ಉಡುಪಿ: ಉಡುಪಿಯ ಶ್ರೀಕೃಷ್ಣ ಮಠದಲ್ಲಿ ಹಮ್ಮಿಕೊಂಡ ಲಕ್ಷಕಂಠ ಗೀತಾ ಪಠಣ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ನಾಗರಿಕರಿಗೆ ‘ನವ ಸಂಕಲ್ಪ’ ಮಾಡುವಂತೆ ಮನವಿ ಮಾಡಿದರು.
ಎಲ್ಲರೂ ಈ ಒಂಬತ್ತು ಸಂಕಲ್ಪ ಮಾಡಿ; ವರ್ತಮಾನ ಮತ್ತು ಭವಿಷ್ಯಕ್ಕೆ ಇವು ಅಗತ್ಯ ಎಂದು ಒತ್ತಿ ಹೇಳಿದರು.
- ಮೊದಲ ಸಂಕಲ್ಪ: ಜಲಸಂರಕ್ಷಣೆ ಮಾಡುವುದು.
- ಎರಡನೇ ಸಂಕಲ್ಪ: ಮರ ಬೆಳೆಸುವುದು, ತಾಯಿಯ ಹೆಸರಲ್ಲಿ ಒಂದು ಮರ ಅಭಿಯಾನ ಆರಂಭಿಸಿ.
- ಮೂರನೇ ಸಂಕಲ್ಪ: ಪ್ರತಿಯೊಬ್ಬರೂ ಕನಿಷ್ಠಪಕ್ಷ ಒಬ್ಬ ಬಡವರ ಜೀವನ ಸುಧಾರಿಸಿ.
- ನಾಲ್ಕನೇ ಸಂಕಲ್ಪ: ಸ್ವದೇಶಿ ಅಳವಡಿಸಿಕೊಳ್ಳಿ. ವೋಕಲ್ ಲೋಕಲ್ ಮಂತ್ರ ನಮ್ಮದಾಗಲಿದೆ.
- ಐದನೇ ಸಂಕಲ್ಪ: ನೈಸರ್ಗಿಕ ಕೃಷಿ ಅಳವಡಿಸಿಕೊಳ್ಳಿ.
- ಆರನೇ ಸಂಕಲ್ಪ: ಆರೋಗ್ಯಪೂರ್ಣ ಜೀವನ ಶೈಲಿ ಅಳವಡಿಸಿಕೊಳ್ಳೋಣ. ಊಟದಲ್ಲಿ ಎಣ್ಣೆ ಕಡಿಮೆ ಮಾಡೋಣ, ಸಿರಿಧಾನ್ಯ ಬಳಸೋಣ.
- ಏಳನೇ ಸಂಕಲ್ಪ: ಯೋಗ ಅಳವಡಿಸಿಕೊಳ್ಳಿ, ಎಲ್ಲರೂ ಯೋಗಿಗಳಾಗಿ.
- ಎಂಟನೇ ಸಂಕಲ್ಪ: ಹಸ್ತಪ್ರತಿ ಸಂರಕ್ಷಣೆಗೆ ಸಹಯೋಗ ನೀಡಿ.
- ಒಂಬತ್ತನೇ ಸಂಕಲ್ಪ: ಕನಿಷ್ಠ ಪಕ್ಷ ದೇಶದ 25 ಪುಣ್ಯ ಕ್ಷೇತ್ರಗಳ ದರ್ಶನ ಮಾಡುತ್ತೇನೆ ಎಂಬ ಸಂಕಲ್ಪ ಮಾಡಿ.
2047 ಅಮೃತ ಕಾಲದ ಗುರಿಯನ್ನು ನನಸಾಗಿಸಲು ಭಾರತೀಯರು ಎಲ್ಲರೂ ತಮ್ಮ ಕರ್ತವ್ಯ ನಿಭಾಯಿಸಬೇಕು. ವಿಕಸಿತ ಕರ್ನಾಟಕ; ವಿಕಸಿತ ಭಾರತ ಸಂಕಲ್ಪ ನಮ್ಮದಾಗಲಿ ಎಂದರು.
ಮೋದಿ ಮಾತು:
ಎಲ್ಲರಿಗೂ ನಮಸ್ಕಾರ.. ಕನ್ನಡದಲ್ಲಿ ಮಾತು ಆರಂಭಿಸಿದರು. ಜೈ ಶ್ರೀಕೃಷ್ಣ ಘೋಷಣೆ ಹಾಕಿದರು.
- ತಮ್ಮ ಭಾವಚಿತ್ರ ಹಿಡಿದು ನಿಂತಿದ್ದವರಿಂದ ಮೋದಿ ಅವುಗಳನ್ನು ಪಡೆದುಕೊಳ್ಳುವಂತೆ ಎಸ್‌ಪಿಜಿ ಅವರಿಗೆ ಸೂಚಿಸಿದರು. ಹಿಂದೆ ವಿಳಾಸ ಬರೆಯಿರಿ. ನಾನು ಅಭಿನಂದನಾ ಪತ್ರ ಕಳಿಸುವೆ ಎಂದು ಹೇಳಿ ಸಮಾಧಾನ ಪಡಿಸಿದರು.
- ಜನಸಂಘ ಮತ್ತು ಮತ್ತು ಬಿಜೆಪಿಯ ಉತ್ತಮ ಆಡಳಿತದ ಮಾದರಿಯ ಕರ್ಮಭೂಮಿ ಉಡುಪಿ.ವಿಎಸ್ ಆಚಾರ್ಯ ಮತ್ತಿತರರ ಸ್ಮರಣೆ.
- ಲಕ್ಷ ಕಂಠ ಗೀತಾ ಪಠಣ ಅಭಿಯಾನ ಹಮ್ಮಿಕೊಂಡಿರುವ ಸುಗುಣೇಂದ್ರ ಶ್ರೀಗೆ ಅಭಿನಂದನೆ. ಈದು ಸನಾತನ ಸಂಸ್ಕೃತಿ ಅಭಿಯಾನ. ಇದರಿಂದ ನನಗೆ ಬಹಳ ಪ್ರೇರಣೆ ಸಿಕ್ಕಿದೆ.
- ಭಗವದ್ಗೀತೆಯೊಂದಿಗೆ ನವಪೀಳಿಗೆಯನ್ನು ಜೋಡಿಸುವ ಸತ್ಕಾರ್ಯ ಇದು.
- 25 ನವೆಂಬರ್‌ರಂದು ನಾನು ಅಯೋಧ್ಯೆಯಲ್ಲಿದೆ. ಅಯೋಧ್ಯೆಯ ರಾಮಮಂದಿರದ ಮೇಲೆ ಧರ್ಮಧ್ವಜದ ಸ್ಥಾಪನೆಯಾಗಿದೆ. ಅಯೋಧ್ಯೆಯಿಂದ ಉಡುಪಿ ವರೆಗೆ ಅಸಂಖ್ಯ ರಾಮಭಕ್ತರು ಸಂತುಷ್ಟರಾಗಿದ್ದಾರೆ. ರಾಮಮಂದಿರ ಹೋರಾಟದ ಹಾದಿ ಎಲ್ಲರಿಗೂ ಗೊತ್ತಿದೆ.
- ಜಗದ್ಗುರು ಮಧ್ವಾಚಾರ್ಯರಿಂದ ಸ್ಥಾಪನೆಯಾದ ಉಡುಪಿಯಲ್ಲಿ ವೇದಾನಂತ ಅಧ್ಯಯನ, ಭಗವಾನ್ ಶ್ರೀಕೃಷ್ಣನ ಆರಾಧನೆ ಇದೆ. ಲಕ್ಷಾಂತರ ಭಕ್ತರಿಗೆ ಅನ್ನದಾನ ಸೇವೆ ಇದೆ. ಇದು ಭಕ್ತಿ, ಆಧ್ಯಾತ್ಮಿಕತೆಯ ಸಂಗಮ ತೀರ್ಥವಾಗಿದೆ.
- ಮಧ್ವಾಚಾರ್ಯರೊಂದಿಗೆ ದಾಸ ಪರಂಪರೆಯೂ ಇಲ್ಲಿಯ ಇನ್ನೊಂದು ಕೊಡುಗೆ.
- ಕನಕದಾಸರ ಭಕ್ತಿಯೂ ದೊಡ್ಡದು.
- ಲೋಕ ಕಲ್ಯಾಣದ ಸಂದೇಶ ಭಗವದ್ಗೀತೆಯಲ್ಲಿದೆ. ಸರ್ವಜನ ಸುಖಾಯ-ಸರ್ವಜನ ಹಿತಾಯ, ಸಬ್‌ಕಾ ಸಾಥ್-ಸಬ್‌ಕಾ ವಿಕಾಸ ಇದು ಭಗವದ್ಗೀತೆಯಿಂದ ಬಂದ ಪ್ರೇರಣೆ.
- ಭಗವಾನ್ ಶ್ರೀಕೃಷ್ಣನ ಸಂದೇಶ ಪಾಲನೆಗಾಗಿ ಅತ್ಯಾಚಾರಿಗಳ ಅಂತ್ಯವೂ ಅಗತ್ಯವಾಗಿದೆ.
- ಧರ್ಮ ರಕ್ಷಣೆ; ದುಷ್ಟ ಸಂಹಾರವೂ ನಮಗೆ ಗೊತ್ತು. ಧರ್ಮಸಂದೇಶವನ್ನೂ ಕೊಡುತ್ತೇವೆ; ಅದರ ಜೊತೆಗೆ ಮಿಷನ್ ಸುದರ್ಶನ ಚಕ್ರದ ಪ್ರಯೋಗವನ್ನೂ ಮಾಡುತ್ತೇವೆ. ದೇಶವಿರೋಧಿಗಳ ಮೇಲೆಗೆ ನಮ್ಮ ಸುದರ್ಶನ ಚಕ್ರ ಪ್ರಯೋಗ. ಆಪರೇಷನ್ ಸಿಂದೂರು ಮೆಲಕು.













































