ತಿರುಪತಿ (ಆಂಧ್ರಪ್ರದೇಶ): ಅಮೆರಿಕ ಮೂಲದ ಭಕ್ತರೊಬ್ಬರು ತಿರುಮಲ ತಿರುಪತಿ ದೇವಸ್ಥಾನಕ್ಕೆ ₹9ಕೋಟಿ ದೇಣಿಗೆ ನೀಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಎಂ.ರಾಮಲಿಂಗ ರಾಜು ಎಂಬುವವರು ಪಿಎಸಿ-1, ಪಿಎಸಿ-2 ಮತ್ತು ಪಿಎಸಿ-3 ಕಟ್ಟಡಗಳ ನವೀಕರಣಕ್ಕಾಗಿ ₹9 ಕೋಟಿ ದೇಣಿಗೆ ನೀಡಿದ್ದಾರೆ ಎಂದು ತಿರುಮಲ ತಿರುಪತಿ ದೇವಸ್ಥಾನ ಟ್ರಸ್ಟ್‌ನ (ಟಿಟಿಡಿ) ಅಧ್ಯಕ್ಷ ಬಿ.ಆರ್.ನಾಯ್ಡು ತಿಳಿಸಿದ್ದಾರೆ.
ಈ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ನಾಯ್ಡು ಪೋಸ್ಟ್ ಹಂಚಿಕೊಂಡಿದ್ದು, ಭಕ್ತರಿಗೆ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಟಿಟಿಡಿಗೆ ನೀಡಿದ ದೇಣಿಗೆಗಾಗಿ ಟಿಟಿಡಿ ಪರವಾಗಿ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.ಈ ಹಿಂದೆಯೂ 2012ರಲ್ಲಿ ರಾಜು ಅವರು ಟಿಟಿಡಿಗೆ ₹16 ಕೋಟಿ ದೇಣಿಗೆ ನೀಡಿದ್ದರು ಎಂದೂ ಸ್ಮರಿಸಿದ್ದಾರೆ.













































