ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅನುಗುಣವಾಗಿ ಪದವಿ ಪಠ್ಯಕ್ರಮ ಪರಿಷ್ಕರಿಸಿ: ಡಾ| ಸರ್ಜಿ

Picture of Savistara

Savistara

Bureau Report

ಬೆಂಗಳೂರು : ರಾಜ್ಯದ ಪದವಿ ಪಠ್ಯಕ್ರಮಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸಲು ಸಮರ್ಪಕವಾದ ವಿಷಯಗಳು ಒಳಗೊಂಡಿಲ್ಲ. ಆದ್ದರಿಂದ ಕೇಂದ್ರ ಸರ್ಕಾರದಿಂದ ಅತಿ ಹೆಚ್ಚು ಉದ್ಯೋಗ ಸೃಷ್ಟಿಯಾದರೂ ಆಯ್ಕೆಯಾಗುವ ಅಭ್ಯರ್ಥಿಗಳು ಅತಿವಿರಳ, ಹಾಗಾಗಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅನುಗುಣವಾಗಿ ರಾಜ್ಯದ ಪದವಿ ಪಠ್ಯಕ್ರಮಗಳನ್ನು ಪರಿಷ್ಕರಣೆ ಮಾಡುವಂತೆ ಸದನದಲ್ಲಿ ವಿಧಾನ ಪರಿಷತ್ ಶಾಸಕ ಡಾ. ಧನಂಜಯ ಸರ್ಜಿ ಉನ್ನತ ಶಿಕ್ಷಣ ಸಚಿವರಾದ ಎಂ.ಸಿ ಸುಧಾಕರ್ ಅವರಿಗೆ ಮನವಿ ಮಾಡಿದರು.ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಒಳ್ಳೆಯ ಅಂಕಗಳನ್ನು ತೆಗೆದು ಸರ್ಕಾರಿ ಕೆಲಸಗಳನ್ನು ಪಡೆದುಕೊಳ್ಳಬೇಕೆಂದು ಲಕ್ಷಾಂತರ ಅಭ್ಯರ್ಥಿಗಳು ಕನಸು ಕಂಡಿರುತ್ತಾರೆ, ಆ ಕನಸನ್ನು ನನಸು ಮಾಡಿಕೊಳ್ಳಲು ಸಾಕಷ್ಟು ಹಣವನ್ನು ಖರ್ಚು ಮಾಡಿ ಬೆಂಗಳೂರು, ವಿಜಯಪುರ, ಧಾರವಾಡದಂತಹ ದೊಡ್ಡ ದೊಡ್ಡ ನಗರಗಳಲ್ಲಿ ಕೋಚಿಂಗ್‌ಗೆ ಸೇರಿ ಹಗಲು ರಾತ್ರಿ ವ್ಯಾಸಂಗ ಮಾಡುತ್ತಿದ್ದಾರೆ. ಆದರೆ ನಮ್ಮ ಸರ್ಕಾರಿ ಪದವಿ ಕಾಲೇಜು ಗಳಲ್ಲಿ ಬಿ ಎ, ಬಿ ಎಸ್ ಸಿ, ಬಿ ಕಾಂ ಪದವೀಧರ ಪಠ್ಯ ಕ್ರಮ ಮತ್ತು ಯುಪಿಎಸ್ಸಿ ಮತ್ತು ಎಸ್ ಎಸ್ ಸಿ ಮತ್ತು ಬ್ಯಾಂಕಿಂಗ್, ರೈಲ್ವೇಸ್, ಕೆಪಿಎಸ್ ಸಿ, ಕೆಇಎ, ಮುಂತಾದ ರಾಜ್ಯ ಹಾಗೂ ಕೇಂದ್ರ ಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಗಳ ಪಠ್ಯಕ್ರಮದ ನಡುವೆ ಸ್ಪಷ್ಟವಾದ ವ್ಯತ್ಯಾಸವಿದೆ. ನಮ್ಮ ಪದವಿಪೂರ್ವ ಪಠ್ಯಕ್ರಮವು ಮುಖ್ಯವಾಗಿ ಶೈಕ್ಷಣಿಕ ಮತ್ತು ಸಿದ್ಧಾಂತಧಾರಿತವಾಗಿದ್ದು ಸ್ಪರ್ಧಾತ್ಮಕ ಪರೀಕ್ಷೆಗಳು ಮಾನಸಿಕ ಸಾಮರ್ಥ, ತಾರ್ಕಿಕತೆ ಪ್ರಚಲಿತ ಘಟನೆಗಳು ಇಂಗ್ಲೀಷ್ ವ್ಯಾಕರಣ ಹಾಗೂ ಕಂಪ್ಯೂಟ‌ರ್ ಜ್ಞಾನವನ್ನು ಕೇಳುತ್ತೇವೆ. ಇವುಗಳಲ್ಲಿ ಯಾವುದೂ ನಮ್ಮ ಪ್ರಸ್ತುತ ಪದವಿ ಪಠ್ಯಕ್ರಮದಲ್ಲಿ ಸಮರ್ಪಕವಾಗಿ ಒಳಗೊಂಡಿಲ್ಲ ಎಂದು ಹೇಳಿದರು.ಈ ವ್ಯತ್ಯಾಸದಿಂದ ಕರ್ನಾಟಕದ ಪಪೂ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಬ್ಯಾಂಕಿಂಗ್ ಎಸ್ ಎಸ್ ಸಿ ಹಾಗೂ ಕೇಂದ್ರ ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ಕೇಂದ್ರ ಸರ್ಕಾರಿ ಹುದ್ದೆಗಳಲ್ಲಿ ಸೇರುವ ಪ್ರಮಾಣ ಉತ್ತರಪ್ರದೇಶ, ಬಿಹಾರ, ಪಶ್ಚಿಮ ಬಂಗಾಳ ರಾಜ್ಯಗಳಿಗಿಂತ ತುಂಬಾ ಕಡಿಮೆ ಇರಲು ಪ್ರಮುಖ ಕಾರಣವಾಗಿದೆ.2024ರಲ್ಲಿ ನಡೆದ ಎಸ್ ಎಸ್ ಸಿ ಪರೀಕ್ಷೆಯಲ್ಲಿ ದೆಹಲಿಯ 589, ಹರಿಯಾಣದ 292, ತಮಿಳು ನಾಡಿನ 119, ಬಿಹಾರದ 80 ಅಭ್ಯರ್ಥಿಗಳು ಆಯ್ಕೆಯಾಗಿ ರುತ್ತಾರೆ. ಆದರೆ ಕರ್ನಾಟಕದಿಂದ ಕೇವಲ 40 ಅಭ್ಯರ್ಥಿಗಳು ಮಾತ್ರ ಆಯ್ಕೆಯಾಗಿರುತ್ತಾರೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.ಕರ್ನಾಟಕದಲ್ಲಿ ವರ್ಷಕ್ಕೆ ಸೃಷ್ಟಿಯಾಗುವ ಹುದ್ದೆಗಳ ಸಂಖ್ಯೆ 2000 ಆಗಿದ್ದು, ಕೇಂದ್ರದಲ್ಲಿ ಅತೀ ಹೆಚ್ಚು

ಹುದ್ದೆಗಳು ಸೃಷ್ಟಿಯಾಗು ತ್ತಿರುವುದರಿಂದ ರಾಜ್ಯದ ಅಭ್ಯರ್ಥಿ ಗಳಿಗೆ ಸ್ಪರ್ಧೆ ಮಾಡಲಾಗದೆ ಇಲ್ಲಿರುವ ಅಭ್ಯರ್ಥಿಗಳಿಗೆ ಅನ್ಯಾಯವಾಗುತ್ತಿದೆ. ಇದಕ್ಕೆ ನಮ್ಮ ಪದವಿ ಪಠ್ಯ ಕ್ರಮ ಮತ್ತು ಪರೀಕ್ಷಾ ಕ್ರಮ ವ್ಯತ್ಯಾಸವಿರುವುದು ಸ್ಪಷ್ಟವಾಗಿ ಕಾಣುತ್ತದೆ. ಲಕ್ಷಾಂತರ ಅಭ್ಯರ್ಥಿಗಳು ಸರ್ಕಾರಿ ಕೆಲಸಕ್ಕೆ ಸೇರಬೇಕೆಂಬ ಮಹಾದಾಸೆಯಿಂದ ಹಗಲಿರುಳೆನ್ನದೆ ವ್ಯಾಸಂಗ ಮಾಡುತ್ತಿರುತ್ತಾರೆ, ಆದರೆ ಕೆಪಿಎಸ್‌ಸಿ ಹಲವು ಬಾರಿ 2 ರಿಂದ 4 ವರ್ಷಗಳವರೆಗೆ ವಿಳಂಬ ವಾಗುತ್ತವೆ, ಇದರಿಂದ ಅನೇಕ ಅರ್ಹ ಅಭ್ಯರ್ಥಿಗಳು ವಯೋಮಿತಿ ಯನ್ನು ದಾಟಿ ನ್ಯಾಯ ಸಮ್ಮತ ಅವಕಾಶವನ್ನೆ ಕಳೆದುಕೊಳ್ಳುತ್ತಾರೆ. ಇದಕ್ಕೆ ವಿರುದ್ಧವಾಗಿ ಸ್ಟಾಪ್ ಸೆಲೆಕ್ಷನ್ ಕಮಿಷನ್ ಸಂಪೂರ್ಣ ನೇಮಕಾತಿ ಪ್ರಕ್ರಿಯೆಯನ್ನು 8 ರಿಂದ 12 ತಿಂಗಳೊಳಗೆ ಪೂರ್ಣಗೊಳಿಸಿ ಸಮಯಕ್ಕೆ ತಕ್ಕಂತೆ ಉದ್ಯೋಗವ ಕಾಶಗಳನ್ನು ಒದಗಿಸುತ್ತಿದೆ. ಆದ್ದರಿಂದ ವಿಳಂಬಕ್ಕೆ ಅವಕಾಶ ನೀಡದೆ ಅಭ್ಯರ್ಥಿಗಳಿಗೆ ಉಪಯೋಗವಾಗು ವಂತೆ ಕ್ರಮ ವಹಿಸುವಂತೆ ಒತ್ತಾಯಿಸಿದರು.ಈ ವೇಳೆ ಸದನದ ಇತರೆ ಸದಸ್ಯರು ಕೂಡ ಧ್ವನಿಗೂಡಿಸಿ ಇದಕ್ಕೆ ಶಿಕ್ಷಣ ತಜ್ಞರ ಸಮಿತಿ ರಚನೆ ಮಾಡಬೇಕು ಎಂದು ಹೇಳಿದರು.ಈ ನಿಟ್ಟಿನಲ್ಲಿ ಪಠ್ಯಕ್ರಮವನ್ನು ತಿದ್ದುಪಡಿ ಮಾಡಿ ಪದವಿ ಹಂತದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಸಿದ್ದತೆ ನಡೆಸಲು ಸಹಾಯವಾಗುವಂತೆ ರಾಜ್ಯ ಪದವಿ ಪಠ್ಯಕ್ರಮಗಳಲ್ಲಿ ಮಾನಸಿಕ ಸಾಮರ್ಥ್ಯ ತಾರ್ಕಿಕ ಸಾಮರ್ಥ ಇಂಗ್ಲೀಷ್ ವ್ಯಾಕರಣ ಪ್ರಚಲಿತ ಘಟನೆಗಳು ಸಾಮಾನ್ಯ ಜ್ಞಾನ ಮತ್ತು ಕಂಪ್ಯೂಟರ್ ಜ್ಞಾನ ಸೇರಿದಂತೆ ಸ್ಪರ್ಧಾತ್ಮಕ ಪರೀಕ್ಷಾ ಸಿದ್ಧತಾ ಘಟಕಗಳನ್ನು ಸೇರಿಸುವುದು ಎಲ್ಲಾ ಸರ್ಕಾರಿ ಪದವಿ ಕಾಲೇಜುಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷಾ ಮಾರ್ಗದರ್ಶನ ಕೇಂದ್ರಗಳನ್ನು ಸ್ಥಾಪಿಸುವುದು. ನೇಮಕಾತಿ ವೇಳಾಪಟ್ಟಿಯನ್ನು ಸುಗಮ ಗೊಳಿಸಲು, ನೇಮಕಾತಿ ವಿಳಂಬ ದಿಂದ ಹಾನಿಗೊಳಗಾದ ಅಭ್ಯರ್ಥಿ ಗಳಿಗೆ ವಯೋಮಿತಿಯಲ್ಲಿನ ಸಡಿಲಿಕೆ ನೀಡಲು ಮತ್ತು ಸಂಪೂರ್ಣ ಪಾರದರ್ಶಕತೆಯನ್ನು ಖಾತ್ರಿ ಪಡಿಸಲು ಸರ್ಕಾರ ಕ್ರಮ ಕೈಗೊಳ್ಳುವಂತೆ ಕೋರಿದರು.ಇದಕ್ಕೆ ಪ್ರತಿಕ್ರಿಯಿಸಿದ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ ಸುಧಾಕರ್ ಸ್ಪಂದಿಸುವ ಭರವಸೆ ನೀಡಿದರು.

[t4b-ticker]
error: Content is protected !!