ಬೆಂಗಳೂರು: ಧರ್ಮಸ್ಥಳ ವಿಚಾರದ ಕುರಿತು ಯಾರೋಬ್ಬರು ಭಾವನಾತ್ಮಕವಾಗಿ ಹೇಳಿಕೆ ನೀಡಬೇಡಿ ಎಂದು ಸಿಎಂ ಸಿದ್ದರಾಮಯ್ಯ ಅವರು ಸಚಿವರಿಗೆ ಹಾಗೂ ಕಾಂಗ್ರೆಸ್ ಶಾಸಕರಿಗೆ ಮಹತ್ವದ ಎಚ್ಚರಿಕೆ ನೀಡಿದ್ದಾರೆ.
ಇತ್ತೀಚೆಗೆ ನಡೆಸ ಸಚಿವ ಸಂಪುಟ ಸಭೆಯಲ್ಲಿ ಧರ್ಮಸ್ಥಳದಲ್ಲಿ ಶವಗಳ ಶೋಧನೆ ವಿಚಾರವನ್ನು ಬೇಳೂರು ಗೋಪಾಲಕೃಷ್ಣ ಅವರು ಪ್ರಸ್ತಾಪಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿಗಳು, ಈ ಪ್ರಕರಣದಲ್ಲಿ ಯಾರೊಬ್ಬರೂ ಭಾವನಾತ್ಮಕವಾಗಿ ಹೇಳಿಕೆ ನೀಡಬೇಡಿ. ಈ ವಿಚಾರದಲ್ಲಿ ಪ್ರತಿಯೊಬ್ಬ ಸಚಿವ, ಶಾಸಕರೂ ಎಚ್ಚರ ವಹಿಸಬೇಕು ಎಂದು ಹೇಳಿದರು.
ಸಾರ್ವಜನಿಕ ವಲಯದಲ್ಲಿ ಉತ್ತಮ ಅಭಿಪ್ರಾಯ ಇದೆ” ಎಸ್‌ಐಟಿ ರಚನೆ ಬಗ್ಗೆ ಸಾರ್ವಜನಿಕ ವಲಯದಲ್ಲಿ ಉತ್ತಮ ಅಭಿಪ್ರಾಯವೇ ಇದೆ. ಕೆಲವು ಯೂಟೂಬರ್, ಆರ್‌ಟಿಐ ಕಾರ್ಯಕರ್ತರು ಅನಗತ್ಯವಾಗಿ ಗೊಂದಲ ಸೃಷ್ಟಿಸುತ್ತಿದ್ದಾರೆ. ತನಿಖೆ ಮುಗಿಯುವ ವರೆಗೆ ಈ ಬಗ್ಗೆ ಯಾರೊಬ್ಬರೂ ಮಾತನಾಡುವುದು ಬೇಡ ಎಂದು ಸಿಎಂ ಕಿವಿಮಾತು ಹೇಳಿದರು ಎನ್ನಲಾಗಿದೆ.
3 ತಿಂಗಳಿಗೊಮ್ಮೆ ಸಭೆ ನಡೆಸಬೇಕುಅಧಿವೇಶನದಲ್ಲಿ ಬಹಳಷ್ಟು ಸಚಿವರು ಇರುವುದಿಲ್ಲ. ಎಲ್ಲ ಸಚಿವರು ಕಡ್ಡಾಯವಾಗಿ ಹಾಜರಿದ್ದು, ಸಮರ್ಪಕವಾಗಿ ಉತ್ತರ ಹೇಳಲು ಸೂಚಿಸಿ ಎಂಬ ಹಿರಿಯ ಶಾಸಕ ಬಿ.ಆರ್.ಪಾಟೀಲ್ ಸಲಹೆಗೆ ಸಿಎಂ ಸಹಮತ ಸೂಚಿಸಿದ್ದಾರೆ. ಜತೆಗೆ ಇತ್ತೀಚೆಗೆ ಮಾಡಿದಂತೆ 2 – 3 ತಿಂಗಳಿಗೊಮ್ಮೆ ಸಿಎಂ ಅಧ್ಯಕ್ಷತೆಯಲ್ಲಿ ಶಾಸಕರ ಜಿಲ್ಲಾವಾರು ಸಭೆಗಳು ನಡೆಸಬೇಕು ಎಂದು ಬಿ.ಆರ್.ಪಾಟೀಲ್ ಎಂದು ಮನವಿ ಮಾಡಿದರು.
ಕಾಲ್ತುಳಿತ ವಿವರಣೆ ನೀಡಿದ ಸಿಎಂಆರ್‌ಸಿಬಿ ಕಾಲ್ತುಳಿದ ದುರಂತ ಪ್ರಸ್ತಾಪಿಸಿ ಸರಕಾರದ ಮೇಲೆ ಪ್ರತಿಪಕ್ಷ ವಾಗ್ದಾಳಿ ನಡೆಸಿರುವ ವಿಚಾರ ಸಭೆಯಲ್ಲಿಚರ್ಚೆಗೆ ಬಂತು. ಈ ಬಗ್ಗೆ ಮುಖ್ಯಮಂತ್ರಿಗಳು ಸಭೆಗೆ ಸ್ಪಷ್ಟ ಚಿತ್ರಣ ನೀಡಿದರು. ”ಮೊದಲ ಸಾವು ಸಂಭವಿಸಿದ ಮಾಹಿತಿ ತಮಗೆ ಅಧಿಕಾರಿಗಳು ನೀಡಿರಲಿಲ್ಲಮತ್ತು ಸಂಜೆ 5.30 ರವರೆಗೆ ಸಾವುಗಳ ಸಂಖ್ಯೆಯ ಬಗ್ಗೆಯೂ ಖಚಿತವಾಗಿ ಮಾಹಿತಿ ಕೊಡಲಿಲ್ಲ. ಕಾನೂನು ಸಲಹೆಗಾರ ಪೊನ್ನಣ್ಣ ಅವರು ಫೋನ್ ಮಾಡಿ ತಿಳಿಸುವವರೆಗೆ ನನಗೆ ಸಾವುಗಳ ಬಗ್ಗೆ ವಿವರ ಮತ್ತು ಮಾಹಿತಿ ಇರಲಿಲ್ಲ. ಹಾಗಾಗಿ ಹಿರಿಯ ಪೊಲೀಸ್ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಲಾಯಿತು,” ಎಂದು ಸಿಎಂ ತಿಳಿಸಿದ್ದಾರೆ.














































