ನಾಳೆಯೇ ಅಜಿತ್ ಪವಾರ್ ಪತ್ನಿ ಸುನೇತ್ರಾ ಪವಾರ್ ಡಿಸಿಎಂ ಆಗಿ ಪ್ರಮಾಣ ವಚನ ಸಾಧ್ಯತೆ

Picture of Savistara

Savistara

Bureau Report

ಮುಂಬೈ: ವಿಮಾನ ಅಪಘಾತದಲ್ಲಿ ನಿಧನರಾದ ಎನ್​ಸಿಪಿ ಮುಖ್ಯಸ್ಥ ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ ಅವರು ನಾಳೆ(ಜ. 31) ಮಹಾರಾಷ್ಟ್ರದ ನೂತನ ಉಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.ಶನಿವಾರ ಮಧ್ಯಾಹ್ನ 2 ಗಂಟೆಗೆ ಮುಂಬೈನ ವಿಧಾನ ಭವನದಲ್ಲಿ ಎನ್​ಸಿಪಿ ಪಕ್ಷದ ಶಾಸಕಾಂಗ ಸಭೆ ನಡೆಯಲಿದ್ದು, ಸಭೆಯಲ್ಲಿ ಶಾಸಕಾಂಗ ಪಕ್ಷದ ನಾಯಕರನ್ನಾಗಿ ಸುನೇತ್ರಾ ಅವರ ಹೆಸರನ್ನು ಅಂತಿಗೊಳಿಸಲಿದೆ. ಬಳಿಕ ಸಂಜೆ ಡಿಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆ ಇದೆ ಎನ್ನಲಾಗಿದೆ.ಈ ಕುರಿತು ಮಾತನಾಡಿರುವ ಶುಕ್ರವಾರ(ಜ. 30) ಸಚಿವ ಛಗನ್ ಭುಜಬಲ್, ನಾಳೆ ಎನ್​ಸಿಪಿಯ ಶಾಸಕಾಂಗ ಪಕ್ಷದ ಸಭೆ ನಡೆಯಲಿದೆ. ಸುನೇತ್ರಾ ಪವಾರ್ ಅವರನ್ನು ನಾಯಕಿಯಾಗಿ ಹೆಸರಿಸಲಾಗುವುದು. ಅನೇಕ ನಾಯಕರು ಅವರು ಉಪಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳಬೇಕೆಂದು ಬಯಸುತ್ತಾರೆ ಎಂದಿದ್ದಾರೆ.

ಖಾಲಿ ಇರುವ ಶಾಸಕಾಂಗ ಪಕ್ಷದ ನಾಯಕನ ಹುದ್ದೆಯನ್ನು ಭರ್ತಿ ಮಾಡುವುದು ತಕ್ಷಣದ ಆದ್ಯತೆಯಾಗಿದ್ದು, ನಂತರ ಉಪ ಮುಖ್ಯಮಂತ್ರಿ ಸ್ಥಾನವನ್ನು ಅಂತಿಮಗೊಳಿಸಲಾಗುವುದು. ಶಾಸಕಾಂಗ ಸಭೆ ಔಪಚಾರಿಕವಾಗಿ ನಿರ್ಧಾರ ತೆಗೆದುಕೊಂಡರೆ, ಶನಿವಾರವೇ ಸುನೇತ್ರಾ ಪವಾರ್ ಅವರು ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವುದಕ್ಕೆ ಸಿಎಂ ಫಡ್ನವೀಸ್ ಅವರಿಗೆ ಯಾವುದೇ ಸಮಸ್ಯೆಯಿಲ್ಲ ಎಂದು ಹೇಳಿದ್ದಾರೆ.ಸುನೇತ್ರಾ ಪವಾರ್ ಪ್ರಸ್ತುತ ರಾಜ್ಯಸಭಾ ಸಂಸದೆಯಾಗಿದ್ದು, ಮಹಾರಾಷ್ಟ್ರ ವಿಧಾನಸಭೆಯ ಎರಡೂ ಸದನಗಳ ಸದಸ್ಯರಲ್ಲ. ಆದಾಗ್ಯೂ, ಬುಧವಾರ ವಿಮಾನ ಅಪಘಾತದಲ್ಲಿ ಅಜಿತ್ ಪವಾರ್ ಸಾವನ್ನಪ್ಪಿದ ನಂತರ ಪುಣೆ ಜಿಲ್ಲೆಯ ಬಾರಾಮತಿ ವಿಧಾನಸಭಾ ಸ್ಥಾನ ಖಾಲಿಯಾಗಿದೆ. ಅಲ್ಲಿಂದ ಅವರು ಸ್ಪರ್ಧಿಸಿ ವಿಧಾನಸಭೆಗೆ ಆಯ್ಕೆಯಾಗುವ ಸಾಧ್ಯೆತೆ ಇದೆ

[t4b-ticker]
error: Content is protected !!