ಮಂಗಳೂರು (ಫೆ.12): ಮಂಗಳೂರು ಲವ್ ಜಿಹಾದ್ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಹಿಂದೂ ಯುವತಿಯೊಬ್ಬಳು (Hindu Girl) ಮುಸ್ಲಿಂ ಯುವಕನೊಂದಿಗೆ (Muslim Man) ರಿಜಿಸ್ಟರ್ ಮ್ಯಾರೇಜ್ ಆಗಿದ್ದು, ಇದೊಂದು ಲವ್ ಜಿಹಾದ್ (Love Jihad) ಕೇಸ್ ಎಂದು ಹಿಂದೂಪರ ಸಂಘಟನೆಗಳು ಆರೋಪ ಮಾಡ್ತಿವೆ. ಇತ್ತ ನಮ್ಮ ಮಗಳು ನಮಗೆ ಬೇಕು ಎನ್ನುತ್ತಿರುವ ಪೋಷಕರು ಪಿಜಿಗಳಲ್ಲಿ ನಡೆಯೋ ಅಕ್ರಮ ಚಟುವಟಿಕೆಗಳ ಬಗ್ಗೆ ಸ್ಫೋಟಕ ಆರೋಪ ಮಾಡ್ತಿದ್ದಾರೆ.
ಅಕ್ರಮದ ಅಡ್ಡೆಯಾಗುತ್ತಿದ್ಯಾ ಸುರತ್ಕಲ್ ಪಿಜಿ?ಲವ್ ಜಿಹಾದ್ ಕೇಸ್ ಇದೀಗ ಹೊಸ ತಿರುವು ಪಡೆದುಕೊಳ್ತಿದೆ. ಮಗಳಿಗೆ ಬ್ರೇನ್ ವಾಶ್ ಮಾಡಿ ಕರೆದುಕೊಂಡು ಹೋಗಿದ್ದಾರೆ ಎಂದು ಯುವತಿ ತಾಯಿ ಆರೋಪ ಮಾಡ್ತಿದ್ದಾರೆ. ಜೊತೆ ಪಿಜಿಗಳಲ್ಲೇ ಬ್ರೇನ್ ವಾಶ್ ಮಾಡೋ ಕೆಲಸಗಳು ನಡೆಯುತ್ತಿದೆ ಎಂದಿದ್ದಾರೆ.
ಪಿಜಿಗಳ ಬಗ್ಗೆ ಸ್ಫೋಟಕ ಹೇಳಿಕೆ
ಪೋಷಕರು ಪಿಜಿಗಳಲ್ಲಿ ಮಕ್ಕಳಿದ್ರೆ ಸೇಫ್ ಅಂತ ಬಿಟ್ಟು ಹೋಗ್ತಾರೆ. ಆದ್ರೆ ಪಿಜಿಗಳಲ್ಲೇ ಅಕ್ರಮ ಚಟುವಟಿಕೆಗಳು ನಡೆಯುತ್ತಿವೆ ಎಂದು ಮುಸ್ಲಿಂ ಯುವಕನ ಮದುವೆಯಾದ ಯುವತಿಯ ತಾಯಿ ಆರೋಪ ಮಾಡ್ತಿದ್ದಾರೆ.
ಒಂದೇ ರೂಮ್ನಲ್ಲಿ ಹುಡುಗ-ಹುಡುಗಿ
ಮಗಳನ್ನ ಹುಡುಕಿಕೊಂಡು ನಾವು ಪಿಜಿಗೆ ಹೋದಾಗ ಅಲ್ಲಿ ಹುಡುಗ-ಹುಡುಗಿ ಒಟ್ಟಿಗೆ ರೂಮ್ನಿಂದ ಹೊರ ಬಂದ್ರು. ಆ ದೃಶ್ಯವನ್ನ ನಾನು ಕಣ್ಣಾರೆ ಕಂಡಿದ್ದೆ. ಈ ಬಗ್ಗೆ ಪಿಜಿ ಮಾಲೀಕರನ್ನ ಕೂಡ ಪ್ರಶ್ನೆ ಮಾಡಿದ್ದೆವು. ಬಳಿಕ ಅವ್ರು ಇದು ನಮ್ಮ ಪಿಜಿ, ಅದೆಲ್ಲಾ ನಿಮಗೇಕೆ ಅಂತ ಹೇಳಿ ಬೆದರಿಸಿದ್ರು ಎಂದು ಯುವತಿ ತಾಯಿ ಪ್ರಶ್ನೆ ಮಾಡಿದ್ರು.
ಮಗಳ ಜೊತೆ ಪಿಜಿಯಲ್ಲಿ ಮುಸ್ಲಿಂ ಯುವತಿ
ಮಗಳಿದ್ದ ರೂಮ್ನಲ್ಲಿ ಓರ್ವ ಮುಸ್ಲಿಂ ಯುವತಿ ಕೂಡ ಇದ್ದಳು. ಆಕೆ ನನ್ನನ್ನು ನೋಡಿ ಅವಳು ಮಿದ್ಲಾಜ್ ಜೊತೆ ಹೋಗಿದ್ದಾಳೆ ಎಂದಳು. ಯಾವ ಜಾತಿ, ಧರ್ಮ ಅಂತೆಲ್ಲಾ ಮಾತಾಡಿದ್ಲು ಎಂದಿದ್ದಾರೆ.
‘ಪಿಜಿಗಳಲ್ಲೇ ಬ್ರೇನ್ ವಾಶ್ ಮಾಡ್ತಿದ್ದಾರೆ’
ಮಗಳು ಇಲ್ಲಿ ವಿದ್ಯಾಭ್ಯಾಸ ಮುಗಿಸಿ ಬೆಂಗಳೂರಲ್ಲಿ ಕೆಲಸ ಮಾಡುತ್ತಿದ್ದಳು. ಮುಸ್ಲಿಂ ಯುವಕನ ಜೊತೆ ಹೋಗುವ ಎರಡು ದಿನ ಮೊದಲು ಅವಳು ಈ ಪಿಜಿಗೆ ಬಂದಿದ್ದಾಳೆ. ಪಿಜಿಯಿಂದಲೇ ಮಹಮ್ಮದ್ ಮಿದ್ಲಾಜ್ ಜೊತೆ ಹೋಗಿದ್ದಾಳೆ. ಆಕೆಗೆ ಇಲ್ಲೇ ಬ್ರೈನ್ ವಾಶ್ ಮಾಡಿ ಕರೆದುಕೊಂಡು ಹೋಗಿದ್ದಾರೆ ಎಂದು ಯುವತಿ ತಾಯಿ ಆರೋಪ ಮಾಡಿದ್ದಾರೆ.
ಇದು ಲವ್ ಜಿಹಾದ್ ಎಂದ ತಂದೆ
ಲವ್ ಜಿಹಾದ್ ನಡೆದಿದ್ದು, ಇದರ ಹಿಂದೆ SDPI ಸಂಘಟನೆಯ ಮುಖಂಡರು ಇದ್ದಾರೆ ಎಂದು ಯುವತಿ ತಂದೆ ಆರೋಪ ಮಾಡಿದ್ದಾರೆ. ಕೇರಳದ ವಯನಾಡು ಪೊಲೀಸ್ ಠಾಣೆಗೆ ಹೋದಾಗ ಕೂಡ ಅಲ್ಲಿ ಮೊಹಮ್ಮದ್ ಮಿದ್ಲಾಜ್ನ ಪರವಾಗಿ ಸಾಕಷ್ಟು ಜನರು ಬಂದಿದ್ದರು. ನನ್ನ ಮಗಳನ್ನು ವಾಪಸ್ ಬರುವಂತೆ ಪೊಲೀಸರು ಮಾಡ್ಬೇಕು. ಇಲ್ಲಿನ ಪೊಲೀಸರು ನಮಗೆ ನ್ಯಾಯ ಕೊಡಿಸಬೇಕು ಎಂದು ಯುವತಿ ತಂದೆ ಮನವಿ ಮಾಡಿದ್ರು.












































