ಮಲೆನಾಡು ಹಾಗೂ ಘಟ್ಟ ಪ್ರದೇಶದಲ್ಲಿ ಭಾರಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಶಿರಾಡಿ ಘಾಟ್ ನಲ್ಲಿ ಗುಡ್ಡ ಕುಸಿತವಾಗಿದ್ದು, ರಸ್ತೆ ಸಂಚಾರ ಸಂಪೂರ್ಣ ಬಂದ್ ಆಗಿದೆ. ಸಕಲೇಶಪುರದ ಮಾರನಹಳ್ಳಿಯಿಂದ ಅಲ್ಲಲ್ಲಿ ಗುಡ್ ಕುಸಿತವಾಗಿದ್ದು, ರಸ್ತೆಗಳಿಗೆ ಮರಗಳು ಉರುಳಿವೆ ಎಂದು ಹೇಳಲಾಗಿದೆ. ಶಿರಾಡಿಘಾಟ್ ನ ಗಡಿ ಚಾಮುಂಡೇಶ್ವರಿ ದೇವಾಲಯದವರೆಗೂ ನೀರು ಬಂದಿದ್ದು, ರಸ್ತೆ ಸಂಚಾರ ಬಂದ್ ಆಗಿದೆ ಎಂದು ತಿಳಿದುಬಂದಿದೆ. ಮಾರನಹಳ್ಳಿಯಿಂದ ಗುಂಡ್ಯದವರೆಗೆ ಘಾಟ್ ರಸ್ತೆಯಲ್ಲಿ ಎಂಟು ಕಡೆ ಮರಗಳು ಧರೆಗುರುಳಿದ್ದು, ರಾತ್ರಿ ಸಂಚಾರ ಮಾಡದೇ ಇರುವುದು ಉತ್ತಮವೆಂದು ಮೂಲಗಳು ತಿಳಿಸಿವೆ.
ಭಾರೀ ಮಳೆಯಿಂದಾಗಿ ಶಿರಾಡಿಘಾಟ್ ನಲ್ಲಿ ಹಲವೆಡೆ ಗುಡ್ಡ ಕುಸಿತ ಫುಲ್ ಬಂದ್
Savistara
Bureau Report
[t4b-ticker]














































