ಕುಕ್ಕೆ ಸುಬ್ರಮಣ್ಯ ದೇವರಿಗೆ ಬೆಳ್ಳಿ ರಥ ಸಮರ್ಪಣೆ

Picture of Savistara

Savistara

Bureau Report

ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಬಿ ಟೀಮ್ ಅಧ್ಯಕ್ಷ ಡಾ.ರೇಣುಕಾಪ್ರಸಾದ್ ಕೆ.ವಿ. ಹಾಗೂ ಅವರ ಮನೆಯವರು, ಕುಕ್ಕೆ ಸುಬ್ರಹ್ಮಣ್ಯ ದೇವರಿಗೆ ಸಮರ್ಪಿಸುವ ಬೆಳ್ಳಿರಥವನ್ನು ಸ್ವೀಕರಿಸುವುದಕ್ಕೆ ಕೋಟೇಶ್ವರಕ್ಕೆ ಹೊರಡುವ ಮೊದಲ ಬೆಳಿಗ್ಗೆ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಹೋಗಿ ಪ್ರಾರ್ಥನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಎಒಎಲ್ಇ ಕಮಿಟಿ ಬಿ ತಂಡದ ಪ್ರಧಾನ ಕಾರ್ಯದರ್ಶಿ ಡಾ. ಜ್ಯೋತಿ ಆರ್. ಪ್ರಸಾದ್, ಎಒಎಲ್ಇ ಕಮಿಟಿ ಬಿ ಆಡಳಿತಾಧಿಕಾರಿ ಭವಾನಿಶಂಕರ ಅಡ್ತಲೆ, ಶ್ರೀಮತಿ ವರಮಹಾಲಕ್ಷ್ಮೀ ಸುಬ್ಬಯ್ಯ , ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಮೋಹನ್ ರಾಮ್ ಸುಳ್ಳಿ, ಕೆವಿಜಿ ಐಟಿಐ ಪ್ರಾಂಶುಪಾಲರಾದ ದಿನೇಶ್ ಮಡ್ತಿಲ, ಕೆವಿಜಿ ಪವರ್ ಹೌಸ್ ಕಾರ್ಯಪಾಲ ಇಂಜಿನಿಯರ್ ವಸಂತ ಕಿರಿಭಾಗ, ಕೆವಿಜಿ ಪಾಲಿಟೆಕ್ನಿಕ್ ನ ಪ್ರಸನ್ನ ಕಲ್ಲಾಜೆ, ಅರುಣ್ ಕುರುಂಜಿ ಜತೆಗಿದ್ದರು.
ವಿಶೇಷ ಪೂಜೆ ಹಾಗೂ ಪ್ರಾರ್ಥನೆಯ ಬಳಿಕ ಸುಳ್ಯಕ್ಕೆ ಹಿಂತಿರುಗಿರುವ ಅವರು ಕೋಟೇಶ್ವರಕ್ಕೆ ತೆರಳಲಿದ್ದಾರೆಂದು ತಿಳಿದುಬಂದಿದೆ.

[t4b-ticker]
error: Content is protected !!