2026ರ ಸಾರ್ವತ್ರಿಕ ರಜೆ ಪಟ್ಟಿಗೆ ಸರ್ಕಾರ ಅನುಮೋದನೆ; 20 ದಿನ ಸರ್ಕಾರಿ ರಜೆ! ಯಾವೆಲ್ಲಾ?

Picture of Savistara

Savistara

Bureau Report

ಬೆಂಗಳೂರು: 2026ರ ಸಾರ್ವತ್ರಿಕ ರಜೆ ಪಟ್ಟಿಗೆ ಕರ್ನಾಟಕ ಸರ್ಕಾರ ಅನುಮೋದನೆ ನೀಡಿದೆ. ರಾಷ್ಟ್ರೀಯ ಹಬ್ಬಗಳು, ನಾಡ ಹಬ್ಬ ಸೇರಿದಂತೆ ಮುಂದಿನ ವರ್ಷ ಒಟ್ಟು 20 ದಿನಗಳು ಸರ್ಕಾರಿ ರಜೆ ಇರಲಿದೆ.

ಗುರುವಾರ ಬೆಂಗಳೂರಿನ ವಿಧಾನಸೌಧದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಸಾರ್ವತ್ರಿಕ ರಜೆ ಪಟ್ಟಿಗೆ ಸರ್ಕಾರ ಒಪ್ಪಿಗೆ ನೀಡಿದೆ. ಮುಂದಿನ ವರ್ಷ ಎಲ್ಲಾ ಸರ್ಕಾರಿ ಕಚೇರಿಗಳಿಗೆ, ಶಾಲೆಗಳಿಗೆ, ಸಂಸ್ಥೆಗಳಿಗೆ ಈ ರಜೆಗಳು ಅನ್ವಯವಾಗಲಿದೆ. ಎಲ್ಲಾ ಎರಡನೇ ಶನಿವಾರ, ನಾಲ್ಕನೇ ಶನಿವಾರ ಮತ್ತು ಭಾನುವಾರಗಳು ರಜೆ ಇರಲಿದೆ.

ಭಾನುವಾರ ಬರುವ ಹಬ್ಬಗಳು ರಜೆ ಪಟ್ಟಿಯಲ್ಲಿ ಇಲ್ಲಭಾನುವಾರಗಳಂದು ಬರುವ ಮಹಾ ಶಿವರಾತ್ರಿ (ಫೆಬ್ರವರಿ 15), ಮಹರ್ಷಿ ವಾಲ್ಮೀಕಿ ಜಯಂತಿ (ಅಕ್ಟೋಬರ್ 25), ಕನ್ನಡ ರಾಜ್ಯೋತ್ಸವ (ನವೆಂಬರ್ 1) ಹಾಗೂ ನರಕ ಚತುರ್ದಶಿ (ನವೆಂಬರ್ 8) ಎರಡನೇ ಶನಿವಾರದಂದು ಬರುವ ಮಹಾಲಯ ಅಮವಾಸ್ಯೆ (ಅಕ್ಟೋಬರ್ 10) ರಜೆ ಪಟ್ಟಿಯಲ್ಲಿ ನಮೂದಿಸಿರುವುದಿಲ್ಲ.

ಮುಸಲ್ಮಾನ ಬಾಂಧವರ ಹಬ್ಬಗಳು ನಿಗದಿತ ದಿನಾಂಕದಂದು ಬೀಳದಿದ್ದರೆ ಸರ್ಕಾರಿ ಸೇವೆಯಲ್ಲಿರುವ ಮುಸಲ್ಮಾನ ಬಾಂಧವರಿಗೆ ನಿಗದಿತ ರಜೆಗೆ ಬದಲಾಗಿ ಹಬ್ಬದ ದಿವಸ ರಜಾ ಮಂಜೂರು ಮಾಡಬಹುದು. (ನವೆಂಬರ್ 2025 ಬ್ಯಾಂಕ್‌ ರಜೆಗಳ ಪಟ್ಟಿ)

ಹುತ್ತರಿ ಹಬ್ಬಕ್ಕೆ ಕೊಡಗು ಜಿಲ್ಲೆಯ ರಜೆ03.09.2026 (ಗುರುವಾರ) ಕೈಲ್ ಮೂಹೂರ್ತ, ದಿನಾಂಕ:18.10.2026 (ಭಾನುವಾರ) ತುಲಾ ಸಂಕ್ರಮಣ ಹಾಗೂ ದಿನಾಂಕ:26.11.2026 (ಗುರುವಾರ) ಹುತ್ತರಿ ಹಬ್ಬವನ್ನು ಆಚರಿಸಲು ಕೊಡಗು ಜಿಲ್ಲೆಗೆ ಮಾತ್ರ ಅನ್ವಯವಾಗುವಂತೆ ಸ್ಥಳೀಯ ಸಾರ್ವತ್ರಿಕ ರಜೆಯನ್ನು ಘೋಷಿಸಿದೆ.

21 ಪರಿಮಿತ ರಜೆಗಳು

ಸಾರ್ವತ್ರಿಕ ರಜಾದಿನಗಳ ಜೊತೆಗೆ ನಿಗಮದ ಉದ್ಯೋಗಿಗಳು 2026 ನೇ ವರ್ಷದಲ್ಲಿ ಪರಿಮಿತ ರಜೆಗಳಲ್ಲಿ ಎರಡು ದಿನಗಳಿಗೆ ಮೀರದಂತೆ ಉಪಯೋಗಿಸಿಕೊಳ್ಳಬಹುದು. ಈ ಹಬ್ಬಗಳ ಸಂದರ್ಭದಲ್ಲಿ ಪರಿಮಿತ ರಜೆಯನ್ನು ಉಪಯೋಗಿಸಿಕೊಳ್ಳಲು ಅನುಮತಿಗಾಗಿ ಅರ್ಜಿಯನ್ನು ಮುಂಚಿತವಾಗಿ ಸಲ್ಲಿಸತಕ್ಕದ್ದು ಮತ್ತು ಸಾಂದರ್ಭಿಕ ರಜೆಯನ್ನು ಮಂಜೂರು ಮಾಡಲು ಅಧಿಕಾರವುಳ್ಳ ಅಧಿಕಾರಿಯು ಮಂಜೂರು ಮಾಡಬಹುದು.

2026 ರ ಪರಿಮಿತ ರಜೆಗಳ ಪಟ್ಟಿ

  • ಜನವರಿ 1, ಗುರುವಾರ – ಹೊಸ ವರ್ಷ
  • ಜನವರಿ 27, ಮಂಗಳವಾರ – ಮದ್ವನವಮಿ
  • ಫೆಬ್ರವರಿ 2, ಬುಧವಾರ – ಷಬ್-ಎ- ಭಾರತ್
  • ಮಾರ್ಚ್ 2, ಸೋಮವಾರ – ಹೋಳಿಮಾರ್ಚ್‌ 17, ಮಂಗಳವಾರ – ಷಬ್-ಎ-ಖಾದರ್ಮ
  • ಮಾರ್ಚ್‌ 20, ಶುಕ್ರವಾರ – ಜುಮತ್-ಉಲ್-ವಿದಾ
  • ಮಾರ್ಚ್‌ 23, ಸೋಮವಾರ – ದೇವರ ದಾಸೀಮಯ್ಯ ಜಯಂತಿ
  • ಮಾರ್ಚ್‌ 27, ಶುಕ್ರವಾರ – ರಾಮನವಮಿ
  • ಏಪ್ರಿಲ್ 4, ಶನಿವಾರ – ಹೋಲಿ ಸ್ಯಾಟರ್ ಡೇ
  • ಏಪ್ರಿಲ್‌ 21, ಮಂಗಳವಾರ – ಶಂಕರಾಚಾರ್ಯ ಜಯಂತಿ
  • ಏಪ್ರಿಲ್‌ 22, ಬುಧವಾರ – ರಾಮಾನುಜಾಚಾರ್ಯ ಜಯಂತಿ
  • ಆಗಸ್ಟ್‌ 21, ಶುಕ್ರವಾರ – ವರಮಹಾಲಕ್ಷ್ಮೀ ವ್ರತ
  • ಆಗಸ್ಟ್‌ 27, ಗುರುವಾರ – ಯಜುರ್ ಉಪಕರ್ಮ
  • ಆಗಸ್ಟ್‌ 28, ಶುಕ್ರವಾರ – ನಾರಾಯಣ ಗುರು ಜಯಂತಿ/ ರಕ್ಷಾ ಬಂಧನ
  • ಸೆಪ್ಟೆಂಬರ್ 4, ಶುಕ್ರವಾರ – ಕೃಷ್ಣ ಜನ್ಮಾಷ್ಟಮಿ
  • ಸೆಪ್ಟೆಂಬರ್ 8, ಮಂಗಳವಾರ – ಕನ್ಯಾ ಮರಿಯಮ್ಮ ಜಯಂತಿ
  • ಸೆಪ್ಟೆಂಬರ್ 17, ಗುರುವಾರ – ವಿಶ್ವಕರ್ಮ ಜಯಂತಿ
  • ಸೆಪ್ಟೆಂಬರ್ 25, ಶುಕ್ರವಾರ – ಅನಂತಪದ್ಮನಾಭ ವ್ರತ
  • ನವೆಂಬರ್ 24, ಮಂಗಳವಾರ – ಗುರು ನಾನಕ್ ಜಯಂತಿ
  • ನವೆಂಬರ್ 26, ಗುರುವಾರ – ಹುತ್ತರಿ ಹಬ್ಬ
  • ಡಿಸೆಂಬರ್ 24, ಗುರುವಾರ – ಕ್ರಿಸ್‌ಮಸ್ ಈವ್

2026 ರಲ್ಲಿ ಒಟ್ಟು ಎಷ್ಟು ರಜೆಗಳು?

  • ಭಾನುವಾರಗಳು – 52 ದಿನ
  • 2 ನೇ ಶನಿವಾರ – 12
  • 4 ನೇ ಶನಿವಾರ – 12
  • ಹಬ್ಬಗಳಿಗೆ ಸರ್ಕಾರಿ ರಜೆ – 20 20 ದಿನ
  • ಒಟ್ಟು ರಜೆಗಳು – 96 ದಿನಗಳು
[t4b-ticker]
error: Content is protected !!