ಪುತ್ತೂರು: ವಿಶ್ವಹಿಂದೂ ಪರಿಷತ್ ಮತ್ತು ಬಜರಂಗ ದಳ ವತಿಯಿಂದ ಅಖಂಡ ಭಾರತ ಸಂಕಲ್ಪ ದಿನಾಚರಣೆ ಹಿನ್ನೆಲೆಯಲ್ಲಿ ಬೃಹತ್ ಪಂಜಿನ ಮೆರವಣಿಗೆ ನಿನ್ನೆ ಪುತ್ತೂರು ಲ್ಲಿ ನಡೆಯಿತು.

ಮುಖ್ಯ ಭಾಷಣಕರರಾಗಿ ಪ್ರಸಾದ್ ಕುಮಾರ್ ಬಂಟ್ವಾಳ ಮಾತನಾಡಿ 1947 ರಲ್ಲಿ ಸ್ವಾತಂತ್ರ್ಯ ದೊರೆತ ಸಂಭ್ರಮದಲ್ಲಿ ನಮ್ಮ ರಾಜಕಾರಣಿಗಳ ತುಷ್ಟಿಕರಣ ನೀತಿಯಿಂದ ಭಾರತ ವಿಬ್ಬಾಗವಾಯಿತು ಈಗಲೂ ವೋಟ್ ಬ್ಯಾಂಕ್ ಗಾಗಿ ತುಷ್ಟಿಕರಣ ನೀತಿ ನಿಂತಿಲ್ಲ ಹಿಂದೂ ಸಮಾಜ ಇಂತಹ ವಿಚಾರದಲ್ಲಿ ಒಗ್ಗಟ್ಟಾಗಿ ನಿಲ್ಲಬೇಕೆಂದು ಕರೆ ನೀಡಿದರು.

ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಬಿಜೆಪಿ ಜಿಲ್ಲಾ ಪ್ರಕೋಷ್ಠಗಳ ಸಹ ಸಂಚಾಲಕ ಪ್ರಸನ್ನ ದರ್ಬೆ ವಹಿಸಿದ್ದರು.ಅಮರ್ ಜವಾನ್ ಜ್ಯೋತಿಯಿಂದ ಕಿಲ್ಲೆ ಮೈದಾನ ವರೆಗೆ ಪಂಜಿನ ಮೆರವಣಿಗೆ ನಡೆಯಿತು.

ಕಾರ್ಯಕ್ರಮ ದಲ್ಲಿ ಮಾಜಿ ಶಾಸಕ ಸಂಜೀವ ಮಠಂದೂರು,ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯತೀಶ್ ಅರ್ವರ್,ಬಜರಂಗ ದಳ ಮುಖಂಡರು,ಸಂಘಟನೆ ಪ್ರಮುಖರು,ಕಾರ್ಯಕರ್ತರು ಉಪಸ್ಥಿತರಿದ್ದರು.















































