ರಾಜ್ಯ ಒಕ್ಕಲಿಗರ ಸಂಘದ ನೂತನ ಅಧ್ಯಕ್ಷರಾಗಿ ಎಲ್. ಶ್ರೀನಿವಾಸ್

Picture of Savistara

Savistara

Bureau Report

ಬೆಂಗಳೂರು: ರಾಜ್ಯ ಒಕ್ಕಲಿಗರ ಸಂಘದ ನೂತನ ಅಧ್ಯಕ್ಷರಾಗಿ ಬೆಂಗಳೂರಿನಮಾಜಿ ಉಪ ಮೇಯರ್‌ಎಲ್. ಶ್ರೀನಿವಾಸ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಹಾಲಿ ಅಧ್ಯಕ್ಷರಾಗಿದ್ದ ಬಿ. ಕೆಂಚಪ್ಪಗೌಡ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿದ್ದರಿಂದ ಚುನಾವಣೆ ಅನಿವಾರ್ಯವಾಗಿತ್ತು. ಅಧ್ಯಕ್ಷ ಗಾದಿಯ ಮೇಲೆ ಶ್ರೀನಿವಾಸ್‌ ಅವರಲ್ಲದೆ ಜಯಮುತ್ತು, ಡಾ. ಕೆ.ವಿ. ರೇಣುಕಾಪ್ರಸಾದ್ ಕಣ್ಣಿಟ್ಟಿದ್ದರು. ಚುನಾವಣೆಗೂ ಮುನ್ನ ತೆರೆಮರೆಯಲ್ಲಿ ನಡೆದ ರಾಜಕೀಯ ಚಟುವಟಿಕೆಯಿಂದ ಶ್ರೀನಿವಾಸ್ ಗೆ ಅಧಿಕಾರ ಪ್ರಾಪ್ತವಾಗಿದೆ. ನೂತನ ಪದಾಧಿಕಾರಿಗಳು: ಎಲ್‌. ಶ್ರೀನಿವಾಸ್‌ (ಅಧ್ಯಕ್ಷ), ಡಾ. ಕೆ.ವಿ. ರೇಣುಕಾಪ್ರಸಾದ್ ಮತ್ತು ಎ. ಪುಟ್ಟಸ್ವಾಮಿ (ಉಪಾಧ್ಯಕ್ಷ), ಸಿ.ಜಿ. ಗಂಗಾಧರ್ (ಪ್ರಧಾನ ಕಾರ್ಯದರ್ಶಿ), ಡಾ. ಡಿ.ಕೆ. ರಮೇಶ್‌ (ಸಹಾಯಕ ಕಾರ್ಯದರ್ಶಿ), ಕೆ.ವಿ. ಶ್ರೀಧರ್ (ಖಜಾಂಚಿ).

News Updates

ಮಂಗಳೂರಿನಲ್ಲಿ ಸ್ಮರಣಿಕೆ ತಯಾರಿಕಾ ಸಂಸ್ಥೆಯಾದ ‘ಮೈಟ್ರೀ ಕಾರ್ವಿಂಗ್ಸ್’ ನ ನೂತನ ಘಟಕ “ದಕ್ಷಿಣಾ” ದ ಶುಭಾರಂಭ | ಅತ್ಯಾಕರ್ಷಕ ಮರದ ಕೆತ್ತನೆಗಳು, ವಿಶಿಷ್ಟ ಶೈಲಿಯ ಸ್ಮರಣಿಕೆಗಳು ಹಾಗೂ ಗ್ರಾಹಕರ ಅಭಿರುಚಿಗೆ ತಕ್ಕಂತೆ ವಿನ್ಯಾಸಗೊಳಿಸಿದ ಕಲಾಕೃತಿಗಳು ಲಭ್ಯ: ಸುಜಿತ್ ಪ್ರತಾಪ್

[t4b-ticker]
error: Content is protected !!