‘ನಾವು Gen Z’ ಎಂಬುದು ‘ನನ್ನ ಅಪ್ಪಾ ಯಾರು ಗೊತ್ತಾ?’ಎಂಬುದರ ಹೊಸ ರೂಪ: ಒಮ‌ರ್

Picture of Savistara

Savistara

Bureau Report

ಶ್ರೀನಗರ: ‘ನಾವು ಜೆನ್ ಝೀಗಳು’ ಎಂದು ಹೇಳುವುದಕ್ಕೂ ‘ನನ್ನ ತಂದೆ ಯಾರು ಗೊತ್ತಾ?’ ಎಂಬ ಹಳೆಯ ಅಹಂಕಾರದ ಮಾತಿಗೂ ಯಾವುದೇ ವ್ಯತ್ಯಾಸವಿಲ್ಲ ಎಂದು ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಒಮ‌ರ್ ಅಬ್ದುಲ್ಲಾ ಹೇಳಿದ್ದಾರೆ.

‘ನಾವು ಜೆನ್ ಝೀಗಳು’ ಎಂದು ಬೆದರಿಕೆ ಒಡ್ಡುವುದು ‘ನನ್ನ ತಂದೆ ಯಾರಂತ ಗೊತ್ತಿಲ್ವ?’ ಎಂಬ ಹಳೆ ಅಹಂಕಾರದ ಮಾತಿನ ಹೊಸ ರೂಪವಾಗಿದೆ’ ಎಂದೂ ಅವರು ಬೇಸರ ವ್ಯಕ್ತಪಡಿಸಿದ್ದಾರೆ.ರಸ್ತೆಯನ್ನು ನಿರ್ಬಂಧಿಸಿದ ವಿಷಯಕ್ಕೆ ಸಂಬಂಧಿಸಿದಂತೆ ಯುವತಿಯೊಬ್ಬಳು ಭದ್ರತಾ ಅಧಿಕಾರಿಯೊಂದಿಗೆ ವಾಗ್ವಾದ ನಡೆಸುತ್ತಿರುವ ವಿಡಿಯೊವನ್ನು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಹಂಚಿಕೊಂಡಿರುವ ಅವರು, ‘ಜೆನ್ ಝೀ ಎಂಬುದನ್ನೇ ಬೆದರಿಕೆಯಾಗಿ ಬಳಸಲು ಪ್ರಾರಂಭಿಸುವುದು, ಆ ತಲೆಮಾರಿನ ಮೇಲಿರುವ ಸದ್ಭಾವನೆಯನ್ನು ಅತ್ಯಂತ ವೇಗವಾಗಿ ಕಳೆದುಕೊಳ್ಳುವಂತೆ ಮಾಡುತ್ತದೆ’ ಎಂದು ಹೇಳಿದ್ದಾರೆ.

ಲಡಾಖ್‌ನ ಮಿನಿಮಾರ್ಗ್ ಬಳಿ ತಮ್ಮ ವಾಹನವನ್ನು ತಡೆದಿದ್ದಕ್ಕಾಗಿ ಭದ್ರತಾ ಸಿಬ್ಬಂದಿ ಮೇಲೆ ಯುವತಿಯೊಬ್ಬಳು ಆಕ್ರೋಶ ವ್ಯಕ್ತಪಡಿಸುತ್ತಿರುವುದು ವಿಡಿಯೊದಲ್ಲಿ ಕಾಣಬಹುದು. ನಂತರ ಸ್ಥಳದಲ್ಲಿ ಧರಣಿ ಕುಳಿತ ಆಕೆ ಸೇನಾ ಪಡೆಯ ವಾಹನಗಳೂ ತೆರಳದಂತೆ ತಡೆದಿದ್ದಾರೆ. ಈ ವೇಳೆ ಆಕೆ ‘ನಾವು ಜೆನ್ ಝೀಗಳು’ ಎಂದು ಹೇಳಿದ್ದಾರೆ.

ಜಿಲ್ಲಾಧಿಕಾರಿಯ ಮಧ್ಯಪ್ರವೇಶದ ನಂತರ ಪರಿಸ್ಥಿತಿ ಹತೋಟಿಗೆ ಬಂದಿತ್ತು.

News Updates

ಕೇಂದ್ರ ಸರ್ಕಾರದಿಂದ ಶಿವಮೊಗ್ಗ ನಗರ ಬೈಪಾಸ್ ಹಾಗೂ ನಗರ ವ್ಯಾಪ್ತಿಯ ಹೆದ್ದಾರಿ ಅಭಿವೃದ್ಧಿಗೆ 466.74 ಕೋಟಿ ರೂ. ಮಂಜೂರು; ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ಕೃತಜ್ಞತೆ ಸಲ್ಲಿಸಿದ ಸಂಸದ ಬಿ.ವೈ. ರಾಘವೇಂದ್ರ

[t4b-ticker]
error: Content is protected !!