ಕೇಂದ್ರ ಸಚಿವ ಹರ್ದಿಪ್ ಸಿಂಗ್ ಪುರಿ ಸೇರಿದಂತೆ 8 ಮಂದಿಗೆ ರಾಜ್ಯಸಭಾ ಟಿಕೇಟ್ ನಿರಾಕರಿಸಿ ಹೊಸ ಮುಖಗಳಿಗೆ ಮಣೆ ಹಾಕಿದ ಬಿಜೆಪಿ

Picture of Savistara

Savistara

Bureau Report

ಲಖನೌ ನವದೆಹಲಿ: ಉತ್ತರ ಪ್ರದೇಶದಿಂದ ನಡೆಯಲಿರುವ ರಾಜ್ಯಸಭಾ ಚುನಾವಣೆಗೆ ಬಿಜೆಪಿ ಸೋಮವಾರ ತನ್ನ 8 ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.

ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಹಾಗೂ ಬಿ.ಎಲ್. ವರ್ಮಾ ಸೇರಿದಂತೆ ಹಾಲಿ ಇರುವ ಯಾವುದೇ ರಾಜ್ಯಸಭಾ ಸಂಸದರಿಗೂ ಈ ಬಾರಿ ಟಿಕೆಟ್ ನೀಡದೆ, ಸಂಪೂರ್ಣವಾಗಿ ಹೊಸ ಮುಖಗಳಿಗೆ ಬಿಜೆಪಿ ಮಣೆ ಹಾಕಿದೆ.

ಅ. 16ರಂದು ನಡೆಯಲಿರುವ ಈ ಚುನಾವಣೆಗೆ ಬಿಜೆಪಿ ಧರಂಪಾಲ್ ಸಿಂಗ್, ರಾಧಾಕಾಂತ್ ಓಜಾ, ಪ್ರಕಾಶ್ ಪಾಲ್, ವಿದ್ಯಾಸಾಗರ್ ಸೋಂಕರ್, ಗೋಪಿ ಕೃಷ್ಣ ಪಾಂಡೆ, ಪ್ರಿಯಾಂಕಾ ಸಿಂಗ್ ರಾವತ್, ರಾಮ್ ಪ್ರತಾಪ್ ಸಿಂಗ್ ಚೌಹಾಣ್‌ ಹಾಗೂ ಶ್ರುತಿ ಗಂಗಾವಾರ್ ಅವರನ್ನು ಕಣಕ್ಕಿಳಿಸಿದೆ.

ಕೇಂದ್ರ ಸಚಿವರಾದ ಹರ್ದೀಪ್ ಸಿಂಗ್ ಪುರಿ, ಬಿ.ಎಲ್. ವರ್ಮಾ ಅವರಲ್ಲದೆ, ಅರುಣ್ ಸಿಂಗ್, ಸೀಮಾ ದ್ವಿವೇದಿ, ನೀರಜ್ ಶೇಖ‌ರ್, ಬ್ರಿಜ್ ಲಾಲ್ ಹಾಗೂ ಗೀತಾ ಶಾಕ್ಯ ಅವರಿಗೆ ಈ ಬಾರಿ ಟಿಕೆಟ್ ಕೈತಪ್ಪಿದೆ.

ಇನ್ನು ಉತ್ತರ ಪ್ರದೇಶದಿಂದ ಹಿಂದೆ ರಾಜ್ಯಸಭಾ ಸಂಸದರಾಗಿದ್ದ ದಿನೇಶ್ ಶರ್ಮಾ ಪ್ರಸ್ತುತ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಉಪರಾಜ್ಯಪಾಲರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ರಾಜ್ಯದ ಒಟ್ಟು 10 ರಾಜ್ಯಸಭಾ ಸ್ಥಾನಗಳಿಗೆ ಅಕ್ಟೋಬರ್ 16ರಂದು ಮತದಾನ ನಡೆಯಲಿದ್ದು, ಸಂಖ್ಯಾಬಲದ ಆಧಾರದ ಮೇಲೆ ಬಿಜೆಪಿ 8 ಹಾಗೂ ಸಮಾಜವಾದಿ ಪಾರ್ಟಿ (SP) 2 ಸ್ಥಾನಗಳನ್ನು ಗೆಲ್ಲುವ ಸಾಧ್ಯತೆಯಿದೆ.

ಪಕ್ಷದ ಸಂಘಟಕರಿಗೆ ಆದ್ಯತೆ

ಪಕ್ಷದ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ನಾಯಕರಿಗೆ ಈ ಬಾರಿ ವಿಶೇಷ ಆದ್ಯತೆ ನೀಡಲಾಗಿದೆ. ಪೂರ್ವ ಉತ್ತರ ಪ್ರದೇಶದ ದಲಿತ ನಾಯಕ, ಮಾಜಿ ಎಂಎಲ್‌ಸಿ ವಿದ್ಯಾಸಾಗರ್ ಸೋಂಕರ್‌ ಹಾಗೂ ಕಾನ್ಸುರ ಬುಂದೇಲ್‌ಖಂಡ್ ವಲಯದ ಮಾಜಿ ಮುಖ್ಯಸ್ಥ ಪ್ರಕಾಶ್ ಪಾಲ್ ಅವರಿಗೆ ಅವಕಾಶ ಸಿಕ್ಕಿದೆ. ಇದರೊಂದಿಗೆ 2026ರ ಜೂನ್‌ನಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡು, ಪಶ್ಚಿಮ ಉತ್ತರ ಪ್ರದೇಶದ ಉಸ್ತುವಾರಿ ವಹಿಸಿಕೊಂಡಿದ್ದ ರಾಮ್ ಪ್ರತಾಪ್ ಸಿಂಗ್ ಚೌಹಾಣ್ ಅವರಿಗೂ ಬಿಜೆಪಿ ಟಿಕೆಟ್ ಘೋಷಿಸಿದೆ.ಬಿಜೆಪಿ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ 2027ರ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಸಾಮಾಜಿಕ ಸಮೀಕರಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ.

News Updates

ಎಸ್‌ಐಆ‌ರ್ ವಿಚಾರದಲ್ಲಿ ಬಿಜೆಪಿ ಕಾರ್ಯಕರ್ತರ ಬೆದರಿಸಿದರೆ ಸುಮ್ಮನಿರಲ್ಲ: ಪೊಲೀಸರಿಗೆ ಸಂಸದ ಕ್ಯಾ. ಚೌಟ ಎಚ್ಚರಿಕೆ – ಕಾಂಗ್ರೆಸ್ ತನ್ನ ಆರೋಪಗಳಿಗೆ ಸೂಕ್ತ ಸಾಕ್ಷ್ಯಾಧಾರಗಳನ್ನು ಒದಗಿಸಲಿ ಅಕ್ರಮವಾಗಿ ಮತ ರದ್ದು -ಮಾಡಲಾದ ವ್ಯಕ್ತಿಯನ್ನು ತಂದು ಚುನಾವಣಾಧಿಕಾರಿ ಮುಂದೆ ನಿಲ್ಲಿಸಲಿ: ಸಂಸದ ಸವಾಲು

News Updates

ಕೇಂದ್ರ ಸರ್ಕಾರದಿಂದ ಶಿವಮೊಗ್ಗ ನಗರ ಬೈಪಾಸ್ ಹಾಗೂ ನಗರ ವ್ಯಾಪ್ತಿಯ ಹೆದ್ದಾರಿ ಅಭಿವೃದ್ಧಿಗೆ 466.74 ಕೋಟಿ ರೂ. ಮಂಜೂರು; ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ಕೃತಜ್ಞತೆ ಸಲ್ಲಿಸಿದ ಸಂಸದ ಬಿ.ವೈ. ರಾಘವೇಂದ್ರ

[t4b-ticker]
error: Content is protected !!