ಬೆಂಗಳೂರು- ಮಂಗಳೂರು ಕಾರಿಡಾರ್ ವಿಸ್ತರಣೆಗೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಸಲಹೆ

Picture of Savistara

Savistara

Bureau Report

ಮೂರು ಪ್ರಮುಖ ಬಂದರುಗಳನ್ನು ಜೋಡಿಸುವ ಬೆಂಗಳೂರಿ ನಿಂದ- ಮಂಗಳೂರಿನವರೆಗೆ ಕೈಗಾರಿಕಾ ಕಾರಿಡಾರ್ ವಿಸ್ತರಣೆ ಹಾಗೂ ಹಲಸು, ಹುಣಸೆ, ನೇರಳೆ ಮಂಡಳಿ ರಚಿಸುವಂತೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಆಗ್ರಹಿಸಿದ್ದಾರೆ. ರಾಜ್ಯಸಭೆಯಲ್ಲಿ ಬುಧವಾರ ಬಜೆಟ್ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡ ಅವರು, ”ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ 2026-27ನೇ ಸಾಲಿನ ಕೇಂದ್ರ ಬಜೆಟ್ ರಾಷ್ಟ್ರದ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾಗಿದೆ,”ಎಂದು ಬಣ್ಣಿಸಿದರು. ”ಈಗಾಗಲೇ ಚೆನ್ನೈನಿಂದ ಬೆಂಗಳೂರು ಮತ್ತು ಹೈದರಾಬಾದ್‌ನಿಂದ ಬೆಂಗಳೂರು ನಡುವಿನ ಪ್ರಮುಖ ಬಂದರುಗಳನ್ನು ಹೊಂದಿರುವ ಕೈಗಾರಿಕಾ ಕಾರಿಡಾರ್ ಯೋಜನೆಗಳಿಗೆ ಅನುಮೋದನೆ ನೀಡುವ ಸರಕಾರದ ನಿರ್ಧಾರ ಸ್ವಾಗತಾರ್ಹ. ಅದೇರೀತಿ, ಬೆಂಗಳೂರಿನಿಂದ ಮಂಗಳೂರಿನವರೆಗೆ ಈ ಕೈಗಾರಿಕಾ ಕಾರಿಡಾರ್ ವಿಸ್ತರಿಸಿದರೆ ಕೈಗಾರಿಕಾ ಅಭಿವೃದ್ಧಿಗೆ ಬಹಳಷ್ಟು ಅನುಕೂಲವಾಗಲಿದೆ. ಮಂಗಳೂರು ಕೂಡ ಪ್ರಮುಖ ಬಂದರು ಆಗಿದ್ದು, ವಿಶಾಖಪಟ್ಟಣ, ಚೆನ್ನೈ ಹಾಗೂ ಮಂಗಳೂರು ಬಂದರುಗಳನ್ನು ಜೋಡಿಸಿದರೆ ರಾಷ್ಟ್ರದ ಕೈಗಾರಿಕಾ ಅಭಿವೃದ್ಧಿಗೆ ಪರಿವರ್ತನಾತ್ಮಕ ವೇಗ ಬರಲಿದೆ,” ಎಂದು ಸಲಹೆ ನೀಡಿದರು.

ಪ್ರತ್ಯೇಕ ಮಂಡಳಿ ರಚನೆಗೆ ಸಲಹೆ: “ಕರ್ನಾಟಕ ಸೇರಿದಂತೆತಮಿಳುನಾಡು, ಕೇರಳ ಇತರೆ ರಾಜ್ಯಗಳಲ್ಲಿ ಬೆಳೆಯಲಾಗುವ ಹಲಸು, ಹುಣಸೆ, ನೇರಳೆಗೆ ಉತ್ತೇಜನ ನೀಡಲು ಮಕಾನ ಮಂಡಳಿಯಂತೆ ಪ್ರತ್ಯೇಕ ಮಂಡಳಿ ರಚಿಸಬೇಕು. ಈ ಮೂರು ಬೆಳೆಗಳು ಔಷಧೀಯ ಗುಣ ಹೊಂದಿದ್ದು, ದಕ್ಷಿಣದ ಭಾಗದಲ್ಲಿ ವ್ಯಾಪಕವಾಗಿ ಬೆಳೆಯಲಾಗುತ್ತಿದೆ. ಇವೆಲ್ಲಾ ಕಡಿಮೆ ಮಳೆ ಅಗತ್ಯವಿರುವ ಬೆಳೆಗಳಾಗಿವೆ. ಈ ಸಂಬಂಧ ಪ್ರಧಾನಿ ಮೋದಿ ಹಾಗೂ ಕೇಂದ್ರ ಕೃಷಿ ಸಚಿವ ಚೌಹಾಣ್ ಅವರು ಮಂಡಳಿಗೆ ಕ್ರಮ ವಹಿಸುವ ವಿಶ್ವಾಸವಿದೆ,” ಎಂದು ವಿಶ್ವಾಸ ವ್ಯಕ್ತಪಡಿಸಿದರು.

News Updates

BREAKING NEWS ಸುಳ್ಯ :ಪಂಜ ಕಾಂಗ್ರೆಸ್ ಪಕ್ಷದ ಹುದ್ದೆಗೆ ರಾಜಿನಾಮೆ ನೀಡಿದ ದಿನೇಶ್ ಪುಂಡಿಮನೆ, ಕುಸುಮಾಧರ ಕೆರೆಯಡ್ಕ,ಲೋಕನಾಥ್ ಕುದ್ವ |ನಮ್ಮ ಮಾತನ್ನು ಪಕ್ಷದ ನಾಯಕರು ಉಳಿಸಿಕೊಂಡಿಲ್ಲ, ದೇವಸ್ಥಾನ ವ್ಯವಸ್ಥೆ ಸರಿದಾರಿಗೆ ತರುವ ಕೆಲಸವಾಗಲಿ: ದಿನೇಶ್ ಪುಂಡಿಮನೆ

News Updates

ಬೆಳ್ತಂಗಡಿ : ಮೊಗ್ರು ಜೈ ಶ್ರೀರಾಮ ಸೇವಾ ಟ್ರಸ್ಟ್ ಅಲೆಕ್ಕಿ -ಮುಗೇರಡ್ಕ ಮೊಗ್ರು, ಶ್ರೀ ರಾಮ ಶಿಶುಮಂದಿರದ 5 ನೇ ವರ್ಷದ ಶ್ರೀ ಕೃಷ್ಣೋತ್ಸವ. |ಕಾಶಿ ಶೆಟ್ಟಿ ನವಶಕ್ತಿ ಗುರುವಾಯನಕೆರೆ ಇವರ ಸ್ಮರಣಾರ್ಥ ಕಾಶಿ ಶೆಟ್ಟಿ ವಿದ್ಯಾ ಮಂದಿರ, ಹಾಗೂ ಶಾಸಕ ಹರೀಶ್ ಪೂಂಜಾರವರ ನೆರವಿನ ಅಡುಗೆ ಕೋಣೆ ಉದ್ಘಾಟನಾ ಕಾರ್ಯಕ್ರಮ |ಮಕ್ಕಳ ಶ್ರೀಕೃಷ್ಣ ಮತ್ತು ರಾಧೆಯರ ಸ್ಪರ್ಧೆ, ಮೊಸರು ಕುಡಿಕೆ, ಆಟೋಟ ಸ್ಪರ್ಧೆ

[t4b-ticker]
error: Content is protected !!