Mangalore ಮಂಗಳೂರು-ಸುಬ್ರಹ್ಮಣ್ಯ ರೈಲು ಮಾರ್ಗದಲ್ಲಿ ದಾಖಲೆ ಸಂಚಾರ: 20 ತಿಂಗಳಲ್ಲಿ 16.38 ಲಕ್ಷ ಪ್ರಯಾಣಿಕರು, ₹31.31 ಕೋಟಿ ಆದಾಯ..!

Picture of Savistara

Savistara

Bureau Report

ಮಂಗಳೂರು: ಮಂಗಳೂರು ಸುಬ್ರಹ್ಮಣ್ಯ ರೋಡ್ ರೈಲ್ವೆ ವಿಭಾಗದಲ್ಲಿ ಪ್ರಯಾಣಿಕರ ಸಂಚಾರ ಗಣನೀಯವಾಗಿ ಹೆಚ್ಚಿದ್ದು, 2025ರ ಜನವರಿಯಿಂದ 2026ರ ಆಗಸ್ಟ್‌ವರೆಗಿನ 20 ತಿಂಗಳಲ್ಲಿ ಸುಮಾರು 16.38 ಲಕ್ಷ ಪ್ರಯಾಣಿಕರು ಈ ಮಾರ್ಗದ ವಿವಿಧ ನಿಲ್ದಾಣಗಳ ಮೂಲಕ ಸಂಚರಿಸಿದ್ದಾರೆ. ಇದೇ ಅವಧಿಯಲ್ಲಿ ರೈಲ್ವೆಗೆ ಸುಮಾರು ₹31.31 ಕೋಟಿ ಪ್ರಯಾಣಿಕ ವರಮಾನ ಸಂಗ್ರಹವಾಗಿದೆ.

ಮಂಗಳೂರು ಸುಬ್ರಹ್ಮಣ್ಯ ರೋಡ್ ನಡುವಿನ ಬಂಟ್ವಾಳ, ನೇರಳಕಟ್ಟೆ, ಕಬಕ ಪುತ್ತೂರು, ನರಿಮೊಗರು, ಕಾಣಿಯೂರು, ಎಡಮಂಗಲ, ಕೋಡಿಂಬಾಳ, ಬಜಕರೆ ಹಾಗೂ ಸುಬ್ರಹ್ಮಣ್ಯ ರೋಡ್ ಸೇರಿದಂತೆ ಒಂಬತ್ತು ನಿಲ್ದಾಣಗಳ ಅಂಕಿಅಂಶಗಳನ್ನು ಪರಿಗಣಿಸಲಾಗಿದೆ.

ಈ ನಿಲ್ದಾಣಗಳಲ್ಲಿ ಸುಮಾರು 10.51 ಲಕ್ಷ ಟಿಕೆಟ್ ಕಾಯ್ದಿರಿಸದ ಹಾಗೂ 5.87 ಲಕ್ಷ ಟಿಕೆಟ್ ಕಾಯ್ದಿರಿಸಿದ ಪ್ರಯಾಣಿಕರು ಸಂಚರಿಸಿದ್ದಾರೆ. ಕಾಯ್ದಿರಿಸದ ಟಿಕೆಟ್‌ಗಳಿಂದ ಸುಮಾರು ₹7.55 ಕೋಟಿ ಹಾಗೂ ಕಾಯ್ದಿರಿಸಿದ ಟಿಕೆಟ್‌ಗಳಿಂದ ₹23.76 ಕೋಟಿ ಆದಾಯ ಬಂದಿದೆ. ಇದೇ ಅವಧಿಯಲ್ಲಿ ಸುಮಾರು 1.06 ಲಕ್ಷ ಪ್ಲಾಟ್‌ಫಾರ್ಮ್ ಟಿಕೆಟ್‌ಗಳು ಮಾರಾಟವಾಗಿವೆ.

ಸುಬ್ರಹ್ಮಣ್ಯ ರೋಡ್‌ಗೆ ಅಗ್ರಸ್ಥಾನ ಪಡೀಲ್ ಸುಬ್ರಹ್ಮಣ್ಯ ನಡುವಿನ ಪ್ರಮುಖ ನಿಲ್ದಾಣವಾಗಿರುವ ಸುಬ್ರಹ್ಮಣ್ಯ ರೋಡ್ ಅತಿ ಹೆಚ್ಚು ಪ್ರಯಾಣಿಕ ದಟ್ಟಣೆ ದಾಖಲಿಸಿದೆ. 20 ತಿಂಗಳಲ್ಲಿ ಈ ನಿಲ್ದಾಣದ ಮೂಲಕ ಸುಮಾರು 8.05 ಲಕ್ಷ ಪ್ರಯಾಣಿಕರು ಸಂಚರಿಸಿದ್ದು. ₹18.86 ಕೋಟಿ ಪ್ರಯಾಣಿಕ ವರಮಾನ ಸಂಗ್ರಹವಾಗಿದೆ.

ಇದರಲ್ಲಿ 4.42 ಲಕ್ಷ ಕಾಯ್ದಿರಿಸದ ಹಾಗೂ 3.64 ಲಕ್ಷ ಕಾಯ್ದಿರಿಸಿದ ಪ್ರಯಾಣಿಕರು ಸೇರಿದ್ದಾರೆ. ಒಂಬತ್ತು ನಿಲ್ದಾಣಗಳ ಒಟ್ಟು ಪ್ರಯಾಣಿಕ ದಟ್ಟಣೆಯ ಸುಮಾರು ಶೇ.49 ಹಾಗೂ ಪ್ರಯಾಣಿಕ ವರಮಾನದ ಸುಮಾರು ಶೇ.60ರಷ್ಟು ಪಾಲು ಸುಬ್ರಹ್ಮಣ್ಯ ರೋಡ್ ನಿಲ್ದಾಣದ್ದಾಗಿದೆ.ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ರೈಲು ಸಂಪರ್ಕ ಕಲ್ಪಿಸುವುದರ ಜತೆಗೆ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ತೆರಳುವ ಭಕ್ತರಿಗೂ ಈ ನಿಲ್ದಾಣ ಪ್ರಮುಖ ಸಂಪರ್ಕ ಕೊಂಡಿಯಾಗಿದೆ. ಜಾತ್ರೆ, ತೀರ್ಥಯಾತ್ರೆ ಹಾಗೂ ಪ್ರಮುಖ ಹಬ್ಬಗಳ ಸಂದರ್ಭಗಳಲ್ಲಿ ಇಲ್ಲಿ ಪ್ರಯಾಣಿಕರ ಸಂಖ್ಯೆ ಮತ್ತಷ್ಟು ಹೆಚ್ಚಾಗುತ್ತದೆ.ಕಬಕ ಪುತ್ತೂರು ಎರಡನೇ ಸ್ಥಾನ ಕಬಕ ಪುತ್ತೂರು ರೈಲು ನಿಲ್ದಾಣದ ಮೂಲಕ 20 ತಿಂಗಳಲ್ಲಿ ಸುಮಾರು 5.04 ಲಕ್ಷ ಪ್ರಯಾಣಿಕರು ಸಂಚರಿಸಿದ್ದಾರೆ. ಇವರಲ್ಲಿ 3.64 ಲಕ್ಷ ಕಾಯ್ದಿರಿಸದ ಹಾಗೂ 1.39 ಲಕ್ಷ ಕಾಯ್ದಿರಿಸಿದ ಪ್ರಯಾಣಿಕರಾಗಿದ್ದಾರೆ.ನಿಲ್ದಾಣವು ಒಟ್ಟು ಸುಮಾರು ₹7.59 ಕೋಟಿ ಪ್ರಯಾಣಿಕ ವರಮಾನ ಗಳಿಸಿದೆ. ಕಾಯ್ದಿರಿಸದ ಪ್ರಯಾಣಿಕರಿಂದ ₹1.64 ಕೋಟಿ ಹಾಗೂ ಕಾಯ್ದಿರಿಸಿದ ಪ್ರಯಾಣಿಕರಿಂದ ₹5.94 ಕೋಟಿ ಆದಾಯ ಬಂದಿದೆ.

ಇದಲ್ಲದೆ, ಕಬಕ ಪುತ್ತೂರು ನಿಲ್ದಾಣದಲ್ಲಿ ಸುಮಾರು 53,000 ಪ್ಲಾಟ್‌ಫಾರ್ಮ್‌ ಟಿಕೆಟ್‌ಗಳು ಮಾರಾಟವಾಗಿದ್ದು, ಒಂಬತ್ತು ನಿಲ್ದಾಣಗಳ ಪೈಕಿ ಅತಿ ಹೆಚ್ಚು ಪ್ಲಾಟ್‌ಫಾರ್ಮ್ ಟಿಕೆಟ್ ಮಾರಾಟವಾದ ನಿಲ್ದಾಣವಾಗಿದೆ.ಬಂಟ್ವಾಳದಲ್ಲೂ 2.15 ಲಕ್ಷ ಪ್ರಯಾಣಿಕರು ಬಂಟ್ವಾಳ ರೈಲು ನಿಲ್ದಾಣದ ಮೂಲಕ ಈ ಅವಧಿಯಲ್ಲಿ ಸುಮಾರು 2.15 ಲಕ್ಷ ಪ್ರಯಾಣಿಕರು ಸಂಚರಿಸಿದ್ದಾರೆ. ಇದರಲ್ಲಿ 1.31 ಲಕ್ಷ ಕಾಯ್ದಿರಿಸದ ಹಾಗೂ 84,000 ಕಾಯ್ದಿರಿಸಿದ ಪ್ರಯಾಣಿಕರು ಸೇರಿದ್ದಾರೆ.ಬಂಟ್ವಾಳ ನಿಲ್ದಾಣವು ಒಟ್ಟು ಸುಮಾರು ₹4.69 ಕೋಟಿ ಪ್ರಯಾಣಿಕ ವರಮಾನ ಗಳಿಸಿದೆ. ಕಾಯ್ದಿರಿಸದ ಪ್ರಯಾಣಿಕರಿಂದ ₹1.04 ಕೋಟಿ ಹಾಗೂ ಕಾಯ್ದಿರಿಸಿದ ಪ್ರಯಾಣಿಕರಿಂದ ₹3.65 ಕೋಟಿ ಆದಾಯ ಬಂದಿದೆ. ಇಲ್ಲಿ ಸುಮಾರು 37,180 ಪ್ಲಾಟ್‌ಫಾರ್ಮ್ ಟಿಕೆಟ್‌ಗಳು ಮಾರಾಟವಾಗಿವೆ.ಸುಬ್ರಹ್ಮಣ್ಯ ರೋಡ್, ಕಬಕ ಪುತ್ತೂರು ಹಾಗೂ ಬಂಟ್ವಾಳ ಈ ಮೂರು ನಿಲ್ದಾಣಗಳ ಮೂಲಕವೇ ಒಟ್ಟು ಸುಮಾರು 14.25 ಲಕ್ಷ ಪ್ರಯಾಣಿಕರು ಸಂಚರಿಸಿದ್ದಾರೆ.ಇದು ಒಂಬತ್ತು ನಿಲ್ದಾಣಗಳ ಒಟ್ಟು ಪ್ರಯಾಣಿಕ ದಟ್ಟಣೆಯ ಸುಮಾರು ಶೇ.87ರಷ್ಟಾಗಿದೆ.

ಗ್ರಾಮೀಣ ನಿಲ್ದಾಣಗಳಲ್ಲೂ ಗಮನಾರ್ಹ ಬೇಡಿಕೆ ಕಾಣಿಯೂರು ನಿಲ್ದಾಣದಿಂದ ಸುಮಾರು 31,700 ಪ್ರಯಾಣಿಕರು ಸಂಚರಿಸಿದ್ದು. ₹5.10 ಲಕ್ಷ ಆದಾಯ ಸಂಗ್ರಹವಾಗಿದೆ. ಕೋಡಿಂಬಾಳದಿಂದ ಸುಮಾರು 26,600 ಪ್ರಯಾಣಿಕರು ಹಾಗೂ ₹5.25 ಲಕ್ಷ ಆದಾಯ ದಾಖಲಾಗಿದೆ.ಎಡಮಂಗಲದಿಂದ ಸುಮಾರು 25,300 ಪ್ರಯಾಣಿಕರು ಸಂಚರಿಸಿದ್ದು, ₹3.20 ಲಕ್ಷ ಆದಾಯ ಬಂದಿದೆ. ಬಜಕರೆ ನಿಲ್ದಾಣದಿಂದ ಸುಮಾರು 11,100 ಪ್ರಯಾಣಿಕರು ಹಾಗೂ ₹2 ಲಕ್ಷ, ನೇರಳಕಟ್ಟೆಯಿಂದ ಸುಮಾರು 10,100 ಪ್ರಯಾಣಿಕರು ಹಾಗೂ ₹63,000, ನರಿಮೊಗರು ನಿಲ್ದಾಣದಿಂದ ಸುಮಾರು 9,100 ಪ್ರಯಾಣಿಕರು ಹಾಗೂ ₹97,000 ಆದಾಯ ದಾಖಲಾಗಿದೆ.ಒಂಬತ್ತು ನಿಲ್ದಾಣಗಳಲ್ಲಿ ಒಟ್ಟು 1.06 ಲಕ್ಷ ಪ್ಲಾಟ್‌ಫಾರ್ಮ್ ಟಿಕೆಟ್‌ಗಳು ಮಾರಾಟವಾಗಿದ್ದು, ಕಬಕ ಪುತ್ತೂರು, ಬಂಟ್ವಾಳ ಹಾಗೂ ಸುಬ್ರಹ್ಮಣ್ಯ ರೋಡ್ ನಿಲ್ದಾಣಗಳೇ ಬಹುಪಾಲು ಟಿಕೆಟ್ ಮಾರಾಟವನ್ನು ಹೊಂದಿವೆ.

ರೈಲ್ವೆಯ ಇತರ ವರಮಾನ ಬಂಟ್ವಾಳ ಮತ್ತು ಕಬಕ ಪುತ್ತೂರಿನ ಪಾರ್ಕಿಂಗ್ ಗುತ್ತಿಗೆಗಳಿಂದ ಜಿಎಸ್‌ಟಿ ಹೊರತುಪಡಿಸಿ ಕ್ರಮವಾಗಿ ಸುಮಾರು ₹8,250 ಮತ್ತು ₹7,520 ಆದಾಯ ಬಂದಿದೆ.ನಿಲ್ದಾಣಗಳ ವರ್ಗೀಕರಣ ಈ ನಿಲ್ದಾಣಗಳನ್ನು ರೈಲು ನಿಲ್ದಾಣಗಳ ನಾನ್ ಸಬ್ ಅರ್ಬನ್ ವರ್ಗಗಳ ವಿವಿಧ ವರ್ಗಗಳಲ್ಲಿವರ್ಗೀಕರಿಸಲಾಗಿದೆ:NSG-4: ಸುಬ್ರಹ್ಮಣ್ಯ ರೋಡ್NSG-5: ಬಂಟ್ವಾಳ ಮತ್ತು ಕಬಕ ಪುತ್ತೂರುNSG-6: ನೇರಳಕಟ್ಟೆ, ನರಿಮೊಗರು ಮತ್ತು ಎಡಮಂಗಲHG-3: ಕಾಣಿಯೂರು, ಕೊಡಿಂಬಾಳ ಮತ್ತು ಬಜಕರೆ2025ರ ಜನವರಿಯಿಂದ ಈ ನಿಲ್ದಾಣಗಳ ವರ್ಗೀಕರಣದಲ್ಲಿ ಯಾವುದೇ ಬದಲಾವಣೆಯಾಗಿಲ್ಲ ಎಂದು ರೈಲ್ವೆ ಇಲಾಖೆ ತಿಳಿಸಿದೆ.ರೈಲು ಸೇವೆ ವಿಸ್ತರಣೆಗೆ ಅಂಕಿಅಂಶಗಳ ಬಲ 20 ತಿಂಗಳಲ್ಲಿ 16.38 ಲಕ್ಷ ಪ್ರಯಾಣಿಕರು ಸಂಚರಿಸಿರುವುದು ಈ ರೈಲ್ವೆ ಕಾರಿಡಾರ್‌ನ ಮಹತ್ವವನ್ನು ತೋರಿಸುತ್ತದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ರೈಲು ಬಳಕೆದಾರರ ಸಮಿತಿ ತಿಳಿಸಿದೆ.

ಸುಬ್ರಹ್ಮಣ್ಯ ರೋಡ್‌ನಲ್ಲಿ ದಾಖಲಾಗಿರುವ 8.05 ಲಕ್ಷ ಪ್ರಯಾಣಿಕರು ಹಾಗೂ ₹18.86 ಕೋಟಿ ಆದಾಯದ ಹಿನ್ನೆಲೆಯಲ್ಲಿ, ನಿಲ್ದಾಣವನ್ನು ಟರ್ಮಿನಲ್ ನಿಲ್ದಾಣವಾಗಿ ಅಭಿವೃದ್ಧಿಪಡಿಸುವುದು. ಮಂಗಳೂರಿನಿಂದ ಹೆಚ್ಚಿನ ರೈಲು ಸೇವೆಗಳನ್ನು ವಿಸ್ತರಿಸುವುದು ಹಾಗೂ ಕೊಂಕಣ, ಕೇರಳ ಮತ್ತು ತಮಿಳುನಾಡು ಭಾಗಗಳಿಗೆ ಉತ್ತಮ ಸಂಪರ್ಕ ಕಲ್ಪಿಸುವ ಬೇಡಿಕೆ ಮತ್ತಷ್ಟು ಬಲಗೊಂಡಿದೆ.ಅದೇ ರೀತಿ ಕಬಕ ಪುತ್ತೂರು ನಿಲ್ದಾಣದಲ್ಲಿ 5.04 ಲಕ್ಷ ಪ್ರಯಾಣಿಕರ ಸಂಚಾರ, ₹7.59 ಕೋಟಿ ಆದಾಯ ಹಾಗೂ 53,000 ಪ್ಲಾಟ್‌ಫಾರ್ಮ್ ಟಿಕೆಟ್ ಮಾರಾಟವಾಗಿರುವುದರಿಂದ ನಿಲ್ದಾಣದ ಸಮಗ್ರ ಅಭಿವೃದ್ಧಿಗೆ ಒತ್ತು ನೀಡಬೇಕೆಂಬ ಆಗ್ರಹ ಕೇಳಿಬಂದಿದೆ. ಪ್ರಯಾಣಿಕರ ಬೇಡಿಕೆಗೆ ಅನುಗುಣವಾಗಿ ಇಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್‌ಗೆ ನಿಲುಗಡೆ ನೀಡಬೇಕೆಂಬ ಬೇಡಿಕೆಯೂ ಇದೆ.

ಇದರ ಜತೆಗೆ ಮಂಗಳೂರು-ಸುಬ್ರಹ್ಮಣ್ಯ ರೋಡ್‌ ನಡುವೆ ಕನಿಷ್ಠ ಹಳಿ ದ್ವಿಪಥೀಕರಣ ಮಾಡುವುದು, ಹೆಚ್ಚುವರಿ ಪ್ರಯಾಣಿಕ ಮತ್ತು ಪ್ರಾದೇಶಿಕ ರೈಲುಗಳ ಸಂಚಾರಕ್ಕೆ ಅವಕಾಶ ಕಲ್ಪಿಸುವುದು ಹಾಗೂ ಮಂಗಳೂರು, ಕಾಸರಗೋಡು, ಉಡುಪಿ ಸೇರಿದಂತೆ ಸಮೀಪದ ಪ್ರದೇಶಗಳಿಗೆ ಸ್ಥಳೀಯ ಮೆಮು ರೈಲು ಸೇವೆ ಆರಂಭಿಸುವ ಬೇಡಿಕೆಗೂ ಈ ಅಂಕಿಅಂಶಗಳು ಬಲ ನೀಡಿವೆ.ಒಟ್ಟಾರೆ, 20 ತಿಂಗಳಲ್ಲಿ ದಾಖಲಾಗಿರುವ ಪ್ರಯಾಣಿಕರ ಸಂಖ್ಯೆ ಹಾಗೂ ಆದಾಯವು ದಕ್ಷಿಣ ಕನ್ನಡದ ನಗರ. ಗ್ರಾಮೀಣ ಪ್ರದೇಶಗಳು ಮತ್ತು ಪ್ರಮುಖ ಧಾರ್ಮಿಕ ಕ್ಷೇತ್ರಗಳನ್ನು ಸಂಪರ್ಕಿಸುವ ಈ ರೈಲು ಮಾರ್ಗದ ಮಹತ್ವವನ್ನು ಎತ್ತಿ ತೋರಿಸುತ್ತಿದ್ದು, ರೈಲ್ವೆ ಮೂಲಸೌಕರ್ಯ ವಿಸ್ತರಣೆಗೆ ದತ್ತಾಂಶ ಆಧಾರಿತ ಸಮರ್ಥನೆಯನ್ನು ಒದಗಿಸಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ರೈಲು ಬಳಕೆದಾರರ ಸಮಿತಿ ಅಭಿಪ್ರಾಯಪಟ್ಟಿದೆ.

News Updates

ಎಸ್‌ಐಆ‌ರ್ ವಿಚಾರದಲ್ಲಿ ಬಿಜೆಪಿ ಕಾರ್ಯಕರ್ತರ ಬೆದರಿಸಿದರೆ ಸುಮ್ಮನಿರಲ್ಲ: ಪೊಲೀಸರಿಗೆ ಸಂಸದ ಕ್ಯಾ. ಚೌಟ ಎಚ್ಚರಿಕೆ – ಕಾಂಗ್ರೆಸ್ ತನ್ನ ಆರೋಪಗಳಿಗೆ ಸೂಕ್ತ ಸಾಕ್ಷ್ಯಾಧಾರಗಳನ್ನು ಒದಗಿಸಲಿ ಅಕ್ರಮವಾಗಿ ಮತ ರದ್ದು -ಮಾಡಲಾದ ವ್ಯಕ್ತಿಯನ್ನು ತಂದು ಚುನಾವಣಾಧಿಕಾರಿ ಮುಂದೆ ನಿಲ್ಲಿಸಲಿ: ಸಂಸದ ಸವಾಲು

News Updates

ಕೇಂದ್ರ ಸರ್ಕಾರದಿಂದ ಶಿವಮೊಗ್ಗ ನಗರ ಬೈಪಾಸ್ ಹಾಗೂ ನಗರ ವ್ಯಾಪ್ತಿಯ ಹೆದ್ದಾರಿ ಅಭಿವೃದ್ಧಿಗೆ 466.74 ಕೋಟಿ ರೂ. ಮಂಜೂರು; ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ಕೃತಜ್ಞತೆ ಸಲ್ಲಿಸಿದ ಸಂಸದ ಬಿ.ವೈ. ರಾಘವೇಂದ್ರ

[t4b-ticker]
error: Content is protected !!