ಭಾರತದ ವಸ್ತುಗಳ ಮೇಲೆ ಶೇ.25 ರಷ್ಟು ಸುಂಕ ಘೋಷಿಸಿದ ಟ್ರಂಪ್​: ಆಗಸ್ಟ್​ 1 ರಿಂದಲೇ ಜಾರಿ

Picture of Savistara

Savistara

Bureau Report

ವ್ಯಾಪಾರ ಒಪ್ಪಂದ ಮಾತುಕತೆಗಳು ನಡೆಯುತ್ತಿರುವ ನಡುವೆಯೇ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್​ ಭಾರತದ ಮೇಲೆ ಸುಂಕ ಪ್ರಮಾಣ ಘೋಷಿಸಿದ್ದಾರೆ.

ನವದೆಹಲಿ: ವಿಶ್ವದ ಯಾವುದೇ ನಾಯಕರು ಪಾಕಿಸ್ತಾನದ ಜೊತೆಗಿನ ನಮ್ಮ ಸಂಘರ್ಷವನ್ನು ತಡೆದಿಲ್ಲ ಎಂದು ಹೇಳುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು, ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ಗೆ ಪರೋಕ್ಷವಾಗಿ ಬಿಸಿ ಮುಟ್ಟಿಸಿದ್ದರು. ಇದಾದ ಮರುದಿನವಾದ ಇಂದು (ಬುಧವಾರ) ಟ್ರಂಪ್​ ಭಾರತದ ಮೇಲೆ ಶೇಕಡಾ 25 ರಷ್ಟು ತೆರಿಗೆ ವಿಧಿಸುವುದಾಗಿ ಘೋಷಿಸಿದ್ದಾರೆ.ಭಾರತವು ಮಿತ್ರ ರಾಷ್ಟ್ರವಾಗಿದ್ದರೂ, ಅದು ನಮ್ಮ ವಸ್ತುಗಳ ಮೇಲೆ ವಿಧಿಸುತ್ತಿರುವ ತೆರಿಗೆ ಅತ್ಯಧಿಕವಾಗಿದೆ. ಹೀಗಾಗಿ, ಆ ದೇಶದ ವಸ್ತುಗಳ ಮೇಲೆ ಶೇಕಡಾ 25 ರಷ್ಟು ಸುಂಕ ವಿಧಿಸುವುದಾಗಿ ಅವರದ್ದೇ ಒಡೆತನದ ಟ್ರುತ್​ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್​ ಹಂಚಿಕೊಂಡಿದ್ದಾರೆ.

ಭಾರತವು ರಷ್ಯಾದಿಂದ ಅಧಿಕ ತೈಲ ಖರೀದಿಸುತ್ತಿರುವನ್ನು ನಿಲ್ಲಿಸಬೇಕು ಎಂದು ಟ್ರಂಪ್​ ಸೂಚಿಸಿದ್ದರು. ಆದರೆ, ಇದಕ್ಕೆ ಭಾರತ ಸೊಪ್ಪು ಹಾಕಿರಲಿಲ್ಲ. ಅಮೆರಿಕ ಮತ್ತು ಭಾರತದ ಮಧ್ಯೆ ವ್ಯಾಪಾರ ಒಪ್ಪಂದ ಮಾತುಕತೆಗಳು ನಡೆಯುತ್ತಿರುವ ನಡುವೆಯೇ ಹಠಾತ್​ ಆಗಿ ಸುಂಕದ ಪ್ರಮಾಣವನ್ನು ಘೋಷಿಸಲಾಗಿದೆ.

ಟ್ರಂಪ್​ ಹೇಳಿದ್ದೇನು?

ಭಾರತದಿಂದ ಆಮದು ಮಾಡಿಕೊಳ್ಳುವ ಸರಕುಗಳ ಮೇಲೆ ಆಗಸ್ಟ್​ 1 ರಿಂದ ಶೇ.25 ರಷ್ಟು ಸುಂಕ ವಿಧಿಸಲಾಗುವುದು. ಭಾರತ ನಮ್ಮ ಮಿತ್ರ ರಾಷ್ಟ್ರವಾಗಿದ್ದರೂ, ಅವರೊಂದಿಗೆ ನಮ್ಮ ವ್ಯವಹಾರ ಅಷ್ಟಕ್ಕಷ್ಟೆ. ಅಮೆರಿಕದ ಸರಕುಗಳ ಮೇಲೆ ಭಾರತ ಅಧಿಕ ಸುಂಕ ವಿಧಿಸುತ್ತಿದೆ. ಎಲ್ಲ ದೇಶಗಳಿಗೆ ಹೋಲಿಸಿದರೆ ಅವರದ್ದು ಅಧಿಕ ತೆರಿಗೆಯಾಗಿದೆ ಎಂದು ಅಧ್ಯಕ್ಷ ಟ್ರಂಪ್ ಹೇಳಿದ್ದಾರೆ.

“ಅಲ್ಲದೆ, ಭಾರತ ಯಾವಾಗಲೂ ತಮ್ಮ ಮಿಲಿಟರಿ ಉಪಕರಣಗಳಲ್ಲಿ ಹೆಚ್ಚಿನ ಭಾಗವನ್ನು ರಷ್ಯಾದಿಂದ ಖರೀದಿಸಿದ್ದಾರೆ. ಚೀನಾದ ಬಳಿಕ ರಷ್ಯಾದಿಂದ ಅತ್ಯಧಿಕ ಪ್ರಮಾಣದಲ್ಲಿ ಇಂಧನ ಖರೀದಿಸುವ ರಾಷ್ಟ್ರವಾಗಿದೆ. ರಷ್ಯಾವು, ಉಕ್ರೇನ್‌ನಲ್ಲಿ ಹತ್ಯಾಕಾಂಡ ನಡೆಸುತ್ತಿದೆ. ಇದನ್ನು ನಿಲ್ಲಿಸಬೇಕು ಎಂದು ಎಲ್ಲರೂ ಬಯಸುವ ವೇಳೆ ಭಾರತದ ಈ ಧೋರಣೆ ಒಳ್ಳೆಯದಲ್ಲ. ಹೀಗಾಗಿ, ಭಾರತವು ಆಗಸ್ಟ್‌ನಿಂದ ತನ್ನ ಸರಕುಗಳನ್ನು ಅಮೆರಿಕಕ್ಕೆ ರಫ್ತು ಮಾಡುವಾಗ 25 ರಷ್ಟು ಪ್ರತಿಶತ ಸುಂಕವನ್ನು ಪಾವತಿಸುತ್ತದೆ ಎಂದು ಬರೆದುಕೊಂಡಿದ್ದಾರೆ.ಕಳೆದ ವಾರವಷ್ಟೆ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಯುಎಸ್ ಜೊತೆಗಿನ ವ್ಯಾಪಾರ ಮಾತುಕತೆಗಳು ಉತ್ತಮವಾಗಿ ಪ್ರಗತಿಯಲ್ಲಿವೆ ಎಂದು ಹೇಳಿದರು. ಆಗಸ್ಟ್ 1 ರಿಂದ ಜಾರಿಗೆ ಬರಲು ನಿಗದಿಯಾಗಿರುವ ಟ್ರಂಪ್ ಅವರ ದೇಶ-ನಿರ್ದಿಷ್ಟ ಸುಂಕಗಳಿಗೆ ಮುಂಚಿತವಾಗಿ ಅವರ ಹೇಳಿಕೆ ಬಂದಿತು.

ಉಭಯ ದೇಶಗಳ ನಡುವೆ ವ್ಯಾಪಾರ ಒಪ್ಪಂದದ ಕುರಿತು ಅಂತಿಮ ಸುತ್ತಿನ ಮಾತುಕತೆ ನಡೆಸಲು ಅಮೆರಿಕದ ತಂಡವು ಆಗಸ್ಟ್​ 25ರಂದು ನವದೆಹಲಿಗೆ ಭೇಟಿ ನೀಡಬೇಕಿದೆ. ದ್ವಿಪಕ್ಷೀಯ ಒಪ್ಪಂದದ ಚರ್ಚೆ ನಡೆಯಲಿದೆ. ಇದಕ್ಕೂ ಮುನ್ನವೇ ಟ್ರಂಪ್​ ಅವರು ನೇರವಾಗಿ ಸುಂಕವನ್ನು ಘೋಷಿಸಿದ್ದಾರೆ.

News Updates

BREAKING NEWS ಸುಳ್ಯ :ಪಂಜ ಕಾಂಗ್ರೆಸ್ ಪಕ್ಷದ ಹುದ್ದೆಗೆ ರಾಜಿನಾಮೆ ನೀಡಿದ ದಿನೇಶ್ ಪುಂಡಿಮನೆ, ಕುಸುಮಾಧರ ಕೆರೆಯಡ್ಕ,ಲೋಕನಾಥ್ ಕುದ್ವ |ನಮ್ಮ ಮಾತನ್ನು ಪಕ್ಷದ ನಾಯಕರು ಉಳಿಸಿಕೊಂಡಿಲ್ಲ, ದೇವಸ್ಥಾನ ವ್ಯವಸ್ಥೆ ಸರಿದಾರಿಗೆ ತರುವ ಕೆಲಸವಾಗಲಿ: ದಿನೇಶ್ ಪುಂಡಿಮನೆ

News Updates

ಬೆಳ್ತಂಗಡಿ : ಮೊಗ್ರು ಜೈ ಶ್ರೀರಾಮ ಸೇವಾ ಟ್ರಸ್ಟ್ ಅಲೆಕ್ಕಿ -ಮುಗೇರಡ್ಕ ಮೊಗ್ರು, ಶ್ರೀ ರಾಮ ಶಿಶುಮಂದಿರದ 5 ನೇ ವರ್ಷದ ಶ್ರೀ ಕೃಷ್ಣೋತ್ಸವ. |ಕಾಶಿ ಶೆಟ್ಟಿ ನವಶಕ್ತಿ ಗುರುವಾಯನಕೆರೆ ಇವರ ಸ್ಮರಣಾರ್ಥ ಕಾಶಿ ಶೆಟ್ಟಿ ವಿದ್ಯಾ ಮಂದಿರ, ಹಾಗೂ ಶಾಸಕ ಹರೀಶ್ ಪೂಂಜಾರವರ ನೆರವಿನ ಅಡುಗೆ ಕೋಣೆ ಉದ್ಘಾಟನಾ ಕಾರ್ಯಕ್ರಮ |ಮಕ್ಕಳ ಶ್ರೀಕೃಷ್ಣ ಮತ್ತು ರಾಧೆಯರ ಸ್ಪರ್ಧೆ, ಮೊಸರು ಕುಡಿಕೆ, ಆಟೋಟ ಸ್ಪರ್ಧೆ

[t4b-ticker]
error: Content is protected !!