“ದೇಶದಲ್ಲಿ ಮುಸ್ಲಿಮರು ಸುರಕ್ಷಿತರು”: ಪ್ರಧಾನಿ ಮೋದಿ ಭೇಟಿಯ ಬಳಿಕ ಇಂಡಿಯನ್‌ ಗ್ಯಾಂಡ್‌ ಮುಫಿ ಕಾಂತಪುರಂ ಎ.ಪಿ.ಅಬೂಬಕ‌ರ್ ಮುಸ್ಲಿಯಾರ್ ಹೇಳಿಕೆ

Picture of Savistara

Savistara

Bureau Report

ಹೊಸದಿಲ್ಲಿ: ದೇಶದಲ್ಲಿರುವ ಮುಸ್ಲಿಮರು ಯಾವುದೇ ಅಡೆತಡೆ ಅಥವಾ ಅಭದ್ರತೆಯನ್ನು ಎದುರಿಸುತ್ತಿಲ್ಲ ಎಂದು ಇಂಡಿಯನ್ ಗ್ಯಾಂಡ್ ಮುಫಿ ಕಾಂತಪುರಂ ಎ.ಪಿ.ಅಬೂಬಕರ್ ಮುಸ್ಲಿಯಾರ್ ಹೇಳಿದ್ದಾರೆ.ಸೋಮವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾದ ನಂತರ CNN-News18ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಅವರು, ದೇಶದ ಪ್ರಗತಿಗಾಗಿ ಏಕತೆ, ಶಾಂತಿ ಹಾಗೂ ಸಾಮೂಹಿಕ ಪ್ರಯತ್ನಗಳ ಅಗತ್ಯವಿದೆ ಎಂದು ಒತ್ತಿ ಹೇಳಿದರು. ಭಾರತದಲ್ಲಿ ಶಾಂತಿ ಮತ್ತು ನೆಮ್ಮದಿ ಇರಬೇಕು. ಎಲ್ಲರೂ ಸುರಕ್ಷಿತರಾಗಿರುವುದರಿಂದ ಈ ದೇಶದಲ್ಲಿ ಮುಸ್ಲಿಮರಿಗೆ ಯಾವುದೇ ಅಡ್ಡಿ ಅಥವಾ ಸಮಸ್ಯೆ ಇಲ್ಲ ಎಂದರು.

ಪ್ರಧಾನಿಯವರೊಂದಿಗಿನ ಚರ್ಚೆ ರಾಷ್ಟ್ರದ ಅಭಿವೃದ್ಧಿಗಾಗಿ ಒಟ್ಟಾಗಿ ಕೆಲಸ ಮಾಡುವ ದಿಕ್ಕಿನಲ್ಲಿ ಕೇಂದ್ರೀಕೃತವಾಗಿತ್ತು. ಭಾರತದ ಅಭಿವೃದ್ಧಿಗಾಗಿ ನಾವೆಲ್ಲರೂ ಸಾಮೂಹಿಕವಾಗಿ ಕೆಲಸ ಮಾಡಬೇಕೆಂದು ಪ್ರಧಾನಿಗೆ ತಿಳಿಸಿದೆ. ಯಾವುದೇ ಕಳವಳ ವ್ಯಕ್ತಪಡಿಸಲಿಲ್ಲ, ಎಂದು ಅವರು ಹೇಳಿದರು.ಸಭೆಯ ಕುರಿತು ತೃಪ್ತಿ ವ್ಯಕ್ತಪಡಿಸಿದ ಕಾಂತಪುರಂ ಎ.ಪಿ. ಅಬೂಬಕರ್ ಮುಸ್ಲಿಯಾರ್, ಸಂವಾದದಿಂದ ತುಂಬಾ ಸಂತೋಷವಾಗಿದೆ. ಮಾನವೀಯತೆಗೆ ಅಗತ್ಯವಿರುವ ಯಾವುದೇ ವಿಷಯವಾಗಿರಲಿ -ಹಿಂದೂ ಅಥವಾ ಮುಸ್ಲಿಂ-ನಾನು ಅದಕ್ಕಾಗಿ ಕೆಲಸ ಮಾಡುತ್ತೇನೆ ಎಂದು ಮಾನವೀಯ ಮೌಲ್ಯಗಳತ್ತ ತಮ್ಮ ಬದ್ಧತೆಯನ್ನು ಪುನರುಚ್ಚರಿಸಿದರು.

[t4b-ticker]
error: Content is protected !!