ಜಿ.ಎಸ್ ಟಿ ಹೊರೆ ಇಳಿಕೆ ಯಿಂದ ಮಧ್ಯಮ ಮತ್ತು ಜನಸಾಮಾನ್ಯರಿಗೆ ಅನುಕೂಲವಾಗಿದ್ದು ಮೋದಿ ಸರ್ಕಾರದ ಐತಿಹಾಸಿಕ ನಿರ್ಧಾರವಾಗಿದೆ : ಸಂಸದ ಕ್ಯಾ ಬ್ರಿಜೇಶ್ ಚೌಟ

Picture of Savistara

Savistara

Bureau Report

ಮಂಗಳೂರು: ಕೇಂದ್ರ ಸರ್ಕಾರ ಜಿಎಸ್‌ಟಿಯನ್ನು 2 ಸ್ಲ್ಯಾಬ್ ಗೆ
ಇಳಿಕೆ ಮಾಡಿರುವುದು ಐತಿಹಾಸಿಕ ನಿರ್ಧಾರ. ಹಬ್ಬ ಸಂದರ್ಭ ಈ ರೀತಿ ತೆರಿಗೆ ಇಳಿಕೆ ಮಾಡಿರುವುದು ಜನರ ಸಂಭ್ರಮ ಇಮ್ಮಡಿಗೊಳಿಸಿದೆ ಎಂದು ದಕ್ಷಿಣ ಕನ್ನಡ ಸಂಸದ ಕ್ಯಾ.ಬ್ರಿಜೇಶ್ ಚೌಟ ಹೇಳಿದರು.

ಕೇಂದ್ರ ಜಿಎಸ್‌ಟಿ ಕೌನ್ಸಿಲ್ ಜಿಎಸ್‌ಟಿ ಅನುಷ್ಠಾನ ಮಾಡುವಾಗ 4 ಸ್ಲ್ಯಾಬ್‌ಗಳಾಗಿ ವಿಂಗಡಣೆ ಮಾಡಿದ್ದು, ಇದೀಗ ಅದನ್ನು 2ಕ್ಕೆ ಇಳಿಕೆ ಮಾಡಲಾಗಿದೆ. ಉದ್ಯಮ, ಕೈಗಾರಿಕೆ, ಕೃಷಿ, ಶೈಕ್ಷಣಿಕ, ಆರೋಗ್ಯ, ರಕ್ಷಣೆ, ಅಟೋಮೊಬೈಲ್, ಇಲೆಕ್ಟ್ರಾನಿಕ್ ವಲಯಕ್ಕೆ ಭಾರಿ ಅನುಕೂಲವಾಗಿದೆ. ಇದರಿಂದ ಪರೋಕ್ಷ ಉದ್ಯೋಗ, ಉದ್ಯಮ ವಲಯಕ್ಕೆ ಮತ್ತಷ್ಟು ಅನುಕೂಲವಾಗಿದೆ ಎಂದರು.

ವಿಕಸಿತ,ಆತ್ಮನಿರ್ಭರ ಭಾರತ ನಿರ್ಮಾಣಕ್ಕೆ ಪೂರಕವಾಗಿ ಜನರಿಗೆ ರಾಷ್ಟ್ರ ನಿರ್ಮಾಣದಲ್ಲಿ ತೊಡಗಿಸಿಕೊಳ್ಳಲು ಈ ನಿರ್ಧಾರ ಶಕ್ತಿ ನೀಡಲಿದೆ. ನಿತ್ಯ ಬಳಕೆಯ ವಸ್ತುಗಳು ಶೇ.5ರ ಸ್ಲ್ಯಾಬ್‌ಗೆ ಸೇರ್ಪಡೆಗೊಂಡಿರುವುದು ಸಾಮಾನ್ಯ ಜನರಿಗೆ ನೆಮ್ಮದಿಯ ಸಂಗತಿ. ಆರೋಗ್ಯ ಕ್ಷೇತ್ರದಲ್ಲಿ ಜೀವರಕ್ಷಕ ಔಷಧಿಗಳಿಗೆ ತೆರಿಗೆ ಇಳಿಸಿರುವುದು ಅತಿದೊಡ್ಡ ಕೊಡುಗೆಯಾಗಿದ್ದು, ವೇತನ ಪಡೆಯುವ ವರ್ಗದ ಮೇಲಿದ್ದ ಹೊರೆ ಕಡಿಮೆಯಾಗಿದೆ ಎಂದರು.

ದ.ಕ.ಕ್ಕೆ ವಿಶೇಷ ಪ್ಯಾಕೇಜ್ ಘೋಷಿಸಿ

ದ.ಕ. ಜಿಲ್ಲೆಯಲ್ಲಿ ಈ ಬಾರಿ ಅತಿವೃಷ್ಟಿಯಿಂದ ಹಲವೆಡೆ ಹಾನಿ ಸಂಭವಿಸಿದೆ. ಜಿಲ್ಲಾ ಉಸ್ತುವಾರಿ ಸಚಿವರು ಕೂಡಲೇ ಜಿಲ್ಲೆಯ ಜನಪ್ರತಿನಿಧಿಗಳ ಸಭೆ ನಡೆಸಬೇಕು. ಮಳೆಹಾನಿ, ಪ್ರಕೃತಿ ವಿಕೋಪಕ್ಕೆ ಸಂಬಂಧಿಸಿ ಪರಿಹಾರ ನೀಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಜಿಲ್ಲೆಗೆ ವಿಶೇಷ ಪ್ಯಾಕೇಜ್ ನೀಡಬೇಕು ಎಂದು ಕ್ಯಾ.ಚೌಟ ಆಗ್ರಹಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರೇಮಾನಂದ ಶೆಟ್ಟಿ, ಆರ್ಥಿಕ ಪ್ರಕೋಷ್ಠ ಸಂಚಾಲಕ ಸಿಎ ಶಾಂತಾರಾಮ ಶೆಟ್ಟಿ, ಕೋಶಾಧಿಕಾರಿ ಸಂಜಯ್ ಪ್ರಭು, ವಕ್ತಾರರಾದ ಅರುಣ್ ಶೇಟ್, ಪ್ರಸನ್ನ ದರ್ಬೆ,
ಮಾಧ್ಯಮ ಸಂಚಾಲಕ ವಸಂತ್ ಪೂಜಾರಿ, ಉಪಸ್ಥಿತರಿದ್ದರು.

News Updates

ಅಂತಿಮ ಹಂತ ತಲುಪಿದ ಕೋಟೆಗಂಗೂರು ರೈಲ್ವೆ ಕೋಚಿಂಗ್ ಡಿಪೋ ಕಾಮಗಾರಿ; ಸಂಸದ ಬಿ.ವೈ.ರಾಘವೇಂದ್ರ ಅವರ ನಿರಂತರ ಪರಿಶ್ರಮದ ಪ್ರತಿಫಲ | ಯೋಜನೆಗೆ ಇಲ್ಲಿವರೆಗೆ 58.82 ಕೋಟಿ ರೂ. ವೆಚ್ಚ; ನಿಲ್ದಾಣ ಹಾಗೂ ಸೇವಾ ಕಟ್ಟಡಗಳ ನಿರ್ಮಾಣ ಕಾಮಗಾರಿ ಪೂರ್ಣ; ಪ್ರಸಕ್ತ ಸಾಲಿಗೆ 9.5 ಕೋಟಿ ರೂ. ಅನುದಾನ ಬಿಡುಗಡೆ

News Updates

ಅಂತಿಮ ಹಂತ ತಲುಪಿದ ಕೋಟೆಗಂಗೂರು ರೈಲ್ವೆ ಕೋಚಿಂಗ್ ಡಿಪೋ ಕಾಮಗಾರಿ; ಸಂಸದ ಬಿ.ವೈ.ರಾಘವೇಂದ್ರ ಅವರ ನಿರಂತರ ಪರಿಶ್ರಮದ ಪ್ರತಿಫಲ | ಯೋಜನೆಗೆ ಇಲ್ಲಿವರೆಗೆ 58.82 ಕೋಟಿ ರೂ. ವೆಚ್ಚ; ನಿಲ್ದಾಣ ಹಾಗೂ ಸೇವಾ ಕಟ್ಟಡಗಳ ನಿರ್ಮಾಣ ಕಾಮಗಾರಿ ಪೂರ್ಣ; ಪ್ರಸಕ್ತ ಸಾಲಿಗೆ 9.5 ಕೋಟಿ ರೂ. ಅನುದಾನ ಬಿಡುಗಡೆ

[t4b-ticker]
error: Content is protected !!