿಯನ್ನು ಮರೆಯುವ ಕೆಲಸ ಯಾರೂ ಮಾಡಬಾರದು. ಪುಣ್ಯ ಕ್ಷೇತ್ರಕ್ಕೆ ಬಂದಾಗ ಪಾಪ ಕಾರ್ಯಗಳು ತೊಳೆದು ಹೋಗುತ್ತವೆ ಎಂದರು. ವರ್ಷದಲ್ಲಿ ಯಾತ್ರಿ ನಿವಾಸ ಉದ್ಘಾಟನೆಯಾಗಲಿ. ಶಿವಗಿರಿಯಂತೆ ಗೆಜ್ಜೆಗರಿ ಬೆಳೆಯಲಿ ಎಂದು ಹಾರೈಸಿದರು.

ದೇಯಿ ಬೈದೆತಿ ಕೋಟಿ ಚೆನ್ನಯ ಮೂಲಸ್ಥಾನ ಅಭಿವೃದ್ಧಿ ಟ್ರಸ್ಟ್‌ ಅಧ್ಯಕ್ಷ ಸಂಜೀವ ಪೂಜಾರಿ ಬಿರ್ವ ಅಧ್ಯಕ್ಷತೆ ವಹಿಸಿದ್ದರು. ಶಿವಗಿರಿ ಮಠದ ಜ್ಞಾನಾನಂದ ಸ್ವಾಮೀಜಿ, ಮುಂಬೈ ಬಿಲ್ಲವರ ಅಸೋಸಿಯೇಷನ್‌ ಅಧ್ಯಕ್ಷ ಹರೀಶ್ ಜಿ.ಅಮೀನ್, ಮುಂಬೈ ಬಿಲ್ಲವ ಚೇಂಬ‌ರ್ ಆಪ್ ಕಾಮರ್ಸ್ ನ ಅಧ್ಯಕ ಎನ್.ಟಿ.ಪೂಜಾರಿ,ಕಟಪಾಡಿ ಶ್ರೀ ವಿಶ್ವನಾಥ ಕ್ಷೇತ್ರ, ಅಧ್ಯಕ್ಷ ಮಹೇಶ್ ಎನ್. ಅಂಚನ್‌, ಮಂಗಳೂರು ಅಖಿಲ ಭಾರತ ಬಿಲ್ಲವರ ಯೂನಿಯನ್ ಅಧ್ಯಕ್ಷ ನವೀನ್‌ಚಂದ್ರ ಸುವರ್ಣ, ಮುಂಬೈ ಭಾರತ್ ಕೊ ಅಪರೇಟಿವ್ ಬ್ಯಾಂಕ್‌ನ ಅಧ್ಯಕ್ಷ ಸೂರ್ಯಕಾಂತ ಜೆ.ಸುವರ್ಣ, ಪುತ್ತೂರು ಮಾಜಿ ಶಾಸಕ ಸಂಜೀವ ಮಠಂದೂರು, ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಸದಸ್ಯೆ ಪ್ರತಿಭಾ ಕುಳಾಯಿ, ನಾರಾಯಣಗುರು ಅಭಿವೃದ್ಧಿ ನಿಗಮ ಅಧ್ಯಕ್ಷ ಮಂಜುನಾಥ್ ಪೂಜಾರಿ ಮುದ್ರಾಡಿ. ಪುತ್ತೂರು ಬಿಲ್ಲವ ಸಂಘದ ಅಧ್ಯಕ್ಷ ಸತೀಶ್ ಕುಮಾರ್ ಕಡೆಂಜಿಗುತ್ತು, ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ, ಬೆಳ್ತಂಗಡಿ ಬೆಸ್ಟ್ ಫೌಂಡೇಷನ್ ನ ಅಧ್ಯಕ್ಷ ರಕ್ಷಿತ್ ಶಿವರಾಂ, ಕರ್ನಾಟಕ ಲೋಕ ಸೇವಾ ಆಯೋಗದ ಮಾಜಿ ಸದಸ್ಯ ಲಕ್ಷ್ಮೀನರಸಯ್ಯ, ಪುತ್ತೂರು ಶ್ರೀ ರಾಮಕೃಷ್ಣ ಪ್ರೌಢಶಾಲಾ ಸಂಚಾಲಕ ಹೇಮನಾಥ್ ಶೆಟ್ಟಿ ಕಾವು, ಮಳೂರು ಯುವವಾಹಿನಿ ಕೇಂದ್ರ ಸಮಿತಿ, ಅಧ್ಯಕ್ಷ ಲೋಕೇಶ್‌ ಕೋಟ್ಯಾನ್, ಡುಮಲೆ ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನದ ವ್ಯವಸ್ಥಾಪನಾ

ಸಮಿತಿ ಅಧ್ಯಕ್ಷ ಸತೀಶ್ ರೈ ಕಟ್ಟಾವು, ಮಂಗಳೂರು ಗೋಕರ್ಣನಾಥ ಕೋ ಆಪರೇಟಿವ್ ಬ್ಯಾಂಕ್ ಲಿ. ಅಧ್ಯಕ್ಷ ಚಂದ್ರಶೇಖರ ಕುಮಾರ್, ಉಡುಪಿ ನಾರಾಯಣಗುರು ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ ಲಿ. ನ ಅಧ್ಯಕ್ಷ ಹರೀಶ್ಚಂದ್ರ ಅಮೀನ್, ಪ್ರಮುಖರಾದ ಸದಾನಂದ ಪೆರ್ಲ, ಹರೀಶ್ ಪೂಜಾರಿ ಬರೋಡ, ಸುಜಿತಾ ಬಂಗೇರ, ಸರಿತಾ ಕೋಟ್ಯಾನ್, ಪಿ.ವಿ. ಮೋಹನ್, ಬಿಲ್ಲವ ಬ್ರಗೇಡ್‌ನ ಅವಿನಾಶ್, ಹರೀಶ್ ಪೂಜಾರಿ ಮಸ್ಕತ್, ವಾಸ್ತು ಶಿಲ್ಪಿ ಪ್ರಮೋದ್ ಕುಮಾರ್, ಮೊದಲಾದವರು ವೇದಿಕೆಯಲ್ಲಿದ್ದರು. ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನದ ಕೋಶಾಧಿಕಾರಿ ಪದ್ಮರಾಜ್ ಆ‌ರ್. ಪೂಜಾರಿ, ಮಾಜಿ ಸಚಿವ ಬಿ. ರಮಾನಾಥ ರೈ, ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಮೊದಲಾದವರು ಶಿಲಾನ್ಯಾಸದ ಸಂದರ್ಭದಲ್ಲಿ ಪಾಲ್ಗೊಂಡರು. ದೇಯಿ ಬೈದೆತಿ ಕೋಟಿ-ಚೆನ್ನಯ ಮೂಲಸ್ಥಾನ ಕ್ಷೇತ್ರಾಡಳಿತ ಸಮಿತಿ ಗೌರವಾಧ್ಯಕ್ಷರಾದ ಗೌರವಾಧ್ಯಕ್ಷ ಪೀತಾಂಬರ ಹೆರಾಜೆ, ಜಯಂತ ನಡುಬೈಲು, ಅಧ್ಯಕ್ಷ ರವಿ ಪೂಜಾರಿ ಚಿಲಿಂಬಿ, ಉಪಧ್ಯಕ್ಷ ದೀಪಕ್ ಕೋಟ್ಯಾನ್, ಪ್ರಧಾನ ಕಾರ್ಯದರ್ಶಿ ಡಾ. ರಾಜಾರಾಮ್, ಕೋಶಾಧಿಕಾರಿ ಮೋಹನ್ ದಾಸ್ ಬಂಗೇರ, ಜತೆ ಕಾರ್ಯದರ್ಶಿಗಳಾದ ಜಯವಿಕ್ರಮ್ ಕಲ್ಲಾಪು. ಡಾ. ಸಂತೋಷ್ ಕುಮಾರ್ ಬೈರಂಪಳ್ಳಿ, ದೇಯಿ

ಬೈದೆತಿ ಕೋಟಿ-ಚೆನ್ನಯ ಮೂಲಸ್ಥಾನ ಅಭಿವೃದ್ಧಿ ಟ್ರಸ್ಟ್ ಕಾರ್ಯದರ್ಶಿ ಉಲ್ಲಾಸ್ ಕೋಟ್ಯಾನ್, ಕೋಶಾಧಿಕಾರಿ ಹರೀಶ್ ಡಿ. ಸಾಲ್ಯಾನ್ ಬಜೆಗೋಳಿ ಅತಿಥಿಗಳನ್ನು ಗೌರವಿಸಿದರು.4G59ದೇಯಿ ಬೈದೆತಿ ಕೋಟಿ ಚೆನ್ನಯ ಮೂಲಸ್ಥಾನ ಅಭಿವೃದ್ಧಿ ಟ್ರಸ್ಟ್ ಗೌರವಾಧ್ಯಕ್ಷ ಡಾ. ರಾಜಶೇಖರ ಕೋಟ್ಯಾನ್ ಸ್ವಾಗತಿಸಿದರು. ಪ್ರಜ್ಞಾ ಓಡಿಲ್ನಾಲ ಹಾಗೂ ದಿನೇಶ್ ಸುವರ್ಣ ಕಾರ್ಯಕ್ರಮ ನಿರ್ವಹಿಸಿದರು.

ಶ್ರೀ ಕ್ಷೇತ್ರದ ತಂತ್ರಿಯವರಾದ ಶಿವಾನಂದ ತಂತ್ರಿಗಳ ಪೌರೋಹಿತ್ಯದಲ್ಲಿ ಯಾತ್ರಿ ನಿವಾಸದ ಶಿಲಾನ್ಯಾಸ ಕಾರ್ಯಕ್ರಮ ನಡೆಯಿತು. ತೌಳವ ಶೈಲಿಯಲ್ಲಿ ಯಾತ್ರಿ ನಿವಾಸದ ಕಟ್ಟಡದ ನಿರ್ಮಾಣ ನಡೆಯಲಿದೆ.ಇದೇ ಸಂದರ್ಭದಲ್ಲಿ ಡಿ.3 ರಂದು ಮಂಗಳೂರು ವಿವಿ ಕ್ಯಾಂಪಸ್‌ನಲ್ಲಿ ನಡೆಯುವ ಬ್ರಹ್ಮಶ್ರೀ ನಾರಾಯಣ ಗುರು ಮತ್ತು ಮಹಾತ್ಮ ಗಾಂಧಿ ಐತಿಹಾಸಿಕ ಸಂವಾದ ಶತಮಾನೋತ್ಸವ ಕಾರ್ಯಕ್ರಮದ ಲೋಗೋ ಬಿಡುಗಡೆ ಮಾಡಲಾಯಿತು. ಪುಣ್ಯದ ಗೆಜ್ಜೆಗಿರಿ ಆಡಿಯೋ ಬಿಡುಗಡೆಗೊಳಿಸಲಾಯಿತು.

[t4b-ticker]
error: Content is protected !!