T20 World Cup: ದಕ್ಷಿಣ ಆಫ್ರಿಕಾಕ್ಕೆ ಹ್ಯಾಟ್ರಿಕ್ ಜಯ; ನ್ಯೂಜಿಲೆಂಡ್‌ಗೆ ನಿರಾಸೆ

Picture of Savistara

Savistara

Bureau Report

ಅಹಮದಾಬಾದ್: ಟಿ20 ವಿಶ್ವಕಪ್ ಟೂರ್ನಿಯ ಬಹು ನಿರೀಕ್ಷಿತಪಂದ್ಯದಲ್ಲಿ ನಾಯಕ ಏಡನ್ ಮರ್ಕರಂ ಅಜೇಯ 86 ರನ್ ಬಾರಿಸಿ ದಕ್ಷಿಣ ಆಫ್ರಿಕಾ ತಂಡ, ನ್ಯೂಜಿಲೆಂಡ್ ವಿರುದ್ಧ ಸುಲಭಗೆಲುವು ಪಡೆಯುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಇನ್ನೂ 17 ಎಸೆತಗಳಿರುವಂತೆ ಏಳು ವಿಕೆಟ್‌ಗಳಿಂದ ಗೆದ್ದ ಹರಿಣಗಳ ಪಡೆ ‘ಡಿ’ ಗುಂಪಿನಲ್ಲಿ ಅಗ್ರಸ್ಥಾನ ಪಡೆಯುವುದು ಬಹುತೇಕ ಖಚಿತಗೊಂಡಿತು.

ಈ ಪಂದ್ಯಕ್ಕೆ ಮೊದಲು ಎರಡೂ ತಂಡಗಳು ಅಜೇಯವಾಗಿದ್ದು ಉತ್ತಮ ಪೈಪೋಟಿ ನಿರೀಕ್ಷಿಸಿ ಸುಮಾರು 30,000 ಪ್ರೇಕ್ಷಕರು ನರೇಂದ್ರ ಮೋದಿ ಕ್ರೀಡಾಂಗಣಕ್ಕೆ ಬಂದಿದ್ದರು. ವೇಗ ಮತ್ತು ಬೌನ್ಸ್‌ಗೆ ನೆರವಾಗುತ್ತಿದ್ದ ನರೇಂದ್ರ ಮೋದಿ ಕ್ರೀಡಾಂಗಣದ ಪಿಚ್‌ನಲ್ಲಿ ಬ್ಯಾಟ್‌ ಮಾಡಲು ಕಳುಹಿಸಲ್ಪಟ್ಟ ನ್ಯೂಜಿಲೆಂಡ್ 7 ವಿಕೆಟ್‌ಗೆ 175 ರನ್‌ಗಳ ಗೌರವಾರ್ಹ ಮೊತ್ತ ಗಳಿಸಿತು. ಕಳೆದ ಬಾರಿಯ ರನ್ನರ್ ಅಪ್ ದಕ್ಷಿಣ ಆಫ್ರಿಕಾ ತಂಡ 17.1 ಓವರುಗಳಲ್ಲಿ 3 ವಿಕೆಟ್‌ಗೆ 178 ರನ್‌ ಬಾರಿಸಿ ಸತತ ಮೂರನೇ ಗೆಲುವನ್ನು ದಾಖಲಿಸಿತು.ಮರ್ಕರಂ ಕೇವಲ 44 ಎಸೆತಗಳಲ್ಲಿ ಎಂಟು ಬೌಂಡರಿ, ನಾಲ್ಕು ಸಿಕ್ಸರ್‌ಗಳನ್ನು ಹೊಡೆದಟ್ಟಿದರು. ಉಳಿದವರ ಕಾಣಿಕೆ ಅಲ್ಪಮಾತ್ರ. ಮರ್ಕರಂ ಮೊದಲ ವಿಕೆಟ್‌ಗೆ ಕ್ವಿಂಟನ್ ಡಿ ಕಾಕ್ (20) ಜೊತೆ 4.4 ಓವರುಗಳಲ್ಲೇ 62 ರನ್ ಸೇರಿಸಿ ತಂಡಕ್ಕೆ ಬಿರುಸಿನ ಆರಂಭನೀಡಿದರು. ರಿಕೆಲ್ಸನ್ (21) ಜೊತೆ ಎರಡನೇ ವಿಕೆಟ್‌ಗೆ 40 ರನ್ ಸೇರಿಸಿ ತಂಡವನ್ನು ಗೆಲುವಿನ ಹಾದಿಯತ್ತ ಮುನ್ನಡೆಸಿದರು.ಮುರಿಯದ ನಾಲ್ಕನೇ ವಿಕೆಟ್‌ಗೆ ಡೇವಿಡ್ ಮಿಲ್ಲರ್ (ಔಟಾಗದೇ 24, 17ಎಸೆತ) ಜೊತೆ 47 ರನ್ ಸೇರಿಸಿದರು.

ಇದಕ್ಕೆ ಮೊದಲು, ಟಿಮ್ ಸೀಫರ್ಟ್ (13) ಮತ್ತು ಫಿನ್‌ ಅಲೆನ್ (31, 17ಎ, 4×4, 6×2) ನ್ಯೂಜಿಲೆಂಡ್ ತಂಡಕ್ಕೆ ಮಗದೊಮ್ಮೆ ಉತ್ತಮ ಆರಂಭ ನೀಡಿದರು. ತಂಡ 3.2 ಓವರುಗಳಲ್ಲಿ 33 ರನ್ ಗಳಿಸುತ್ತಿದ್ದಂತೆ ಜಾನ್ಸನ್ (40ಕ್ಕೆ4) ಸೀಫರ್ಟ್ ವಿಕೆಟ್ ಪಡೆದು ಜೊತೆಯಾಟ ಮುರಿದರು. ಫಿನ್ ಅಲೆನ್ ಮತ್ತು ರಚಿನ್ ರವೀಂದ್ರ (13) ವಿಕೆಟ್‌ಗಳೂ ಯಾನ್ಸೆನ್ ಪಾಲಾದವು. ಸ್ಪಿನ್ನರ್ ಕೇಶವ್ ಮಹಾರಾಜ್ ಅವರು ಗ್ರೆನ್ ಫಿಲಿಪ್ಸ್ (1) ವಿಕೆಟ್ ಪಡೆದರು. ಆಗ ಮೊತ್ತ 4 ವಿಕೆಟ್‌ಗೆ 64.

ಈ ಹಂತದಲ್ಲಿ ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳಾದ ಮಾರ್ಕ್ ಚಾಪ್‌ಮನ್ (48, 4×6, 6×2) ಮತ್ತು ಡೇರಿಲ್ ಮಿಚೆಲ್ (32, 24 ಎಸೆತ) ನಡುವಣ 74 ರನ್‌ಗಳ ಜೊತೆಯಾಟ ತಂಡಕ್ಕೆ ಚೇತರಿಕೆ ನೀಡಿದರು. ಜೇಮ್ಸ್ ನೀಶಮ್ ಕೊನೆಯಲ್ಲಿ 15 ಎಸೆತಗಳಲ್ಲಿ 23 ರನ್ ಬಾಚಿ ಮೊತ್ತ 165 ತಲುಪಲು ನೆರವಾದರು.

ಸ್ಕೋರುಗಳು:ನ್ಯೂಜಿಲೆಂಡ್: 20 ಓವರುಗಳಲ್ಲಿ 7 ವಿಕೆಟ್‌ಗೆ 175 (ಫಿನ್ ಅಲೆನ್ 31, ಚಾಪ್‌ಮನ್ 48, ಡೇರಿಲ್ ಮಿಚೆಲ್ 32, ಜೇಮ್ಸ್ ನೀಶಮ್ ಔಟಾಗದೇ 23; ಮಾರ್ಕೊ ಯಾನ್ಸೆನ್ 40ಕ್ಕೆ4);

ದಕ್ಷಿಣ ಆಫ್ರಿಕಾ: 17.1 ಓವರುಗಳಲ್ಲಿ 3 ವಿಕೆಟ್‌ಗೆ 178 (ಏಡನ್ ಮರ್ಕರಂ ಔಟಾಗದೇ 86, ಡೇವಿಡ್ ಮಿಲ್ಲರ್ ಔಟಾಗದೇ 24)ಪಂದ್ಯದ ಆಟಗಾರ: ಮಾರ್ಕೊ ಯಾನ್ಸೆನ್

News Updates

BREAKING NEWS ಸುಳ್ಯ :ಪಂಜ ಕಾಂಗ್ರೆಸ್ ಪಕ್ಷದ ಹುದ್ದೆಗೆ ರಾಜಿನಾಮೆ ನೀಡಿದ ದಿನೇಶ್ ಪುಂಡಿಮನೆ, ಕುಸುಮಾಧರ ಕೆರೆಯಡ್ಕ,ಲೋಕನಾಥ್ ಕುದ್ವ |ನಮ್ಮ ಮಾತನ್ನು ಪಕ್ಷದ ನಾಯಕರು ಉಳಿಸಿಕೊಂಡಿಲ್ಲ, ದೇವಸ್ಥಾನ ವ್ಯವಸ್ಥೆ ಸರಿದಾರಿಗೆ ತರುವ ಕೆಲಸವಾಗಲಿ: ದಿನೇಶ್ ಪುಂಡಿಮನೆ

News Updates

ಬೆಳ್ತಂಗಡಿ : ಮೊಗ್ರು ಜೈ ಶ್ರೀರಾಮ ಸೇವಾ ಟ್ರಸ್ಟ್ ಅಲೆಕ್ಕಿ -ಮುಗೇರಡ್ಕ ಮೊಗ್ರು, ಶ್ರೀ ರಾಮ ಶಿಶುಮಂದಿರದ 5 ನೇ ವರ್ಷದ ಶ್ರೀ ಕೃಷ್ಣೋತ್ಸವ. |ಕಾಶಿ ಶೆಟ್ಟಿ ನವಶಕ್ತಿ ಗುರುವಾಯನಕೆರೆ ಇವರ ಸ್ಮರಣಾರ್ಥ ಕಾಶಿ ಶೆಟ್ಟಿ ವಿದ್ಯಾ ಮಂದಿರ, ಹಾಗೂ ಶಾಸಕ ಹರೀಶ್ ಪೂಂಜಾರವರ ನೆರವಿನ ಅಡುಗೆ ಕೋಣೆ ಉದ್ಘಾಟನಾ ಕಾರ್ಯಕ್ರಮ |ಮಕ್ಕಳ ಶ್ರೀಕೃಷ್ಣ ಮತ್ತು ರಾಧೆಯರ ಸ್ಪರ್ಧೆ, ಮೊಸರು ಕುಡಿಕೆ, ಆಟೋಟ ಸ್ಪರ್ಧೆ

[t4b-ticker]
error: Content is protected !!