ಬೆಂಗಳೂರು, ಅ. 5: ರಾಜ್ಯದ ಮಹಿಳಾ ಸರಕಾರಿ ನೌಕರರಿಗೆ ಪ್ರತಿ ತಿಂಗಳು ನೀಡಲಾಗುವ ಒಂದು ದಿನದ ಋತುಚಕ್ರ ರಜೆಯನ್ನು ಕರ್ತವ್ಯ ಆ್ಯಪ್ ಮೂಲಕ ಸ್ವಯಂಚಾಲಿತವಾಗಿ ಮಂಜೂರು ಮಾಡಲು ಸರಕಾರ ಕ್ರಮ ಕೈಗೊಂಡಿದೆ. ಈ ಕುರಿತು ಪ್ರಜಾಸೇವಾ ಇಲಾಖೆ ಪ್ರಧಾನ ಕಾರ್ಯದರ್ಶಿ ಹರ್ಷ ಗುಪ್ತ ಅಧಿಕೃತ ಸುತ್ತೋಲೆ ಹೊರಡಿಸಿದ್ದಾರೆ.
ಮುಂದಿನ ತಿಂಗಳಿಗೆ ವರ್ಗಾಯಿಸುವಂತಿಲ್ಲ
ಕರ್ತವ್ಯ ಆ್ಯಪ್ ಮೂಲಕ ಸ್ವಯಂಚಾಲಿತ ರಜೆ ಮಂಜೂರು ಮಾಡುವಾಗ ಅರ್ಜಿದಾರರು 18ರಿಂದ 52 ವರ್ಷ ವಯೋ ಮಿತಿಯ ಮಹಿಳಾ ಸರಕಾರಿ ಮುಂದಿನ ತಿಂಗಳಿಗೆ ವರ್ಗಾಯಿಸಲು ನೌಕರರಾಗಿರಬೇಕು. ಈ ರಜೆಯನ್ನು ಅಥವಾ ಬೇರೆ ಯಾವುದೇ ಇತರ ರಜೆಗಳೊಂದಿಗೆ ಹೊಂದಾಣಿಕೆ ಮಾಡುವಂತಿಲ್ಲ ಎಂಬ ಕೆಲವು ಷರತ್ತು ಗಳನ್ನು ವಿಧಿಸಲಾಗಿದೆ.












































