ಗೃಹಲಕ್ಷ್ಮಿ ಯೋಜನೆ ಮಹತ್ವದ ಬದಲಾವಣೆ: ಬಯೋಮೆಟ್ರಿಕ್‌ ಕಡ್ಡಾಯ, ನವೀಕರಿಸದಿದ್ದರೆ ಹಣ ಕಟ್‌! ಪ್ರಕ್ರಿಯೆ ಹೇಗೆ?

Picture of Savistara

Savistara

Bureau Report

ಗೃಹಲಕ್ಷ್ಮೀ ಯೋಜನೆಯಲ್ಲಿ (Gruhalakshmi Scheme) ಮೇಜರ್ ಬದಲಾವಣೆ ತರುವುದಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ. ಹಣ ದುರ್ಬಳಕೆ ಆಗುವುದನ್ನು ತಡೆಗಟ್ಟಲು ಈ ನಿರ್ಧಾರವನ್ನು ನಿರ್ಧಾರ ಕೈಕೊಂಡಿದೆ.

ಗೃಹಲಕ್ಷ್ಮೀ ಹಣ ದುರಪಯೋಗ ತಡೆಗಟ್ಟಲು ಬಯೋಮೆಟ್ರಿಕ್ ಬರಲಿದ್ದೂ, ಇದಕ್ಕೆ ಬೇಕಾದ ಎಲ್ಲಾ ತಯಾರಿ ಮುಕ್ತಾಯ ಆಗಿದೆ. ಶೀಘ್ರದಲ್ಲೇ ಬಯೋಮೆಟ್ರಿಕ್‌ ಜಾರಿ ಆಗಲಿದೆ. ಅನರ್ಹರಿಗೆ ಗೃಹಲಕ್ಷ್ಮಿ ಹಣ ಪಾವತಿಯಾಗೋದನ್ನ ತಡೆಗಟ್ಟಲು ಈ ಕ್ರಮ ಕೈಗೊಳ್ಳಲಾಗಿದೆ. ಸತ್ತವರ ಅಕೌಂಟ್‌ಗೆ ಹಣ ಪಾವತಿ ಆಗೋದನ್ನ ತಡೆಗಟ್ಟಲು ಸರ್ಕಾರ ಈ ವ್ಯವಸ್ಥೆ ಜಾರಿಗೆ ಮುಂದಾಗಿದೆ. 2 ಲಕ್ಷ ಮಂದಿ ಮೃತಪಟ್ಟಿದ್ದರೂ ಫಲಾನುಭವಿಗಳಾಗಿದ್ದಾರೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ತಿಳಿಸಿದೆ.

ಸುಮಾರು 125 ಕೋಟಿ ಹಣ ಫಲಾನುಭವಿಗಳ ಖಾತೆಯಿಂದ ಡ್ರಾ ಆಗಿಲ್ಲ. ಹೀಗಾಗಿ, ಗೃಹಲಕ್ಷ್ಮೀ ಯೋಜನೆಗೆ ಬಯೋಮೆಟ್ರಿಕ್ ಜಾರಿಗೆ ನಿರ್ಧಾರ ಮಾಡಲಾಗಿದೆ. ಇದು ಒನ್ ಟೈಂ ಬಯೋಮೆಟ್ರಿಕ್ ಪದ್ಧತಿ. ಒಂದು ಸಲ ಫಲಾನುಭವಿಗಳು ಬಯೋಮೆಟ್ರಿಕ್‌ ಕೊಟ್ಟರೆ ಸಾಕು ಬೆಂಗಳೂರು ಇನ್, ಇನ್ ಸೇವಾಕೇಂದ್ರ ಮತ್ತು ಗ್ರಾಮ ಒನ್‌ಗಳಲ್ಲಿ ಫಲಾನುಭವಿಗಳು ಬಯೋಮೆಟ್ರಿಕ್‌ ಕೊಡಬೇಕು.

News Updates

ಎಸ್‌ಐಆ‌ರ್ ವಿಚಾರದಲ್ಲಿ ಬಿಜೆಪಿ ಕಾರ್ಯಕರ್ತರ ಬೆದರಿಸಿದರೆ ಸುಮ್ಮನಿರಲ್ಲ: ಪೊಲೀಸರಿಗೆ ಸಂಸದ ಕ್ಯಾ. ಚೌಟ ಎಚ್ಚರಿಕೆ – ಕಾಂಗ್ರೆಸ್ ತನ್ನ ಆರೋಪಗಳಿಗೆ ಸೂಕ್ತ ಸಾಕ್ಷ್ಯಾಧಾರಗಳನ್ನು ಒದಗಿಸಲಿ ಅಕ್ರಮವಾಗಿ ಮತ ರದ್ದು -ಮಾಡಲಾದ ವ್ಯಕ್ತಿಯನ್ನು ತಂದು ಚುನಾವಣಾಧಿಕಾರಿ ಮುಂದೆ ನಿಲ್ಲಿಸಲಿ: ಸಂಸದ ಸವಾಲು

[t4b-ticker]
error: Content is protected !!