ಸುಳ್ಯ ತಾಲೂಕಿನ ಸುಳ್ಯ ನಗರ ಪಂಚಾಯತಿಗೆ MLC ಕಿಶೋರ್ ಕುಮಾರ್ ಪುತ್ತೂರು ಭೇಟಿ

Picture of Savistara

Savistara

Bureau Report

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಸುಳ್ಯ ಪಟ್ಟಣ ಪಂಚಾಯಿತಿಗೆ ಇಂದು ಭೇಟಿ ನೀಡಿ ಪಟ್ಟಣ ಪಂಚಾಯತಿಯ ಅಧ್ಯಕ್ಷರು, ಉಪಾಧ್ಯಕ್ಷರು, ಸ್ಥಾಯಿ ಸಮಿತಿ ಅಧ್ಯಕ್ಷರು ಹಾಗೂ ಸದಸ್ಯರು, ಮತ್ತು ಮುಖ್ಯ ಅಧಿಕಾರಿ , ಇಂಜಿನಿಯರ್, ಅರೋಗ್ಯ ನಿರೀಕ್ಷಕರು, ಇತರ ಅಧಿಕಾರಿ ವರ್ಗ, ಸಿಬ್ಬಂದಿಗಳೊಂದಿಗೆ ಕೇಂದ್ರ ಸರ್ಕಾರದ ಯೋಜನೆಗಳಾದ ಪ್ರಧಾನ ಮಂತ್ರಿ ಆವಾಸ್ ಯೋಜನೆ, 15 ನೇ ಹಣಕಾಸು ಅನುದಾನ, ಸ್ವಚ್ಛ ಭಾರತ ಮಿಷನ್ (SBM), ಅಮೃತ್ 2.0 ಮತ್ತು ರಾಜ್ಯ ಸರಕಾರದ ಯೋಜನೆಯಾದ ಮುಖ್ಯಮಂತ್ರಿಗಳ ನಗರೋತ್ತಾನ ಯೋಜನೆ ಮತ್ತು ಡಾ. ಬಿ ಆರ್ ಅಂಬೇಡ್ಕರ್ ನಿವಾಸ್ ಯೋಜನೆ, ರಾಜ್ಯ ಹಣಕಾಸು ಅನುದಾನದ ಪ್ರಗತಿಯ ಬಗ್ಗೆ ಚರ್ಚಿಸಿ ಪರಿಶೀಲಿಸಿದರು.

ಪಟ್ಟಣ ಪಂಚಾಯತ್ ಅಭಿವೃದ್ಧಿಯಲ್ಲಿ ಇರುವ ಅಡಚಣೆ ಮತ್ತು ಪಟ್ಟಣ ಪಂಚಾಯತ್ ಕೈಗೊಂಡಿರುವ ಉತ್ತಮ ಆಡಳಿತದ ಬಗ್ಗೆ ಮಾಹಿತಿ ಪಡೆದು ಕೊಳ್ಳಲಾಯಿತು. ಸುಳ್ಯ ಪಟ್ಟಣ ಪಂಚಾಯತಿಯು ಕೇಂದ್ರ ಸರ್ಕಾರದ 15 ನೇ ಹಣಕಾಸು ಅನುದಾನ ಮತ್ತು ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಅನುಷ್ಠಾನದಲ್ಲಿ ಸಾಧಿಸಿರುವ ಉತ್ತಮ ಪ್ರಗತಿ ಬಗ್ಗೆ ತಿಳಿದು ಪ್ರಶಂಶಿಸಲಾಯಿತು.

ಪಟ್ಟಣ ಪಂಚಾಯತಿಯ ಅಧ್ಯಕ್ಷರು,ಉಪಾಧ್ಯಕ್ಷರು,ಸದಸ್ಯರು ತಮ್ಮ ಸೇವಾ ಅವಧಿಯಲ್ಲಿನ ಅನುಭವವನ್ನು ಹಂಚಿಕೊಂಡರು. ಪಟ್ಟಣ ಪಂಚಾಯಿತಿಯ ದಿನನಿತ್ಯದ ಆಡಳಿತದಲ್ಲಿ ಇರುವ ತಾಂತ್ರಿಕ ಸಮಸ್ಯೆಯನ್ನು ಸರ್ಕಾರದ ಮಟ್ಟದಲ್ಲಿ ಪರಿಹರಿಸಲು ಕ್ರಮವಹಿಸುವಂತೆ ಕೋರಿಕೊಂಡರು.ಪಟ್ಟಣ ಪಂಚಾಯತಿಯು ಎಲ್ಲಾ ಮನೆಗಳಿಂದ ಒಣಕಸವನ್ನು ಸಂಗ್ರಹಿಸಿ ವಿಲೇವಾರಿ ಮಾಡಲು ಹೆಚ್ಚಿನ ಗಮನ ನೀಡಿ SBM ಯೋಜನೆಯನ್ನು ಯಶಸ್ವಿಗೊಳಿಸಲು ಪ್ರಯತ್ನಿಸುವಂತೆ ತಿಳಿಸಲಾಯಿತು. ಈ ಸಂದರ್ಭದಲ್ಲಿ ವಿವಿಧ ಮಾಧ್ಯಮ ಪ್ರತಿನಿಧಿಯವರು ,ಪಟ್ಟಣ ಪಂಚಾಯತ್ ಅಧಿಕಾರಿ ವರ್ಗ ಸಿಬ್ಬಂದಿಗಳು ಹಾಜರಿದ್ದರು.

[t4b-ticker]
error: Content is protected !!