ಕರ್ನಾಟಕ ರಾಜ್ಯದ ಲಕ್ಷಾಂತರ ಅಯ್ಯಪ್ಪ ಸ್ವಾಮಿ ಭಕ್ತರು ಪ್ರತಿವರ್ಷ ನವೆಂಬರ್ ತಿಂಗಳಿನಿಂದ ಆರಂಭವಾಗುವ ಮಂಡಲ – ಮಕರ ಜ್ಯೋತಿ ತೀರ್ಥಯಾತ್ರೆಗಾಗಿ ಕೇರಳದ ಶಬರಿಮಲೆಗೆ ತೆರಳುತ್ತಾರೆ. ಮಕರ ಸಂಕ್ರಾಂತಿ ದಿನದ ಮಕರ ಜ್ಯೋತಿ ದರ್ಶನಕ್ಕಾಗಿ ಕರ್ನಾಟಕದ ವಿವಿಧ ಜಿಲ್ಲೆಗಳಿಂದ ಅತ್ಯಧಿಕ ಸಂಖ್ಯೆಯಲ್ಲಿ ಭಕ್ತರು ಪ್ರಯಾಣ ಮಾಡುವುದನ್ನು ಗಮನದಲ್ಲಿರಿಸಿಕೊಂಡು,
ತೀರ್ಥಯಾತ್ರಿಕರಿಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸುವ ಕುರಿತು ಶಾಸಕರಾದ ಕಿಶೋರ್ ಕುಮಾರ್ ಪುತ್ತೂರು ಅವರು ರಾಜ್ಯ ಸರ್ಕಾರದ ಗಮನಕ್ಕೆ ತಂದಿದ್ದಾರೆ.
ಕರ್ನಾಟಕ ವಿಧಾನ ಪರಿಷತ್ತಿನ ಶಾಸಕರಾದ ಕಿಶೋರ್ ಕುಮಾರ್ ಪುತ್ತೂರು ಅವರು ಮುಜರಾಯಿ ಸಚಿವರಾದ ರಾಮಲಿಂಗ ರೆಡ್ಡಿ ಅವರಿಗೆ ಪತ್ರ ಬರೆದು, ಕೆಳಕಂಡ ವ್ಯವಸ್ಥೆಗಳನ್ನು ಶಬರಿಮಲೆ ಯಾನ ಕೈಗೊಳ್ಳುವ ಕರ್ನಾಟಕದ ಅಯ್ಯಪ್ಪ ಭಕ್ತರಿಗೆ ವ್ಯವಸ್ಥೆ ಮಾಡಲು ಕೋರಿದ್ದಾರೆ .ಭಕ್ತಾಧಿಗಳಿಗೆ ಸೂಕ್ತ ವಿಶ್ರಾಂತಿ ಕೇಂದ್ರಗಳು,ಉಚಿತ ಮತ್ತು ತುರ್ತು ವೈದ್ಯಕೀಯ ನೆರವು,ಆಹಾರ – ನೀರು ಸೇರಿದಂತೆ ಮೂಲಭೂತ ಸೌಲಭ್ಯಗಳು,ಕನ್ನಡ ಭಾಷೆಯಸಹಾಯವಾಣಿ (ಹೆಲ್ಪ್‌ಲೈನ್),
ಭಕ್ತರ ವಾಹನಗಳಿಗೆ ಸುರಕ್ಷಿತ ಪಾರ್ಕಿಂಗ್ ವ್ಯವಸ್ಥೆ, ಕರ್ನಾಟಕ – ಕೇರಳ ಗಡಿಯಲ್ಲಿ ಸಮನ್ವಯ ಕ್ಯಾಂಪ್‌ಗಳ ಸ್ಥಾಪನೆ,ಕೇರಳ ಸರ್ಕಾರದೊಂದಿಗೆ ತಕ್ಷಣ ಚರ್ಚಿಸಿ ಮೇಲ್ಕಂಡ ಎಲ್ಲಾ ಸೌಲಭ್ಯಗಳ ವ್ಯವಸ್ಥೆ ಮಾಡುವಂತೆ ಶಾಸಕರು ಸಚಿವರ ಬಳಿ ವಿನಂತಿಸಿದ್ದಾರೆ.ವಿಶೇಷ ರೈಲು ವ್ಯವಸ್ಥೆಗೆ ರೈಲ್ವೆ ಸಚಿವರಿಗೆ ಸಲ್ಲಿಸಿದ ಮನವಿಅದೇ ರೀತಿ, ಅಕ್ಟೋಬರ್ 30 ರಂದು ಕೇಂದ್ರದಲ್ಲಿ ರಾಜ್ಯ ರೈಲ್ವೆ ಸಚಿವರಾದ ಶ್ರೀ ವಿ ಸೋಮಣ್ಣ ಅವರಿಗೆ ಸಲ್ಲಿಸಿದ ಮನವಿಯಲ್ಲಿ, ಮಕರ ಜ್ಯೋತಿ ಸಂದರ್ಭದಲ್ಲಿ ಕರ್ನಾಟಕದ ವಿವಿಧ ಭಾಗಗಳಿಂದ ಭಕ್ತರು ಸುಲಭವಾಗಿ ಶಬರಿಮಲೆಗೆ ತೆರಳಲು ವಿಶೇಷ ರೈಲು ಸೇವೆ ಒದಗಿಸುವಂತೆ ಕೋರಲಾಗಿತ್ತು.
ಶಾಸಕರು ಕೆಳಗಿನ ಮಾರ್ಗದಲ್ಲಿ ವಿಶೇಷ ರೈಲು ಓಡಿಸಲು ವಿನಂತಿಸಿದ್ದರು:
➡ ಹುಬ್ಬಳ್ಳಿ – ಹಾಸನ – ಸುಬ್ರಹ್ಮಣ್ಯ ರೋಡ್ – ಮಂಗಳೂರು ಜಂಕ್ಷನ್ – ಕಾಯಂಕುಳಂ ಇದಕ್ಕೆ ಧನಾತ್ಮಕವಾಗಿ ಪ್ರತಿಕ್ರಿಯಿಸಿರುವ ಸಚಿವರು, ಸಂಬಂಧಿಸಿದ ರೈಲ್ವೆ ಅಧಿಕಾರಿಗಳಿಗೆ ನಿರ್ದೇಶನ ನೀಡಿ ಈ ಬಗ್ಗೆ ಕ್ರಮ ಕೈಗೊಳ್ಳಲು ಸೂಚಿಸಿದ್ದೇವೆ ಎಂದು ಲಿಖಿತ ಉತ್ತರ ನೀಡಿದ್ದಾರೆ.
ಈ ಕುರಿತಂತೆ ಶಾಸಕರು:“ಶಬರಿಮಲೆ ಯಾತ್ರೆ ಕರ್ನಾಟಕದ ಕೋಟ್ಯಾಂತರ ಅಯ್ಯಪ್ಪ ಭಕ್ತರ ಭಾವನೆಯ ಮಾರ್ಗ. ಯಾತ್ರೆಯ ಪವಿತ್ರತೆಯ ಜೊತೆಗೆ ಭಕ್ತರ ಸುರಕ್ಷತೆ, ಆರೋಗ್ಯ ಮತ್ತು ಮೂಲಭೂತ ಸೌಲಭ್ಯಗಳು ಅತ್ಯಂತ ಮುಖ್ಯ. ರಾಜ್ಯ ಸರ್ಕಾರ ಮತ್ತು ಕೇರಳ ಸರ್ಕಾರಗಳ ಸಮನ್ವಯದಿಂದ ಇದೊಂದು ಸುಗಮ ಯಾತ್ರೆಯಾಗಲು ಬೇಕಾದ ಕ್ರಮ ಅನಿವಾರ್ಯ ಎಂದು ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.













































