ಕೇರಳ : ಮತದಾರರ ಅಂತಿಮ ಪಟ್ಟಿ ಪ್ರಕಟ

Picture of Savistara

Savistara

Bureau Report

ಕೇರಳ ರಾಜ್ಯ ಸ್ಥಳೀಯಾಡಳಿತ ಸಂಸ್ಥೆಗಳ ಚುನಾವಣೆ ಹಿನ್ನೆಲೆಯಲ್ಲಿ ಅ.25ರಂದು ಪ್ರಕಟವಾದ ಮತದಾರರ ಪಟ್ಟಿಯಲ್ಲಿ ಒಟ್ಟು 2,84,46,762 ಮಂದಿ ಮತದಾರರಿದ್ದಾರೆ. ಸ್ಥಳೀಯಾಡಳಿತ ಸಂಸ್ಥೆಗಳ ವಾರ್ಡ್‌ಗಳ ಮರು ವಿಂಗಡಣೆ ನಂತರ ಹೊಸ ವಾರ್ಡ್ ಗಳಲ್ಲಿ ಮತದಾರರ ಪರಿಷ್ಕೃತ ಅಂತಿಮ ಪಟ್ಟಿಯನ್ನು ಮತಗಟ್ಟೆಗಳಿಗೆ ಅನುಗುಣವಾಗಿ ಸಿದ್ಧಪಡಿಸಲಾಗಿದೆ.

2025ರ ಜನವರಿ 1ರಂದು ಅಥವಾ ಅದಕ್ಕೂ ಮೊದಲು 18 ವರ್ಷ ವಯಸ್ಸನ್ನು ಪೂರ್ಣಗೊಳಿಸಿದವರನ್ನು ಈ ಪಟ್ಟಿ ಒಳ ಗೊಂಡಿದೆ. ಅಲ್ಲದೆ, ಅನಿವಾಸಿ ಮತದಾರರ ಪಟ್ಟಿಯಲ್ಲಿ ಒಟ್ಟು 2798 ಜನರಿದ್ದಾರೆ. ಕೇರಳದ 14 ಜಿಲ್ಲೆಗಳ 941 ಗ್ರಾಪಂಗಳ 17,337 ವಾರ್ಡ್‌ಗಳಲ್ಲಿ ಆರು ಮತ್ತು 87 ನಗರಸಭೆಗಳ 3240 ವಾರ್ಡ್‌ಗಳು, ಆರು ಮಹಾನಗರ ಪಾಲಿಕೆಗಳ 421 ವಾರ್ಡ್‌ಗಳ ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿದೆ.ಮಟ್ಟನೂರು ನಗರಸಭೆಯನ್ನು ಹೊರತುಪಡಿಸಿ ಎಲ್ಲಾ ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ ಸಾರ್ವತ್ರಿಕ ಚುನಾವಣೆಗೆ ಮತದಾರರ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ. ಚುನಾವಣಾ ಪಟ್ಟಿ ಬಗ್ಗೆ ಆಯೋಗದ ವೆಬ್‌ಸೈಟ್ ನಲ್ಲಿಯೂ ಮಾಹಿತಿಯಿದ್ದು, ಆಯಾ ಸ್ಥಳೀಯಾಡಳಿತ ಸಂಸ್ಥೆಗಳು, ತಾಲೂಕು ಮತ್ತು ಗ್ರಾಮ ಕಚೇರಿಗಳಲ್ಲಿ ಪರಿಶೀಲನೆಗೆ ಲಭ್ಯವಿರಲಿದೆ.ಮತದಾರರ ಕರಡು ಪಟ್ಟಿಗೆ ಸಂಬಂಧಿಸಿದಂತೆ ಅ.14ರವರೆಗೆ ಸ್ವೀಕರಿಸಲಾದ ಅರ್ಜಿಗಳು ಮತ್ತು ಆಕ್ಷೇಪಣೆಗಳನ್ನು ಪರಿಶೀಲಿಸಿ, ಈ ಬಗ್ಗೆ ವಿಚಾರಣೆಗಳನ್ನು ನಡೆಸಲಾಗಿದೆ. ಚುನಾವಣಾ ನೋಂದಣಿ ಅಧಿಕಾರಿಗಳು ಅಂತಿಮ ಮತದಾರರ ಪಟ್ಟಿಯನ್ನು ಸಿದ್ಧಪಡಿಸಿದ್ದಾರೆ.ಸಂಕ್ಷಿಪ್ತ ಪರಿಷ್ಕರಣೆ ಉದ್ದೇಶಕ್ಕಾಗಿ ಸೆಪ್ಟೆಂಬರ್ 29ರಂದು ಪ್ರಕಟಿಸಲಾದ ಕರಡು ಮತದಾರರ ಪಟ್ಟಿಯಲ್ಲಿ 2,83,12,468 ಮತದಾರರಿದ್ದು, ಇದರಲ್ಲಿ 1,33,52,961 ಪುರುಷರು, 1,49,59,236 ಮಹಿಳೆಯರು ಮತ್ತು 271 ಟ್ರಾನ್ಸ್‌ಜೆಂಡರ್‌ಗಳು ಒಳಪಟ್ಟಿದ್ದರು. ಇದಲ್ಲದೆ 2,087 ಅನಿವಾಸಿ ಮತದಾರರು ಒಳಗೊಂಡಿದ್ದರು.

[t4b-ticker]
error: Content is protected !!