ತ್ರಾಸಿ ಬೀಚ್‌, ಮರವಂತೆ ಬಂದರು ವೀಕ್ಷಿಸಿದ ಸಂಸದ ರಾಘವೇಂದ್ರ | ಗಂಗೊಳ್ಳಿ-ಕುಂದಾಪುರ ಸೇತುವೆ ನಿರ್ಮಾಣಕ್ಕೆ ಡಿಪಿಆರ್

Picture of Savistara

Savistara

Bureau Report

ಕೇಂದ್ರ ಮತ್ತು ರಾಜ್ಯ ಸರಕಾರದ ಸಹಭಾಗಿತ್ವ ದಲ್ಲಿ ಮರವಂತೆ ಬಂದರಿನ ಎರಡನೇ ಹಂತದ ಕಾಮಗಾರಿ ಕೆಲಸಕ್ಕೆ ಈಗಾಗಲೆ ಚಾಲನೆ ನೀಡಲಾಗಿದ್ದು, ಬಂದುನ ಕೆಲಸ ಪ್ರಗತಿಯಲ್ಲಿದೆ. ಮೀನುಗಾರಿಕಾ ಕ್ಷೇತ್ರದ ಬೆಳವಣಿಗೆಗೆ ಉತ್ತೇಜನ ನೀಡಿದಂತೆ ಕರಾವಳಿ ಪ್ರದೇಶದಲ್ಲಿ ಪ್ರವಾಸೋದ್ಯಮ ಚಟುವಟಿಕೆ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುತ್ತಾ ಬರಲಾಗುತ್ತಿದೆ. ಸುಮಾರು 9.95 ಕೋಟಿ ರೂ. ವೆಚ್ಚದಲ್ಲಿ ತ್ರಾಸಿ ಬೀಚ್ ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.ಬೈಂದೂರು ವಿಧಾನಸಭೆ ಕ್ಷೇತ್ರದ ವ್ಯಾಪ್ತಿಯ ಮರವಂತೆ ಬಂದರು ಎರಡನೇ ಹಂತದ ಅಭಿವೃದ್ಧಿ ಕಾಮಗಾರಿ ಕೆಲಸ ಹಾಗೂ ತ್ರಾಸಿ ಬೀಚ್ ಅಭಿವೃದ್ಧಿ ಕಾಮಗಾರಿ ಯನ್ನು ಸೋಮವಾರ ಶಾಸಕರು ಮತ್ತು ಅಧಿಕಾರಿಗಳ ತಂಡದೊಂದಿಗೆ ವೀಕ್ಷಣೆ ಮಾಡಿ ತ್ರಾಸಿಯಲ್ಲಿ ಮಾತನಾಡಿದರು.

ತ್ರಾಸಿ ಜಂಕ್ಷನ್ ಅಭಿವೃದ್ಧಿ ಅನುದಾನ ಮಂಜೂರು: ಜನ ದಟ್ಟಣೆಯಿಂದ ಕೂಡಿರುವ ತ್ರಾಸಿ ಜಂಕ್ಷನ್ ಅಭಿವೃದ್ಧಿ ಸಹಿತ ಪ್ರೈ ಓವರ್ ನಿರ್ಮಾಣಕ್ಕೆ 20 ಕೋಟಿ ರೂ. ಮಂಜೂರು ಮಾಡಲಾಗಿದೆ. ವಿಶ್ವ ಪ್ರಸಿದ್ದ ಬೀಚ್ ನೋಡಲು ಪ್ರತಿ ನಿತ್ಯ ಸಾವಿರಾರು ಪ್ರವಾಸಿಗರು ಬರುತ್ತಾರೆ. ಮಳೆ ಬಿಸಿಲಿಗೆ ಕುಳಿತು ಕೊಳ್ಳಲು ಶೆಲ್ಟರ್‌ನಂತಹ ವ್ಯವಸ್ಥೆ ಇಲ್ಲ. ಅದನ್ನು ಕಾಮಗಾರಿ ಕೆಲದಲ್ಲಿ ಸೇರಿಸಿಕೊಳ್ಳಿ ಎಂದು ಸಂಸದರು ಅಧಿ ಕಾರಿಗಳಿಗೆ ತಿಳಿಸಿದರು.ಕೊಲ್ಲೂರು ಮೂಕಾಂಬಿಕಾ ಕಾರಿಡಾರ್ ಯೋಜನೆಗೆ 100 ಕೋಟಿ ರೂ. ಅನುದಾನ ನೀಡುವಂತೆ ಮನವಿ ಮಾಡಲಾಗಿದ್ದು, ಈ ಆರ್ಥಿಕ ವರ್ಷದಲ್ಲಿ ಮಂಜೂರಾತಿ ದೊರಕುವ ವಿಶ್ವಾಸವಿದೆ. ಸೋಮೇಶ್ವರ ಮತ್ತು ತ್ರಾಸಿ ಮರವಂತೆ ಬೀಚ್, ಕೊಲ್ಲೂರು ದೇವಸ್ಥಾನ ಸೇರಿದಂತೆ ಅದರ ಜತೆಯಲ್ಲಿ ಬೈಂದೂರು ಕ್ಷೇತ್ರದಲ್ಲಿ ಪ್ರವಾಸೋದ್ಯಮ ಕ್ಷೇತ್ರಕ್ಕೆ ಆದ್ಯತೆ ನೀಡಲಾಗುತ್ತಿದೆ ಎಂದರು.

ಕೊಂಕಣ ರೈಲ್ವೆ ದ್ವಿಪಥ ಮಾರ್ಗಕ್ಕೆ ಡಿಪಿಆರ್: ಸಿಂಗಲ್ ಟ್ರ್ಯಾಕ್ ಇರುವ ಕೊಂಕಣ ರೈಲ್ವೆ ಮಾರ್ಗವನ್ನು ದ್ವಿಪಥ ಮಾರ್ಗವಾಗಿ ರೂಪಿಸಲು ಡಿಪಿಆರ್ ತಯಾರಿ ಮಾಡಲಾಗುತ್ತಿದ್ದು, ರೈಲ್ವೆ ಹಳಿ ಮಾರ್ಗವೂ ಕೂಡ ಬೈಂದೂರು ಕ್ಷೇತ್ರದಲ್ಲಿ ಅಭಿವೃದ್ಧಿಗೊಳ್ಳಲಿದೆ. ದ್ವಿಪಥ ಮಾರ್ಗದಿಂದ ರೈಲುಗಳ ಓಡಾಟ ಕೂಡ ಹೆಚ್ಚಾಗಲಿದ್ದು, ಹೆಚ್ಚಿನ ಗೂಡ್ಸ್ ರೈಲುಗಳ ಸಂಚಾರದಿಂದ ಹೆದ್ದಾರಿಯಲ್ಲಿ ವಾಹನ ದಟ್ಟಣೆ ಕೂಡ ನಿಗಲಿದೆ ಎಂದು ಸಂಸದರು ಹೇಳಿದರು.

ಕುಂದಾಪುರ-ಗಂಗೊಳ್ಳಿ ನಡುವೆ ಸೇತುವೆನಿರ್ಮಾಣಕ್ಕೆ ಡಿಪಿಆರ್: ಗಂಗೊಳ್ಳಿಭಾಗದ ಜನರು, ಮೀನುಗಾರರು ತಾಲೂಕು ಕೇಂದ್ರವನ್ನು ಸುಲಭ ವಾಗಿ ಸಂಪರ್ಕಿಸುವ ಉದ್ದೇಶದಿಂದ ಸೇತುವೆ ಅವಶ್ಯಕತೆ ಇದ್ದು, ಸಾಗರಮಾಲಾ ಯೋಜನೆಯಡಿ ನಿರ್ಮಿಸು ವಂತೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಜನವರಿ ತಿಂಗಳಿನಲ್ಲಿ ಡಿಪಿಆರ್‌ ನೀಡುವಂತೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಸೂಚನೆ ನೀಡಿದ್ದು, ಡಿಪಿಆರ್ ಸಿದ್ದಪಡಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.ಅರಾಟೆಯಲ್ಲಿ ಹೊಸ ಸೇತುವೆ ನಿರ್ಮಾಣಕ್ಕೆ 80 ಕೋಟಿ ರೂ. ವೆಚ್ಚದ ಡಿಪಿಆರ್ ತಯಾರಿ ಮಾಡಲಾಗಿದ್ದು, ಕೆಲಸ ಆರಂಭಗೊಳ್ಳಲಿದೆ. ಜಲ ಜೀವನ್ ಮಿಷನ್ ಯೋಜನೆಯ ಭಾಗವಾಗಿ ಮೊದಲ ಹಂತದಲ್ಲಿ ವೈಪ್‌ಲೈನ್ ಜೋಡಣೆ ಕೆಲಸ ಮಾಡಲಾಗಿದೆ ಎಂದರು. ಬೈಂದೂರು ಕ್ಷೇತ್ರದ ಶಾಸಕ ಗುರುರಾಜ ಗಂಟಿಹೊಳೆ ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.

ಬೈಂದೂರು ಕ್ಷೇತ್ರದಲ್ಲಿ ಮೂಲಸೌಕರ್ಯ ಮತ್ತು ಪ್ರವಾಸೋದ್ಯಮ ಚಟುವಟಿಕೆಯನ್ನು ಅಭಿವೃದ್ಧಿ ಪಡಿಸಲು ಕೊಲ್ಲೂರು ಕಾರಿಡಾರ್ ಸೇರಿದಂತೆ ಅನೇಕ ಯೋಜನೆಗಳನ್ನು ರೂಪಿಸಲಾಗಿದ್ದು ಪ್ರಗತಿಯ ಹಂತದಲ್ಲಿದೆ. ಅಭಿವೃದ್ಧಿ ಕಾರ ಗಳಿಂದ ವಾಣಿಜ್ಯ ಕ್ಷೇತ್ರ ಗರಿಗೆದರುವುದರ ಜತೆಗೆ, ಉದ್ಯೋಗಾವಕಾಶ ಕೂಡ ದೊರಕಲಿದೆ. ಪ್ರ ಧಾನಿ ಮೋದಿ ಅವರ ಆರ್ಶೀವಾದದಿಂದ ಎಲ್ಲ ಕೆಲಸ ಕಾರ್ಯಗಳು ಈಡೇರಲಿದೆ.

ಬಿ.ವೈ.ರಾಘವೇಂದ್ರಸಂಸದ, ಶಿವಮೊಗ್ಗ ಲೋಕಸಭೆ ಕ್ಷೇತ್ರ.

[t4b-ticker]
error: Content is protected !!