ಬೆಂಗಳೂರು-ಕೋಲಾರ ನೇರ ರೈಲು: ಸಂಸದ ಮಲ್ಲೇಶಬಾಬು ಆಗ್ರಹ

Picture of Savistara

Savistara

Bureau Report

ನವದೆಹಲಿ: ಬೆಂಗಳೂರು-ಕೋಲಾರ ನಡುವೆ ನೇರ ರೈಲು ಸೇವೆಯನ್ನು ಕೂಡಲೇ ಆರಂಭಿಸಬೇಕು ಎಂದು ಕೋಲಾರ ಸಂಸದ ಎಂ. ಮಲ್ಲೇಶ್ ಬಾಬು ಶುಕ್ರವಾರ ಆಗ್ರಹಿಸಿದರು.

ಲೋಕಸಭೆಯಲ್ಲಿ ಶೂನ್ಯ ವೇಳೆಯಲ್ಲಿ ಮಾತನಾಡಿದ ಅವರು, ‘ಕೋಲಾರದಿಂದ ಬೆಂಗಳೂರಿಗೆ ಉದ್ಯೋಗ ಹಾಗೂ ಶಿಕ್ಷಣ ನಿಮಿತ್ತ ಸಾವಿರಾರು ಮಂದಿ ನಿತ್ಯ ಪ್ರಯಾಣ ಮಾಡುತ್ತಾರೆ. ನೇರ ರೈಲು ಸೇವೆ ಇಲ್ಲದ ಕಾರಣ ಭಾರಿ ಸಮಸ್ಯೆ ಆಗಿದೆ. ಬಂಗಾರಪೇಟೆ ಮೂಲಕ ಹೋಗಬೇಕಿದೆ. ಇದರಿಂದ ಸಮಯ ವ್ಯರ್ಥ ಆಗುತ್ತಿದೆ’ ಎಂದು ಗಮನ ಸೆಳೆದರು.’ಕೋಲಾರ-ವೈಟ್‌ಫೀಲ್ಡ್ ನಡುವೆ (52 ಕಿ.ಮೀ) ನೇರ ರೈಲು ಯೋಜನೆಗೆ 2012ರಲ್ಲೇ ಅನುಮೋದನೆ ನೀಡಲಾಗಿದೆ. ಸರ್ವೆ ಸಹ ಮುಗಿದಿದೆ. 13 ವರ್ಷ ಕಳೆದರೂ ಯಾವುದೇ ಪ್ರಗತಿ ಆಗಿಲ್ಲ. ರೈಲು ಸೇವೆ ಆರಂಭಿಸಲು ರೈಲ್ವೆ ಸಚಿವರು ಕೂಡಲೇ ಗಮನ ಹರಿಸಬೇಕು’ ಎಂದು ಮನವಿ ಮಾಡಿದರು.“ಬಂಗಾರಪೇಟೆ-ಕೆಜಿಎಫ್ ಮೂಲಕ ಬೆಂಗಳೂರಿಗೆ ಸಾಗುವ ರೈಲಿನಲ್ಲಿ ಪ್ರತಿನಿತ್ಯ ದಟ್ಟಣೆ ಉಂಟಾಗುತ್ತಿದೆ. 12 ಬೋಗಿಗಳು ಇರುವುದೇ ಇದಕ್ಕೆ ಕಾರಣ. ಬೋಗಿಗಳ ಸಂಖ್ಯೆಯನ್ನು 18ಕ್ಕೆ ಹೆಚ್ಚಿಸಬೇಕು’ ಎಂದು ಒತ್ತಾಯಿಸಿದರು.

News Updates

ಎಸ್‌ಐಆ‌ರ್ ವಿಚಾರದಲ್ಲಿ ಬಿಜೆಪಿ ಕಾರ್ಯಕರ್ತರ ಬೆದರಿಸಿದರೆ ಸುಮ್ಮನಿರಲ್ಲ: ಪೊಲೀಸರಿಗೆ ಸಂಸದ ಕ್ಯಾ. ಚೌಟ ಎಚ್ಚರಿಕೆ – ಕಾಂಗ್ರೆಸ್ ತನ್ನ ಆರೋಪಗಳಿಗೆ ಸೂಕ್ತ ಸಾಕ್ಷ್ಯಾಧಾರಗಳನ್ನು ಒದಗಿಸಲಿ ಅಕ್ರಮವಾಗಿ ಮತ ರದ್ದು -ಮಾಡಲಾದ ವ್ಯಕ್ತಿಯನ್ನು ತಂದು ಚುನಾವಣಾಧಿಕಾರಿ ಮುಂದೆ ನಿಲ್ಲಿಸಲಿ: ಸಂಸದ ಸವಾಲು

[t4b-ticker]
error: Content is protected !!