ಧರ್ಮಸ್ಥಳದಲ್ಲಿ ಕಪಟ ಸ್ವಾಮಿಗಳು ಪ್ರತ್ಯಕ್ಷ : ಮಂಕುಬೂದಿಗೆ ಎರಚಿ ಹಣ ದೋಚಿ ಎಸ್ಕೇಪ್

Picture of Savistara

Savistara

Bureau Report

‘ಅ’ಸ್ವಾಮಿಯ ಮಂಕುಬೂದಿಗೆ ಮೂರ್ಛ ಹೋದ ಮಹಿಳೆ : ಪುರುಷನಿಂದ ಹಣ ದೋಚಿ ಪರಾರಿಯಾದ ಸ್ವಾಮೀಜಿ ವೇಷಧಾರಿಗಳು!ಬೆಳ್ತಂಗಡಿ : ಸತ್ಯಸಾಯಿ ಭಕ್ತರ ಸೋಗಿನಲ್ಲಿ ಸ್ವಾಮೀಜಿಗಳ ವೇಷದಲ್ಲಿ ಸಂಶಯಾಸ್ಪದವಾಗಿ ಬಂದ ಅಪರಿಚಿತ ವ್ಯಕ್ತಿಗಳ ತಂಡವೊಂದು ಮನೆಗಳಿಗೆ ತೆರಳಿ ಭಸ್ಮ ಎರಚಿ ಭಯ ಹುಟ್ಟಿಸಿ ಹಣ ದೋಚಿ ಪರಾರಿಯಾದ ಘಟನೆ ಇಂದು ಬೆಳಿಗ್ಗೆ ಧರ್ಮಸ್ಥಳದಲ್ಲಿ ಬೆಳಕಿಗೆ w໐໖໖.ಮಹಾರಾಷ್ಟ್ರ ನೋಂದಣಿಯ ಪಿಕಪ್ ಟೆಂಪೋದಲ್ಲಿ ಶಿರ್ಡಿ ಬಾಬಾ, ಈಶ್ವರ ಮತ್ತಿತರ ದೇವರ ಚಿತ್ರಗಳನ್ನು ಅಂಟಿಸಿಕೊಂಡು ಬಂದ ಕೇಸರಿ ಮುಂಡಾಸುಧಾರಿಗಳು ಧರ್ಮಸ್ಥಳದ ಮೋಂಟ ಪೂಜಾರಿ ಎಂಬವರ ಮನೆಗೆ ಬೆಳಿಗ್ಗೆ ಬಂದು ಮಹಿಳೆಯ ಮೇಲೆ ಭಸ್ಮ ಎರಚಿ ಮೂರ್ಛ ಹೋಗಿದ್ದು ಇದೇ ಸಂದರ್ಭ ಮನೆಯಲ್ಲಿದ್ದ ಗಂಡಸು ಸ್ವಾಮೀಜಿ ವೇಷದಲ್ಲಿದ್ದ ವ್ಯಕ್ತಿಗಳಿಗೆ ದುಡ್ಡು ನೀಡಿದ್ದಾರೆ.ಇದೇ ಸಂದರ್ಭ ಘಟನೆಯ ಬಗ್ಗೆ ಸ್ಥಳೀಯರು ಗಮನಿಸಿ ಎಚ್ಚೆತ್ತುಕೊಂಡಾಗ ಸ್ವಾಮೀಜಿ ವೇಷದಲ್ಲಿದ್ದ ಕೇಸರಿ ಮುಸುಕುಧಾರಿಗಳು ಪರಾರಿಯಾಗಿದ್ದು ಸ್ಥಳೀಯವಾಗಿ ಆತಂಕ, ಗೊಂದಲದ ವಾತಾವರಣ ಉಂಟಾಗಿದೆ.ಈ ಘಟನೆಯ ಮಾಹಿತಿಯನ್ನು ಸ್ಥಳೀಯರು ಇದೀಗ ಧರ್ಮಸ್ಥಳ ಪೊಲೀಸರ ಗಮನಕ್ಕೆ ತಂದಿದ್ದಾರೆ.

News Updates

ಎಸ್‌ಐಆ‌ರ್ ವಿಚಾರದಲ್ಲಿ ಬಿಜೆಪಿ ಕಾರ್ಯಕರ್ತರ ಬೆದರಿಸಿದರೆ ಸುಮ್ಮನಿರಲ್ಲ: ಪೊಲೀಸರಿಗೆ ಸಂಸದ ಕ್ಯಾ. ಚೌಟ ಎಚ್ಚರಿಕೆ – ಕಾಂಗ್ರೆಸ್ ತನ್ನ ಆರೋಪಗಳಿಗೆ ಸೂಕ್ತ ಸಾಕ್ಷ್ಯಾಧಾರಗಳನ್ನು ಒದಗಿಸಲಿ ಅಕ್ರಮವಾಗಿ ಮತ ರದ್ದು -ಮಾಡಲಾದ ವ್ಯಕ್ತಿಯನ್ನು ತಂದು ಚುನಾವಣಾಧಿಕಾರಿ ಮುಂದೆ ನಿಲ್ಲಿಸಲಿ: ಸಂಸದ ಸವಾಲು

[t4b-ticker]
error: Content is protected !!