ಸದ್ಯದಲ್ಲೇ ಇಡೀ ಗಾಜಾಪಟ್ಟಿ ಇಸ್ರೇಲ್ ವಶಕ್ಕೆ: ಬೆಂಜಮಿನ್ ನೆತನ್ಯಾಹು!

Picture of Savistara

Savistara

Bureau Report

ಖಾನ್ ಯೂನಿಸ್ ನಗರ ತೊರೆಯಿರಿ: ಸೇನೆ ಸೂಚನೆ, ಗಾಜಾ ಮೇಲೆ ಮತ್ತಷ್ಟು ದಾಳಿಗೆ ಇಸ್ರೇಲ್ ಸಜ್ಜು

ಟೆಲ್ ಅವೀವ್: ಇಡೀ ಗಾಜಾವನ್ನು ನಾವು ನಿಯಂತ್ರಣಕ್ಕೆ ಪಡೆದುಕೊಳ್ಳಲಿದ್ದೇವೆ ಎಂದು ಇಸ್ರೇಲ್ ಪ್ರಧಾನಿ ಬೆಂಜ-ಮಿನ್‌ ನೆತನ್ಯಾಹು ಘೋಷಿಸಿದ್ದಾರೆ. ಈ ಘೋಷಣೆ ಬೆನ್ನಲ್ಲೇ, ಗಾಜಾದ 2ನೇ ಅತೀದೊಡ್ಡ ನಗರ ಖಾನ್ ಯೂನಿಸ್‌ನಿಂದ ಬಲವಂತವಾಗಿ ಜನರನ್ನು ತೆರವುಗೊ ಳಿಸಲು ಇಸ್ರೇಲ್ ಸೇನೆ ಮುಂದಾಗಿದೆ. ಕೂಡಲೇ ಜಾಗ ಖಾಲಿ ಮಾಡಿ ಎಂದು ನಾಗರಿಕರಿಗೆ ಸೂಚಿಸಲಾಗಿದೆ. ಈ ಮೂಲಕ ಗಾಜಾ ಮೇಲೆ ಮತ್ತಷ್ಟು ದಾಳಿಯ ಸುಳಿವನ್ನು ನೀಡಿದೆ. ರವಿವಾರ ನಡೆದ ದಾಳಿಯಲ್ಲಿ 140ಕ್ಕೂ ಅಧಿಕ ಮಂದಿ ಸಾವಿಗೀಡಾಗಿದ್ದರು.

ಆಹಾರ ಪೂರೈಕೆಗೆ ಅನುಮತಿ:

ಇದೇ ವೇಳೆ, ಗಾಜಾಗೆಆಹಾರ ಮತ್ತು ಇತರ ಮಾನವೀಯ ನೆರವು ಪೂರೈಕೆಗೆ 2 ತಿಂಗಳ ಕಾಲ ದಿಗ್ವಂಧನ ಹೇರಿದ ಅನಂತರ, ಹಸಿವಿನಿಂದ ಬಳಲುತ್ತಿರುವ ಗಾಜಾದ ಜನರಿಗೆ “ಮೂಲ ಮತ್ತು ಸೀಮಿತ’ ಆಹಾರ ಮತ್ತು ಇತರ ನೆರವು ಪುನರಾರಂಭಿಸಲು ಅನುಮತಿ ನೀಡಿರುವುದಾಗಿ ನೆತನ್ಯಾಹು ಹೇಳಿದ್ದಾರೆ.ಇದು ಸ್ನೇಹಿತರನ್ನು ಸಂತೋಪಡಿಸಲು ಕೈಗೊಂಡ ಕ್ರಮ ಎಂದಿದ್ದಾರೆ. ಹಸಿವಿನಿಂದ ಸಾಮೂಹಿಕವಾಗಿ ಜನರು ಸಾವಿಗೀಡಾಗುವುದನ್ನು ತಪ್ಪಿಸಲು ಅಂತಾರಾಷ್ಟ್ರೀಯ ಒತ್ತಡ ಹೆಚ್ಚಾಗಿದೆ ಎಂದೂ ಹೇಳಿದ್ದಾರೆ.

News Updates

ಎಸ್‌ಐಆ‌ರ್ ವಿಚಾರದಲ್ಲಿ ಬಿಜೆಪಿ ಕಾರ್ಯಕರ್ತರ ಬೆದರಿಸಿದರೆ ಸುಮ್ಮನಿರಲ್ಲ: ಪೊಲೀಸರಿಗೆ ಸಂಸದ ಕ್ಯಾ. ಚೌಟ ಎಚ್ಚರಿಕೆ – ಕಾಂಗ್ರೆಸ್ ತನ್ನ ಆರೋಪಗಳಿಗೆ ಸೂಕ್ತ ಸಾಕ್ಷ್ಯಾಧಾರಗಳನ್ನು ಒದಗಿಸಲಿ ಅಕ್ರಮವಾಗಿ ಮತ ರದ್ದು -ಮಾಡಲಾದ ವ್ಯಕ್ತಿಯನ್ನು ತಂದು ಚುನಾವಣಾಧಿಕಾರಿ ಮುಂದೆ ನಿಲ್ಲಿಸಲಿ: ಸಂಸದ ಸವಾಲು

News Updates

ಕೇಂದ್ರ ಸರ್ಕಾರದಿಂದ ಶಿವಮೊಗ್ಗ ನಗರ ಬೈಪಾಸ್ ಹಾಗೂ ನಗರ ವ್ಯಾಪ್ತಿಯ ಹೆದ್ದಾರಿ ಅಭಿವೃದ್ಧಿಗೆ 466.74 ಕೋಟಿ ರೂ. ಮಂಜೂರು; ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ಕೃತಜ್ಞತೆ ಸಲ್ಲಿಸಿದ ಸಂಸದ ಬಿ.ವೈ. ರಾಘವೇಂದ್ರ

[t4b-ticker]
error: Content is protected !!