ವಿಶ್ವದ ಅತ್ಯಂತ ಪವರ್‌ಫುಲ್ ನಾಯಕ ಅಂತ ಕರೆಸಿಕೊಳ್ಳುವ ಮೋದಿಯವರು, ರಾಮನ ಮುಂದೆ ಒಂದು ಕ್ಷಣ ಮಗುವಿನಂತೆ ಭಾವುಕರಾಗಿದ್ದರು (Emotional). ಮೈ ಮನಸ್ಸು ತುಂಬಿ ಬಂದಾಗ ಮಾತ್ರ ಮನುಷ್ಯನಿಗೆ ಹೀಗೆ ಆಗೋಕೆ ಸಾಧ್ಯ.
ಆ ಎರಡು ಕೈಗಳು ನಡುಗಿದ್ದು ಭಕ್ತಿಗೆ!
ಟಿವಿಯಲ್ಲಿ ಅಥವಾ ಫೋಟೋದಲ್ಲಿ ನೀವು ಸೂಕ್ಷ್ಮವಾಗಿ ಗಮನಿಸಿದರೆ ಗೊತ್ತಾಗುತ್ತೆ, ಧ್ವಜ ಮೇಲೆ ಹೋದ ನಂತರ ಮೋದಿ ಅವರು ಎರಡು ಕೈ ಜೋಡಿಸಿ ಕಣ್ಮುಚ್ಚಿ ನಮಸ್ಕಾರ ಮಾಡ್ತಾರೆ. ಆ ಸಮಯದಲ್ಲಿ ಅವರ ಬೆರಳುಗಳು ಮತ್ತು ಹಸ್ತಗಳು ಮೆಲ್ಲಗೆ ನಡುಗುತ್ತಿರುತ್ತವೆ. ಇದನ್ನೇ ನಾವು ‘ಸಾತ್ವಿಕ ಭಾವ’ ಅಂತ ಕರೆಯೋದು.
ಮನುಷ್ಯನಿಗೆ ಅತಿಯಾದ ಭಕ್ತಿ ಅಥವಾ ಆನಂದವಾದಾಗ, ಮಾತು ಬರದೇ ಇದ್ದಾಗ, ದೇಹ ತನ್ನ ಹತೋಟಿ ಕಳೆದುಕೊಂಡು ಈ ರೀತಿ ಪ್ರತಿಕ್ರಿಯೆ ನೀಡುತ್ತೆ. ಮೋದಿ ಅಲ್ಲಿ ಪ್ರಧಾನಿಯಾಗಿ ನಿಂತಿರಲಿಲ್ಲ, ಒಬ್ಬ ಪರಮ ಭಕ್ತನಾಗಿ, ತನ್ನ ಸೇವೆಯನ್ನು ರಾಮನ ಪಾದಕ್ಕೆ ಅರ್ಪಿಸಿ ನಿಂತಿದ್ದರು ಅನ್ನೋದಕ್ಕೆ ಆ ನಡುಗುವ ಕೈಗಳೇ ಸಾಕ್ಷಿ.
500 ವರ್ಷಗಳ ಭಾರ ಇಳಿಸಿದ ನಿರಾಳ ಭಾವ
ಸ್ವಲ್ಪ ಯೋಚನೆ ಮಾಡಿ, 500 ವರ್ಷಗಳ ಹೋರಾಟ ಇದು. ಕೋಟ್ಯಂತರ ಹಿಂದೂಗಳ ಕನಸನ್ನ ಹೊತ್ತುಕೊಂಡು ಮೋದಿಯವರು ಅಲ್ಲಿಗೆ ಹೋಗಿದ್ರು. “ನನ್ನ ಕೈಯಿಂದ ಈ ಕೆಲಸ ಆಗುತ್ತಾ?” ಅನ್ನೋ ಜವಾಬ್ದಾರಿ ಅವರ ಹೆಗಲ ಮೇಲಿತ್ತು. ಇವತ್ತು ಆ ಶಿಖರದ ಮೇಲೆ ಧ್ವಜ ಹಾರಾಡೋದನ್ನ ನೋಡಿದಾಗ, ಅವರ ಮನಸ್ಸಲ್ಲಿದ್ದ ಆ ಭಾರ ಇಳಿದು ಹೋದ ಹಾಗಿತ್ತು.”ನನ್ನ ಕರ್ತವ್ಯ ಮುಗೀತು, ರಾಮನಿಗೊಂದು ಸೂರು ಸಿಕ್ತು” ಅನ್ನೋ ಸಾರ್ಥಕ ಭಾವ ಅವರನ್ನ ಆವರಿಸಿತ್ತೇನೋ. ಆ ನಿರಾಳ ಭಾವವೇ ಅವರ ಕಣ್ಣಲ್ಲಿ ನೀರಾಗಿ, ಕೈಗಳಲ್ಲಿ ನಡುಕವಾಗಿ ಹೊರಹೊಮ್ಮಿತ್ತು.
ಕಠಿಣ ನಾಯಕನ ಮೃದು ಮನಸ್ಸು ಬಯಲಾದ ಕ್ಷಣ
ಸಾಮಾನ್ಯವಾಗಿ ಮೋದಿಯವರನ್ನ ನಾವು ಕಠಿಣ ನಿರ್ಧಾರ ತೆಗೆದುಕೊಳ್ಳುವ ಗಟ್ಟಿಗ ನಾಯಕನಾಗಿ ನೋಡಿರ್ತೀವಿ. ಅವರ ಮುಖದಲ್ಲಿ ಭಾವನೆಗಳು ಅಷ್ಟು ಸುಲಭವಾಗಿ ಕಾಣಲ್ಲ. ಆದ್ರೆ ಇವತ್ತು ಅಯೋಧ್ಯೆಯಲ್ಲಿ ಕಂಡಿದ್ದು ಬೇರೆಯದೇ ಮೋದಿ. ಅವರು ಅಲ್ಲಿ ಮಗುವಾಗಿದ್ರು. ರಾಮನ ಶಿಖರವನ್ನು ಅಪ್ಪಿಕೊಳ್ಳುವ ಆಸೆ ಅವರ ಕಣ್ಣಲ್ಲಿತ್ತು. ಆ ನಡುಕದಲ್ಲಿ ಒಂದು ಧನ್ಯತೆ ಇತ್ತು. ಆ ನಡುಕ ಬರೀ ಮೋದಿಯವರದ್ದಲ್ಲ, ಅದು ರಾಮ ಮಂದಿರಕ್ಕಾಗಿ ಕಾಯ್ತಿದ್ದ ಪ್ರತಿಯೊಬ್ಬ ಭಾರತೀಯನ ಎದೆಯ ಬಡಿತವಾಗಿತ್ತು.
ಇತಿಹಾಸದ ಪುಟದಲ್ಲಿ ಆ ‘ನಮಸ್ಕಾರ’ ಶಾಶ್ವತ!
ಒಟ್ಟಿನಲ್ಲಿ ಇವತ್ತು ಧ್ವಜ ಹಾರಿದ್ದು ಎಷ್ಟು ಮುಖ್ಯವೋ, ಮೋದಿಯವರ ಆ ಭಕ್ತಿಭಾವ ಕೂಡ ಅಷ್ಟೇ ಸುದ್ದಿಯಾಗಿದೆ. ರಾಮರಾಜ್ಯ ಅಂದ್ರೆ ಬರೀ ಕಟ್ಟಡ ಅಲ್ಲ, ಅದು ಸಮರ್ಪಣಾ ಭಾವ. ಇವತ್ತು ಮೋದಿಯವರು ತಮ್ಮ ನಡುಗುವ ಕೈಗಳಲ್ಲಿ ಮಾಡಿದ ಆ ನಮಸ್ಕಾರ, ಇತಿಹಾಸದ ಪುಟಗಳಲ್ಲಿ ಎಂದಿಗೂ ಅಚ್ಚಳಿಯದೆ ಉಳಿಯುತ್ತೆ. ಜೈ ಶ್ರೀರಾಮ್!













































