ಉಡುಪಿ ರೋಡ್ ಶೋ! ಪೊಲೀಸರಿಂದ ಸಾರ್ವಜನಿಕರಿಗೆ ಕಡ್ಡಾಯ ಸೂಚನೆಗಳು!

Picture of Savistara

Savistara

Bureau Report

ಉಡುಪಿ: ನವೆಂಬರ್ 28ರಂದು ನಡೆಯಲಿರುವ ಪ್ರಧಾನಮಂತ್ರಿಗಳ ರೋಡ್ ಶೋಗೆ ಸಂಬಂಧಿಸಿ, ಉಡುಪಿ ಜಿಲ್ಲಾ ಪೊಲೀಸರು ಸಾರ್ವಜನಿಕರಿಗೆ ಕಡ್ಡಾಯ ಪಾಲನೆಗಾಗಿ ಪ್ರಮುಖ ಸೂಚನೆಗಳನ್ನು ನೀಡಿದ್ದಾರೆ.

ಉಡುಪಿ ಜಿಲ್ಲಾ ಪೊಲೀಸ್ — ರೋಡ್‌ ಶೋನಲ್ಲಿ ಭಾಗವಹಿಸುವ ಸಾರ್ವಜನಿಕರಿಗೆ ಮುಖ್ಯ ಸೂಚನೆಗಳು

1. 28/11/2025ರ ರೋಡ್ ಶೋಗೆ ಬರುವ ಸಾರ್ವಜನಿಕರು ಬೆಳಿಗ್ಗೆ 10:30ರೊಳಗಾಗಿ ನಿಗದಿತ ಸ್ಥಳಗಳನ್ನು ತಲುಪಬೇಕು. ತಡವಾಗಿ ಬರುವವರ ಪ್ರವೇಶ ನಿರ್ಬಂಧಿತ.

2. ರೋಡ್ ಶೋ ಮಾರ್ಗದ ಎರಡೂ ಬದಿಗಳಲ್ಲಿ ಅಳವಡಿಸಿದ ಪೊಲೀಸ್ ಬ್ಯಾರಿಕೇಡ್‌ಗಳನ್ನು ದಾಟುವುದು ನಿಷೇಧ.

3. ರೋಡ್ ಶೋ ಮಾರ್ಗದಲ್ಲಿ ಕೆಳಗಿನ ವಸ್ತುಗಳನ್ನು ಕಟ್ಟುನಿಟ್ಟಿನ ನಿಷೇಧ:

• ನೀರಿನ ಬಾಟಲಿ, ಬ್ಯಾಗ್‌ಗಳು, ಹೂವಿನ ಬೊಕ್ಕೆ, ಗಿಫ್ಟ್‌ಗಳು

• ಕ್ಯಾಮೆರಾ, ಬಾಕ್ಸ್‌ಗಳು

• ಶಸ್ತ್ರಾಸ್ತ್ರಗಳು, ಚಾಕು, ಬೆಂಕಿ ಸಾಮಗ್ರಿಗಳು

• ಡ್ರೋನ್‌ಗಳು, ಸ್ಪೋಟಕ ವಸ್ತುಗಳು

• ಲೇಸರ್ ಲೈಟ್, ಧ್ವಜದ ಕಂಬಗಳು ಇತ್ಯಾದಿ

4. ಎಲ್ಲಾ ಸಾರ್ವಜನಿಕರು ಕಡ್ಡಾಯವಾಗಿ ಪೊಲೀಸ್ ಸುರಕ್ಷತಾ ಪರಿಶೀಲನೆಗೆ ಒಳಗಾಗಬೇಕು.

5. ರೋಡ್ ಶೋ ಮಾರ್ಗದ ಬಳಿ ಇರುವ ಯಾವುದೇ ಕಟ್ಟಡದ ಮೇಲೆ ಹತ್ತುವುದು ನಿಷೇಧ.

6. ಹಿರಿಯರು, ಮಹಿಳೆಯರು, ಮಕ್ಕಳಿಗೆ ಆದ್ಯತೆ ನೀಡಬೇಕು. 3 ವರ್ಷದ ಒಳಗಿನ ಮಕ್ಕಳನ್ನು ಕರೆತರಬಾರದು.

7. ಯಾವುದೇ ಸಂಶಯಾಸ್ಪದ ವ್ಯಕ್ತಿ/ವಸ್ತು ಕಂಡರೆ ತಕ್ಷಣ ಹತ್ತಿರದ ಪೊಲೀಸ್ ಸಿಬ್ಬಂದಿಗೆ ಮಾಹಿತಿ ನೀಡಬೇಕು.

8. ಯಾವುದೇ ಧ್ವಜ, ಚಿತ್ರಪಟ, ಬ್ಯಾನರ್‌ಗಳನ್ನು ತರಲು ಅನುಮತಿ ಇಲ್ಲ.

9. ಸಾರ್ವಜನಿಕರು ನೂಕುನುಗ್ಗಲು, ಗದ್ದಲ, ಉದ್ವೇಗಕಾರಿ ವರ್ತನೆ ಮಾಡಬಾರದು.

10. ಯಾವುದೇ ಸಂದರ್ಭದಲ್ಲೂ ಪೊಲೀಸ್ ಸೂಚನೆಗಳಿಗೆ ತಾಳ್ಮೆಯಿಂದ ಸಹಕರಿಸಬೇಕು.

ರೋಡ್ ಶೋ ಕಾರ್ಯಕ್ರಮಕ್ಕೆ ಬರುವವರು ಬೆಳಿಗ್ಗೆ 10:30ರೊಳಗೆ ನಿಗದಿತ ಸ್ಥಳ ಸೇರುವಂತೆ ಮನವಿ ಮಾಡಲಾಗಿದೆ. ತಡವಾಗಿ ಬರುವವರಿಗೆ ಪ್ರವೇಶ ಸಿಗುವುದಿಲ್ಲ.ಮಾರ್ಗದ ಎರಡೂ ಬದಿಗಳಲ್ಲಿ ಹಾಕಲಾಗಿರುವ ಪೊಲೀಸ್ ಬ್ಯಾರಿಕೇಡ್‌ಗಳನ್ನು ದಾಟುವುದು ಸಂಪೂರ್ಣ ನಿಷೇಧ. ಹಾಗೆಯೇ‌ ನೀರಿನ ಬಾಟಲಿ, ಬ್ಯಾಗ್‌ಗಳು, ಹೂವಿನ ಬೊಕ್ಕೆ, ಗಿಫ್ಟ್‌ಗಳು, ಕ್ಯಾಮೆರಾ, ಡ್ರೋನ್‌, ಲೇಸರ್ ಲೈಟ್, ಧ್ವಜದ ಕಂಬಗಳು ಸೇರಿದಂತೆ ಅನೇಕ ವಸ್ತುಗಳನ್ನು ತರಲು ಅನುಮತಿ ಇರುವುದಿಲ್ಲ.

ಕಾರ್ಯಕ್ರಮಕ್ಕೆ ಬರುವ ಪ್ರತಿಯೊಬ್ಬರೂ ಪೊಲೀಸ್ ಪರಿಶೀಲನೆಗೆ ಒಳಗಾಗಬೇಕಿದ್ದು, ರೋಡ್ ಶೋ ಮಾರ್ಗದ ಬಳಿಯ ಯಾವುದೇ ಕಟ್ಟಡಗಳ ಮೇಲೆ ಹತ್ತುವುದು ನಿರ್ಬಂಧಿಸಲಾಗಿದೆ.

ಸಾರ್ವಜನಿಕರು ಹಿರಿಯ ನಾಗರಿಕರು, ಮಹಿಳೆಯರು, ಮಕ್ಕಳಿಗೆ ಆದ್ಯತೆ ನೀಡಬೇಕು. 3 ವರ್ಷದ ಒಳಗಿನ ಮಕ್ಕಳನ್ನು ರೋಡ್‌ ಶೋಗೆ ಕರೆತರಬಾರದು ಎಂದು ಪೊಲೀಸರು ತಿಳಿಸಿದ್ದಾರೆ.ಯಾವುದೇ ಸಂಶಯಾಸ್ಪದ ವ್ಯಕ್ತಿ ಅಥವಾ ವಸ್ತು ಕಂಡಲ್ಲಿ ತಕ್ಷಣ ಹತ್ತಿರದ ಪೊಲೀಸ್ ಸಿಬ್ಬಂದಿಗೆ ಮಾಹಿತಿ ನೀಡಲು ಮನವಿ ಮಾಡಲಾಗಿದೆ.

ಜನಸಂದಣಿ ಪ್ರದೇಶದಲ್ಲಿ ನೂಕುನುಗ್ಗಲು, ಗದ್ದಲ, ಉದ್ವೇಗಕಾರಿ ವರ್ತನೆಗಳನ್ನು ತಪ್ಪಿಸುವುದು ಸಾರ್ವಜನಿಕರ ಜವಾಬ್ದಾರಿ.ಕೊನೆಗೆ, ಎಲ್ಲಾ ಸಂದರ್ಭಗಳಲ್ಲಿ ಪೊಲೀಸರ ಸೂಚನೆಗಳಿಗೆ ತಾಳ್ಮೆಯಿಂದ ಸಹಕರಿಸುವುದು ಎಲ್ಲರ ಭದ್ರತೆಗೆ ಅಗತ್ಯ ಎಂದು ಜಿಲ್ಲಾ ಪೊಲೀಸ್ ಇಲಾಖೆ ತಿಳಿಸಿದೆ.

[t4b-ticker]
error: Content is protected !!