ಸ್ಪೀಕ‌ರ್ ಹುದ್ದೆಯಿಂದ ಓಂ ಬಿರ್ಲಾ ಪದಚ್ಯುತಿಗೆ ವಿರೋಧ ಪಕ್ಷಗಳಿಂದ ನೋಟಿಸ್‌ ಸಲ್ಲಿಕೆ

Picture of Savistara

Savistara

Bureau Report

ನವದೆಹಲಿ: ಸ್ಪೀಕ‌ರ್ ಹುದ್ದೆಯಿಂದ ಓಂ ಬಿರ್ಲಾ ಅವರನ್ನು ಪದಚ್ಯುತಗೊಳಿಸಲು ವಿರೋಧ ಪಕ್ಷಗಳು ಮಂಗಳವಾರ ನೋಟಿಸ್‌ ನೀಡಿವೆ.

ಓಂ ಬಿರ್ಲಾ ಪದಚ್ಯುತಗೊಳಿಸುವ ನೋಟಿಸ್‌ಗೆ 119 ಸಂಸದರು ಸಹಿ ಹಾಕಿದ್ದು, ಟಿಎಂಸಿ ಸಂಸದರು ಇದರಿಂದ ದೂರ ಉಳಿದಿದ್ದಾರೆ.ಸಂಸತ್ತಿನಲ್ಲಿ ಈ ಬಗ್ಗೆ ಚರ್ಚೆ ನಡೆದಾಗ ಬೆಂಬಲಿಸುವುದಾಗಿ ಟಿಎಂಸಿ ಮೂಲಗಳು ತಿಳಿಸಿವೆ.ನಿಯಮಗಳ ಪ್ರಕಾರ ನೋಟಿಸ್‌ ಸಲ್ಲಿಸಿದ 14 ದಿನಗಳ ಬಳಿಕವಷ್ಟೇ ಚರ್ಚೆಗೆ ಬರಲಿದೆ. ನೋಟಿಸ್‌ ಪುರಸ್ಕೃತವಾದ ಬಳಿಕವಷ್ಟೇ ಲೋಕಸಭೆಯಲ್ಲಿ ಚರ್ಚೆಗೆ ಬರಲಿದೆ.

ಸಂವಿಧಾನದ 94ಸಿ ವಿಧಿಯಡಿ ನೋಟಿಸ್ ಸಲ್ಲಿಸಲಾಗಿದೆ ಎಂದು ಲೋಕಸಭೆಯಲ್ಲಿ ಕಾಂಗ್ರೆಸ್ ಉಪನಾಯಕ ಗೌರವ್ ಗೋಗೋಯ್ ತಿಳಿಸಿದ್ದಾರೆ.ಸ್ಪೀಕ‌ರ್ ಅವರನ್ನು ಪದ್ಯಚುತಗೊಳಿಸಬೇಕು ಎಂದು ನೋಟಿಸ್‌ ಸಲ್ಲಿಕೆಯಾಗುತ್ತಿರುವುದು ಇದು ನಾಲ್ಕನೇ ಬಾರಿ.ಈ ಹಿಂದೆ 1954ರಲ್ಲಿ ಜಿ.ವಿ ಮವಳಂಕರ್ ಹಾಗೂ 1987ರಲ್ಲಿ ಬಲರಾಮ್ ಜಾಖರ್‌ ಅವರನ್ನು ಸ್ಪೀಕ‌ರ್ ಹುದ್ದೆಯಿಂದ ಪದಚ್ಯುತಗೊಳಿಸಬೇಕು ಎಂದು ನೋಟಿಸ್ ನೀಡಲಾಗಿತ್ತು. ಆದರೆ ಅದಕ್ಕೆ ಸೋಲಾಗಿತ್ತು. 1966ರಲ್ಲಿ ಹುಕ್ಕಂ ಸಿಂಗ್‌ ಅವರ ವಿರುದ್ಧ ನೀಡಿದ್ದ ನೋಟಿಸ್‌ನಲ್ಲಿ ಕನಿಷ್ಠ 50 ಸಂಸದರ ಹೆಸರಿಲ್ಲದ ಕಾರಣ ಆ ನಿಲುವಳಿ ತಿರಸ್ಕೃತವಾಗಿತ್ತು.

News Updates

BREAKING NEWS ಸುಳ್ಯ :ಪಂಜ ಕಾಂಗ್ರೆಸ್ ಪಕ್ಷದ ಹುದ್ದೆಗೆ ರಾಜಿನಾಮೆ ನೀಡಿದ ದಿನೇಶ್ ಪುಂಡಿಮನೆ, ಕುಸುಮಾಧರ ಕೆರೆಯಡ್ಕ,ಲೋಕನಾಥ್ ಕುದ್ವ |ನಮ್ಮ ಮಾತನ್ನು ಪಕ್ಷದ ನಾಯಕರು ಉಳಿಸಿಕೊಂಡಿಲ್ಲ, ದೇವಸ್ಥಾನ ವ್ಯವಸ್ಥೆ ಸರಿದಾರಿಗೆ ತರುವ ಕೆಲಸವಾಗಲಿ: ದಿನೇಶ್ ಪುಂಡಿಮನೆ

News Updates

ಬೆಳ್ತಂಗಡಿ : ಮೊಗ್ರು ಜೈ ಶ್ರೀರಾಮ ಸೇವಾ ಟ್ರಸ್ಟ್ ಅಲೆಕ್ಕಿ -ಮುಗೇರಡ್ಕ ಮೊಗ್ರು, ಶ್ರೀ ರಾಮ ಶಿಶುಮಂದಿರದ 5 ನೇ ವರ್ಷದ ಶ್ರೀ ಕೃಷ್ಣೋತ್ಸವ. |ಕಾಶಿ ಶೆಟ್ಟಿ ನವಶಕ್ತಿ ಗುರುವಾಯನಕೆರೆ ಇವರ ಸ್ಮರಣಾರ್ಥ ಕಾಶಿ ಶೆಟ್ಟಿ ವಿದ್ಯಾ ಮಂದಿರ, ಹಾಗೂ ಶಾಸಕ ಹರೀಶ್ ಪೂಂಜಾರವರ ನೆರವಿನ ಅಡುಗೆ ಕೋಣೆ ಉದ್ಘಾಟನಾ ಕಾರ್ಯಕ್ರಮ |ಮಕ್ಕಳ ಶ್ರೀಕೃಷ್ಣ ಮತ್ತು ರಾಧೆಯರ ಸ್ಪರ್ಧೆ, ಮೊಸರು ಕುಡಿಕೆ, ಆಟೋಟ ಸ್ಪರ್ಧೆ

[t4b-ticker]
error: Content is protected !!