ಭಾರತದ ದಾಳಿಗೆ ಪಾಕ್‌ನ ರಾವಲ್ಪಿಂಡಿ ಮೈದಾನ ನಾಶ; ಈ ಸುದ್ದಿ ಸುಳ್ಳು

Picture of Savistara

Savistara

Bureau Report

ಭಾರತ ಮತ್ತು ಪಾಕಿಸ್ತಾನದ ನಡುವಿನ ಸೇನಾ ಸಂಘರ್ಷದ ಸಮಯದಲ್ಲಿ ಭಾರತೀಯ ಸೇನೆಯು ಪಾಕಿಸ್ತಾನದ ರಾವಲ್ಪಿಂಡಿಯ ಕ್ರಿಕೆಟ್‌ ಮೈದಾನದ ಮೇಲೆ ಡೋನ್‌ ದಾಳಿ ನಡೆಸಿ, ಇಡೀ ಮೈದಾನವನ್ನೇ ನಾಶ ಪಡಿಸಿದೆ ಎಂದು ಪ್ರತಿಪಾದಿಸುತ್ತಾ ಕ್ರೀಡಾಂಗಣವೊಂದು ಸಂಪೂರ್ಣವಾಗಿ ಹಾನಿಗೀಡಾದ ಫೋಟೊವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ಆದರೆ, ಇದು ಸುಳ್ಳು ಸುದ್ದಿ. ಕ್ರೀಡಾಂಗಣದ ಚಿತ್ರ ನಿಜವಾದ್ದಲ್ಲ.

ಗೂಗಲ್‌ನಲ್ಲಿ ನಿರ್ದಿಷ್ಟ ಪದಗಳನ್ನು ಬಳಸಿ ರಾವಲ್ಪಿಂಡಿ ಕ್ರೀಡಾಂಗಣದ ಬಗ್ಗೆ ಹುಡುಕಾಟ ನಡೆಸಿದಾಗ ಇಎಸ್‌ಪಿಎನ್‌ಕ್ರಿಕ್‌ಇನ್ನೊ ವೆಬ್‌ಸೈಟ್‌ ಹಂಚಿಕೊಂಡಿದ್ದ ರಾವಲ್ಪಿಂಡಿ ಕ್ರೀಡಾಂಗಣದ ಹಲವು ಚಿತ್ರಗಳು ಸಿಕ್ಕಿದವು. ಆ ಪೈಕಿ ಪೋಸ್ಟ್‌ನಲ್ಲಿರುವ ಚಿತ್ರ ಮತ್ತು ವೆಬ್‌ಸೈಟ್‌ನಲ್ಲಿರುವ ಮೂಲ ಚಿತ್ರವೊಂದನ್ನು ಪರಸ್ಪರ ಹೋಲಿಸಲಾಯಿತು. ಆದರೆ, ಎರಡೂ ಚಿತ್ರಗಳು ಭಿನ್ನವಾಗಿರುವುದು ದೃಢಪಟ್ಟಿತು. ನಾಶ ಮಾಡಲಾದ ಕ್ರೀಡಾಂಗಣದ ಚಿತ್ರ ಎಂದು ಹೇಳಲಾದ ಚಿತ್ರವನ್ನು ಕೂಲಕಂಷ ಪರಿಶೀಲನೆಗೆ ಒಳಪಡಿಸಿದಾಗ, ಅದು ಕೃತಕ ಬುದ್ಧಿಮತ್ತೆ (ಎಐ) ಚಿತ್ರ ಆಗಿರಬಹುದು ಎಂಬ ಅನುಮಾನ ಮೂಡಿತು. ಎಐ ಚಿತ್ರವನ್ನು ಪತ್ತೆ ಹಚ್ಚುವ ‘ವಾಸ್‌ಇಟ್‌ಎಐ’ ಎಂಬ ಟೂಲ್‌ನಲ್ಲಿ ಚಿತ್ರವನ್ನು ಅದು ಹಾಕಿದಾಗ ಅದು ಎಐ ಚಿತ್ರ ಎಂಬುದು ದೃಢಪಟ್ಟಿದೆ ಎಂದು ಪಿಟಿಐ ಫ್ಯಾಕ್ಟ್‌ಚೆಕ್ ವರದಿ ತಿಳಿಸಿದೆ.

News Updates

ಎಸ್‌ಐಆ‌ರ್ ವಿಚಾರದಲ್ಲಿ ಬಿಜೆಪಿ ಕಾರ್ಯಕರ್ತರ ಬೆದರಿಸಿದರೆ ಸುಮ್ಮನಿರಲ್ಲ: ಪೊಲೀಸರಿಗೆ ಸಂಸದ ಕ್ಯಾ. ಚೌಟ ಎಚ್ಚರಿಕೆ – ಕಾಂಗ್ರೆಸ್ ತನ್ನ ಆರೋಪಗಳಿಗೆ ಸೂಕ್ತ ಸಾಕ್ಷ್ಯಾಧಾರಗಳನ್ನು ಒದಗಿಸಲಿ ಅಕ್ರಮವಾಗಿ ಮತ ರದ್ದು -ಮಾಡಲಾದ ವ್ಯಕ್ತಿಯನ್ನು ತಂದು ಚುನಾವಣಾಧಿಕಾರಿ ಮುಂದೆ ನಿಲ್ಲಿಸಲಿ: ಸಂಸದ ಸವಾಲು

News Updates

ಕೇಂದ್ರ ಸರ್ಕಾರದಿಂದ ಶಿವಮೊಗ್ಗ ನಗರ ಬೈಪಾಸ್ ಹಾಗೂ ನಗರ ವ್ಯಾಪ್ತಿಯ ಹೆದ್ದಾರಿ ಅಭಿವೃದ್ಧಿಗೆ 466.74 ಕೋಟಿ ರೂ. ಮಂಜೂರು; ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ಕೃತಜ್ಞತೆ ಸಲ್ಲಿಸಿದ ಸಂಸದ ಬಿ.ವೈ. ರಾಘವೇಂದ್ರ

[t4b-ticker]
error: Content is protected !!