ಹೆದ್ದಾರಿ ಸಚಿವಾಲಯ ಕಾರ್ಯದರ್ಶಿ ಉಮಾಶಂಕರ್ ಅವರನ್ನು ಭೇಟಿಯಾದ ಸಂಸದ ಕ್ಯಾ. ಬ್ರಿಜೇಶ್ ಚೌಟ | ಹೆದ್ದಾರಿಗಳ ಮೂಲ ಸೌಕರ್ಯ ಸುಧಾರಣೆ ಕುರಿತು ಮಾತುಕತೆ

Picture of Savistara

Savistara

Bureau Report

ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ(MoRTH)ದ ಕಾರ್ಯದರ್ಶಿ ಶ್ರೀ ಉಮಾಶಂಕರ್ ಅವರನ್ನು ಇಂದು ದೆಹಲಿಯಲ್ಲಿ ಭೇಟಿ ಮಾಡಿ, ವಿವಿಧ ಹೆದ್ದಾರಿಗಳ ಮೂಲಸೌಕರ್ಯಗಳ ಸುಧಾರಣೆ ಕುರಿತಂತೆ ಚರ್ಚೆ ನಡೆಸಿದರು.

ಅವುಗಳಲ್ಲೂ ಪ್ರಮುಖವಾಗಿ ಪ್ರಗತಿಯಲ್ಲಿರುವ ಕಾಮಗಾರಿಗಳಿಗೆ ಚುರುಕು ನೀಡುವುದು (ಬಿ.ಸಿ. ರೋಡ್ ಮತ್ತು ಗುಂಡ್ಯ, ಸಕಲೇಶಪುರ ಮತ್ತು ಮಾರನಹಳ್ಳಿ ರಸ್ತೆ) ಹಾಗೂ ಮಂಗಳೂರು- ಬೆಂಗಳೂರು ಸಂಪರ್ಕಿಸುವ ಶಿರಾಡಿ ಘಾಟ್‌ ಮೇಲ್ದರ್ಜೆಗೇರಿಸುವ ಡಿಪಿಆರ್(ವಿಸ್ತೃತ ಯೋಜನಾ ವರದಿ) ಅಂತಿಮಗೊಳಿಸಲು ಸಚಿವಾಲಯದ ಮಧ್ಯಸ್ಥಿಕೆ ಕೋರಿದರು..

ಇದರೊಂದಿಗೆ ಪ್ರತಿ ಮುಂಗಾರಿನಲ್ಲಿ ಘಟ್ಟ ಪ್ರದೇಶದ ಕಡಿದಾದ ಇಳಿಜಾರು ಮತ್ತು ಹೆಚ್ಚಿನ ಮಳೆಯಿಂದ ರಸ್ತೆ ಮೇಲೆ ಭೂಕುಸಿತ ಉಂಟಾಗಿ ಇದರಿಂದ ಜನಜೀವನ ಮತ್ತು ರಸ್ತೆಸಂಪರ್ಕದ ಮೇಲಾಗುವ ಪರಿಣಾಮಗಳ ಕುರಿತು ಒತ್ತಿ ಹೇಳಿದರು.

ಇದೇ ವೇಳೆ ಬಿ.ಸಿ ರೋಡ್ ಮತ್ತು ಮುಕ್ಕಾ ನಡುವಿನ ಬಂದರು ಸಂಪರ್ಕ ರಸ್ತೆಗೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ಹಾಗೂ ಎಸ್‌ಪಿವಿಯನ್ನು ವಿಸರ್ಜಿಸುವ ಮತ್ತು ಎನ್‌ಎಚ್‌ಎಐಗೆ ಅದರ ಸಂಪೂರ್ಣ ಜವಾಬ್ದಾರಿಯನ್ನು ನೀಡುವ ಅಗತ್ಯತೆಯ ಬಗ್ಗೆಯೂ ಈ ಸಂದರ್ಭ ಚರ್ಚಿಸಲಾಯಿತು.

News Updates

ಎಸ್‌ಐಆ‌ರ್ ವಿಚಾರದಲ್ಲಿ ಬಿಜೆಪಿ ಕಾರ್ಯಕರ್ತರ ಬೆದರಿಸಿದರೆ ಸುಮ್ಮನಿರಲ್ಲ: ಪೊಲೀಸರಿಗೆ ಸಂಸದ ಕ್ಯಾ. ಚೌಟ ಎಚ್ಚರಿಕೆ – ಕಾಂಗ್ರೆಸ್ ತನ್ನ ಆರೋಪಗಳಿಗೆ ಸೂಕ್ತ ಸಾಕ್ಷ್ಯಾಧಾರಗಳನ್ನು ಒದಗಿಸಲಿ ಅಕ್ರಮವಾಗಿ ಮತ ರದ್ದು -ಮಾಡಲಾದ ವ್ಯಕ್ತಿಯನ್ನು ತಂದು ಚುನಾವಣಾಧಿಕಾರಿ ಮುಂದೆ ನಿಲ್ಲಿಸಲಿ: ಸಂಸದ ಸವಾಲು

[t4b-ticker]
error: Content is protected !!