ಫೆಬ್ರವರಿ 6 ಶುಕ್ರವಾರದಂದು ಚಿನ್ನ ಮತ್ತೆ ಕುಸಿತದ ಹಾದಿಯಲ್ಲಿ ಮುಂದುವರಿದಿದೆ. ಅಮೆರಿಕನ್ ಡಾಲರ್ ದುರ್ಬಲವಾಗಿದ್ದಾಗ ಚಿನ್ನದ ಬೆಲೆಯಲ್ಲಿ ಏರಿಕೆ ಕಂಡು ಬಂದಿತ್ತು. ಇದೀಗ ಅಮೆರಿಕದಲ್ಲಿ ಡೊನಾಲ್ಡ್ ಟ್ರಂಪ್ ಕೈಗೊಂಡ ಕ್ರಮಗಳು ಮತ್ತು ವಿವಿಧ ದೇಶಗಳ ಜೊತೆಗಿನ ಒಪ್ಪಂದ ಸೇರಿದಂತೆ ಹಲವಾರು ಕಾರಣಗಳಿಂದ ಅಮೆರಿಕದ ಡಾಲರ್ ಬಲಗೊಂಡಿದೆ. ಡಾಲರ್ ಎರಡು ವಾರಗಳ ಗರಿಷ್ಠ ಮಟ್ಟವನ್ನು ತಲುಪಿದ್ದು, ಚಿನ್ನದ ಬೆಲೆ ಕುಸಿತಕ್ಕೆ ಕಾರಣವಾಗಿದೆ.
ಹೊಸವರ್ಷದ ಮೊದಲ ವಾರದಿಂದಲೇ ಬರೋಬ್ಬರಿ ಏರಿಕೆಯ ಹಾದಿಯಲ್ಲಿದ್ದ ಚಿನ್ನ ಈ ವಾರದೊಳಗೆ ಶೇ 3.9ರಷ್ಟು ಕುಸಿತ ಕಂಡಿದೆ. ಹೂಡಿಕೆದಾರರು ಲಾಭ ಗಳಿಕೆಗಾಗಿ ಮಾರಾಟ ಮಾಡಲು ಆರಂಭಿಸಿರುವುದೂ ಚಿನ್ನದ ಬೆಲೆ ಕುಸಿತಕ್ಕೆ ಕಾರಣವಾಗಿದೆ.
ಮಂಗಳೂರಿನಲ್ಲಿ ಇಂದಿನ ಚಿನ್ನದ ದರವೆಷ್ಟು?
ಶುಕ್ರವಾರ (ಫೆಬ್ರವರಿ 6ರಂದು) ಬೆಳಗಿನ 11 ಗಂಟೆಯ ವಹಿವಾಟಿನಲ್ಲಿ ಮಂಗಳೂರಿನಲ್ಲಿ ಚಿನ್ನದ ಬೆಲೆ ಮತ್ತೆ ಕುಸಿತ ಕಂಡಿದೆ. ಬೆಳಗಿನ ವಹಿವಾಟಿನಲ್ಲಿ ಒಂದು ಗ್ರಾಂ 24 ಕ್ಯಾರೆಟ್ ಚಿನ್ನದ ದರ 15,235 (-207) ರೂ.ಗೆ ಕುಸಿದಿದೆ. ಒಂದು ಗ್ರಾಂ 22 ಕ್ಯಾರೆಟ್ ಚಿನ್ನದ ದರ 13,965 (-190) ರೂ. ಮತ್ತು ಒಂದು ಗ್ರಾಂ 18 ಕ್ಯಾರೆಟ್ ಚಿನ್ನದ ದರ 11,426 (-156) ರೂ. ಬೆಲೆಗೆ ತಲುಪಿದೆ.
ಬೆಳ್ಳಿಯ ಬೆಲೆಯಲ್ಲೂ ಕುಸಿತ
ಗುರುವಾರ ಕುಸಿತ ಕಂಡಿದ್ದ ಬೆಳ್ಳಿ ಶುಕ್ರವಾರವೂ ಮಾರುಕಟ್ಟೆ ತೆರೆದ ತಕ್ಷಣ ಕುಸಿತ ಕಂಡಿದೆ. ಇಂದು ಗ್ರಾಂಗೆ 25ರೂ.ನಷ್ಟು ಕುಸಿದ ಬೆಳ್ಳಿ ಕೆಜಿಗೆ 2,75,000 ಲಕ್ಷ ರೂ. ಗೆ ಬಂದು ನಿಂತಿದೆ.
ವಿವಿಧ ನಗರಗಳಲ್ಲಿ 1 ಗ್ರಾಂ ಚಿನ್ನದ ದರ (ಬೆಳಗಿನ ವಹಿವಾಟು) ಹೇಗಿದೆ?
ದಿಲ್ಲಿ : 24 ಕ್ಯಾರೆಟ್ ಚಿನ್ನದ ದರ 15,250 (-207) ರೂ , 22 ಕ್ಯಾರೆಟ್ ಚಿನ್ನದ ದರ 13,980 (-190) ರೂ.
ಮುಂಬೈ: 24 ಕ್ಯಾರೆಟ್ ಚಿನ್ನದ ದರ 15,235 (-207) ರೂ., 22 ಕ್ಯಾರೆಟ್ ಚಿನ್ನದ ದರ 13,965 (-190) ರೂ.
ಅಹಮದಾಬಾದ್: 24 ಕ್ಯಾರೆಟ್ ಚಿನ್ನದ ದರ 15,240 (-207) ರೂ ., 22ಕ್ಯಾರೆಟ್ ಚಿನ್ನದ ದರ 13,970 (-190) .
ಚೆನ್ನೈ: 24 ಕ್ಯಾರೆಟ್ ಚಿನ್ನದ ದರ 15,404 (-218) ರೂ., 22 ಕ್ಯಾರೆಟ್ ಚಿನ್ನದ ದರ 14,120 (-200) ರೂ.
ಕೋಲ್ಕತ್ತಾ: 24 ಕ್ಯಾರೆಟ್ ಚಿನ್ನದ ದರ 15,235 (-207) ರೂ., 22 ಕ್ಯಾರೆಟ್ ಚಿನ್ನದ ದರ 13,965 (-190) ರೂ.
ಹೈದರಾಬಾದ್: 24 ಕ್ಯಾರೆಟ್ ಚಿನ್ನದ ದರ 15,235 (-207) ರೂ., 22 ಕ್ಯಾರೆಟ್ ಚಿನ್ನದ ದರ 13,965 (-190)ರೂ .
ಜೈಪುರ: 24 ಕ್ಯಾರೆಟ್ ಚಿನ್ನದ ದರ 15,235 (-207) ರೂ., 22 ಕ್ಯಾರೆಟ್ ಚಿನ್ನದ ದರ 13,965 (-190) ರೂ.
ಭೋಪಾಲ್: 24 ಕ್ಯಾರೆಟ್ ಚಿನ್ನದ ದರ 15,240 (-207) ರೂ., 22 ಕ್ಯಾರೆಟ್ ಚಿನ್ನದ ದರ 13,970 (-190) ರೂ .
ಲಕ್ಕೋ: 24 ಕ್ಯಾರೆಟ್ ಚಿನ್ನದ ದರ 15,250 (-207) ರೂ., 22 ಕ್ಯಾರೆಟ್ ಚಿನ್ನದ ದರ 13,980 (-190) ರೂ.
ಚಂಡೀಗಢ: 24 ಕ್ಯಾರೆಟ್ ಚಿನ್ನದ ದರ 15,250 (-207) ರೂ., 22 ಕ್ಯಾರೆಟ್ ಚಿನ್ನದ ದರ 13,980 (-190) ರೂ.











































