ರಥೋತ್ಸವ ಸಂದರ್ಭದಲ್ಲಿ ಬಲಗಡೆ ಕಟ್ಟೆಗೆ ತಾಗಿ ನಿಂತ ರಥ, ವ್ಯವಸ್ಥೆಯ ಬಗ್ಗೆ ಭಕ್ತರ ಅಸಮಾಧಾನ

Picture of Savistara

Savistara

Bureau Report

ಸುಬ್ರಮಣ್ಯ:ಕುಕ್ಕೇ ಸುಬ್ರಹ್ಮಣ್ಯ ದೇವರಿಗೆ ಚಂಪಾ ಷಷ್ಠಿ ರಥೋತ್ಸವ ವಿಜೃಂಭಣೆ ಯಿಂದ ನಡೆಯಿತು. ಸಾವಿರಾರು ಭಕ್ತರು ಕಣ್ಣು ತುಂಬಿಕೊಂಡರು. ಕುಕ್ಕೆ ರಥೋತ್ಸವ ಈ ಬಾರಿ ದೇವಸ್ಥಾನ ವತಿಯಿಂದ ಪಾಸ್ ನೀಡಿದ್ದರು. ಅದನ್ನು ಮೀರಿ ಭಕ್ತರು ರಥ ಎಳೆಯಲು ಧಾವಿಸಿದ್ದು ಗೊಂದಲಕ್ಕೆ ಕಾರಣವಾಯಿತು, ಅಲ್ಲದೆ ರಥ ಬಲ ಭಾಗಕ್ಕೆ ತಿರುಗಿ ಸ್ವಲ್ಪ ಸಮಯ ನಿಲ್ಲಿಸಲಾಯಿತು. ಈ ಹಿಂದೆ ಸ್ಥಳೀಯ ಸ್ವಯಂಸೇವಕರು, ಪೊಲೀಸ್ ಇಲಾಖೆ ದೇವಸ್ಥಾನ ಸಿಬ್ಬಂದಿಗಳು ಬಿಗಿಯಾದ ಕ್ರಮ ಮೂಲಕ ನಿಯಂತ್ರಿಸುತ್ತಿದ್ದರು ಈ ಬಾರಿ ಈ ವ್ಯವಸ್ಥೆ ಸಮರ್ಪಕವಾಗಿ ಇಲ್ಲದಿರುವುದು ಗೊಂದಲಕ್ಕೆ ಕಾರಣವಾಗಿದೆ. ಅನುಭವಿ ಕಟ್ಟೆ ಕೊಡುವ ಸಿಬ್ಬಂದಿಗಳು ಮತ್ತು ಪಂಚಪರ್ವದವವರ ಚಾಕಚಕ್ಯತೆಯಿಂದ ರಥೋತ್ಸವ ಸಾಂಗವಾಗಿ ನೆರೆವೇರಿತು. ಮುಂದಿನ ವರ್ಷ ಈ ವಿಚಾರವಾಗಿ ಸಮಿತಿ ಮತ್ತು ಅಧಿಕಾರಿಗಳು ಗಂಭೀರವಾಗಿ ತೆಗೆದುಕೊಳ್ಳುವಂತೆ ಭಕ್ತರು ಮನವಿ ಮಾಡಿದ್ದಾರೆ.

[t4b-ticker]
error: Content is protected !!