RSS ಮುಖಂಡರೋರ್ವರ ಪ್ರಚೋಧನಕಾರಿ ಭಾಷಣ ಶೇರ್ ಮಾಡಿದ ವಿಹಿಂಪ ಮುಖಂಡ ಶರಣ್ ಪಂಪ್ ವೆಲ್ ವಶಕ್ಕೆ? A1 ಆರೋಪಿಯಾಗಿ ವಿಕಾಸ್ ಪುತ್ತೂರು..!

Picture of Savistara

Savistara

Bureau Report

ಮಂಗಳೂರು : ಸಾಮಾಜಿಕ ಜಾಲತಾಣದಲ್ಲಿ ಕೋಮುಪ್ರಚೋದನಕಾರಿ ಪೋಸ್ಟ್ ಗಳ ವಿರುದ್ಧ ದಕ್ಷಿಣ ಕನ್ನಡ ಪೊಲೀಸರು ಸಮರ ಸಾರಿದ್ದು, ಅದರ ಪರಿಣಾಮವಾಗಿ, ಆ‌ರ್.ಎಸ್‌.ಎಸ್ ಮುಖಂಡರೊಬ್ಬರು ಮಾತನಾಡಿದ ಪ್ರಚೋಧನಕಾರಿ ಭಾಷಣ ಶೇರ್ ಮಾಡಿದ ವಿಹಿಂಪ ಪ್ರಾಂತ ಸಹ ಕಾರ್ಯದರ್ಶಿ ಶರಣ್ ಪಂಪ್ ವೆಲ್ ವಿರುದ್ಧ ಪೊಲೀಸರು ಸುಮೊಟೊ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕೇಸ್‌ ದಾಖಲಿಸಿಕೊಂಡ ಮಾಹಿತಿ ತಿಳಿಯುತ್ತಲೇ ಆರೋಪಿ ಶರಣ್ ಆ ಪೋಸ್ಟ್ ಅನ್ನು ಅಳಿಸಿ, ಠಾಣೆಗೆ ಹಾಜರಾಗಿದ್ದಾರೆ.ಸೋಮವಾರ ತನಿಖೆಗೆ ಹಾಜರಾಗಲು ಅವರಿಗೆ ನೋಟಿಸ್‌ ನೀಡಲಾಗಿದೆ. ಇದಕ್ಕೆ ಪ್ರತ್ಯೇಕವಾಗಿ, ಅವರು ಈ ಹಿಂದೆ ನೀಡಿದ್ದ ಬಂಧಪತ್ರ (Bond) ಮುಟ್ಟುಗೋಲು ಹಾಕಿಕೊಳ್ಳಲು (ಫೋರ್ಫೀಚರ್ ಮಾಡಲು) ಕ್ರಮ ಕೈಗೊಳ್ಳಲಾಗಿದೆ ಎಂದು ಮಂಗಳೂರು ಪೊಲೀಸ್‌ ಕಮೀಷನ‌ರ್ ತಿಳಿಸಿದ್ದಾರೆ. ಈ ಬೆನ್ನಲ್ಲೇ ಕದ್ರಿ ಪೊಲೀಸ್ ಠಾಣೆಯ ಸಿಬ್ಬಂದಿ ಯಾವುದೇ ನೋಟಿಸ್‌ ನೀಡದೆ ಅವರನ್ನು ಬಂಧಿಸಿದ್ದಾರೆ ಎಂದು ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು ಸುದ್ದಿ ಹಬ್ಬಿಸಿದ್ದು ಹಲವು ಗೊಂದಲಗಳಿಗೆ ಕಾರಣವಾಗಿತ್ತು. ಅಲ್ಲದೇ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರರವರು ಶರಣ್ ಕುಮಾರ್ ಪಂಪ್‌ ವೆಲ್ ಅವರನ್ನು ಕ್ಷುಲ್ಲಕ ಕಾರಣಕ್ಕೆ ಬಂಧಿಸಿ FIR ದಾಖಲಿಸಿರುವುದು ದಮನಕಾರಿ ಧೋರಣೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಿಜೆಪಿ ಮುಖಂಡ ವಿಕಾಸ್ ಪುತ್ತೂರು ಎಂಬುವವರು ಆರ್ ಎಸ್ ಎಸ್ ಮುಖಂಡರ ಭಾಷಣದ ತುಣುಕು ಶೇರ್ ಮಾಡಿದ್ದರು. ಕಳೆದ ಎರಡು ವರ್ಷಗಳ ಹಿಂದೆ ದ. ಕ ಜಿಲ್ಲೆಯಲ್ಲಿ ಎಷ್ಟು ಮಕ್ಕಳು ಹುಟ್ಟಿದರು ಎಂದು ನಾನೊಂದು ಲೆಕ್ಕ ತೆಗೆದೇ 45700 ಮಕ್ಕಳು ಹುಟ್ಟಿದರು ಅದರಲ್ಲಿ 23200 ಮಕ್ಕಳು ಹಿಂದೂಗಳು 22200 ಮಕ್ಕಳು ಅಲ್ಪಸಂಖ್ಯಾತರ ಮಕ್ಕಳು, ನಮ್ಮ ಜಿಲ್ಲೆಯ 78% ಜನಸಂಖ್ಯೆಗೆ ಹುಟ್ಟಿದ ಮಕ್ಕಳು 23000, 28% ಶೇಖಡ ಜನಸಂಖ್ಯೆಗೆ ಹುಟ್ಟಿದ ಮಕ್ಕಳು 22000. ಹಾಗಾದ್ರೆ ಇನ್ನೊಂದು 15 ವರ್ಷಗಳಲ್ಲಿ ನಮ್ಮ ಊರು ಎಲ್ಲಿಗೆ ಹೋಗುತ್ತೆ? ಆಗ ದೇಶ ಉಳಿಯುತ್ತ ಸಮಾಜ ಉಳಿಯುತ್ತ..?ನಾವೊಂದು ನಿಶ್ಚಯ ಮಾಡಬೇಕಿದೆ ಎಂದು ಆರ್ ಎಸ್ ಎಸ್ ಮುಖಂಡ ಭಾಷಣ ಮಾಡಿದ್ದರು.

ಶರಣ್ ಪಂಪ್‌’ವೆಲ್ ಠಾಣೆಯಲ್ಲಿರುವ ಮಾಹಿತಿ ಪಡೆದು ಕದ್ರಿ ಠಾಣೆಗೆ ಶಾಸಕ ವೇದವ್ಯಾಸ ಕಾಮತ್, ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್‌ ಕುಂಪಲ ಠಾಣೆಗೆ ಆಗಮಿಸಿದ್ದಾರೆ

ಈ ಭಾಷಣದ ತುಣುಕನ್ನ ಮುಸ್ಲಿಂರ ಜನಸಂಖ್ಯ ಜಿಹಾದ್ ಮೆಟ್ಟಿ ನಿಲ್ಲೋಣ ಎಂಬ ವಾಕ್ಯದಡಿ ವಿಕಾಸ್ ಪುತ್ತೂರು ಶೇರ್ ಮಾಡಿದ್ದರು. ಈ ಪೋಸ್ಟ್ ನ್ನೇ ಶರಣ್ ಪಂಪವೆಲ್ ಮಾಡಿದ್ದರು. ಸದ್ಯ Al ಆರೋಪಿ ವಿಕಾಸ್ ಪುತ್ತೂರು, A2 ಆರೋಪಿ ಶರಣ್ ಪಂಪ್ ವೆಲ್ ವಿರುದ್ಧ ಬಿ ಎನ್ ಎಸ್ 353(2) ಅಡಿ ಎಫ್ ಐ ಆರ್ ದಾಖಲಾಗಿದೆ.

ಪೊಲೀಸ್ ಕಮೀಷನ‌ರ್ ಹೇಳಿದ್ದೇನು ?

ಶರಣ್ ಪಂಪ್‌ವೆಲ್ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದ ಒಂದು ಪೋಸ್ಟ್ ಆಧಾರಿಸಿ ಅವರ ವಿರುದ್ಧ ಪ್ರಕರಣ ದಾಖಲಾಗಿದೆ.ತಮ್ಮ ಮೇಲೆ ಎಫ್‌ಐಆರ್ (FIR) ದಾಖಲಾಗಿರುವ ವಿಷಯ ತಿಳಿಯುತ್ತಿದ್ದಂತೆ. ಅವರು ಆ ಪೋಸ್ಟ್ ಅನ್ನು ಅಳಿಸಿ. ಠಾಣೆಗೆ ಹಾಜರಾದರು. ಸೋಮವಾರ ತನಿಖೆಗೆ ಹಾಜರಾಗಲು ಅವರಿಗೆ ನೋಟಿಸ್ ನೀಡಲಾಗಿದೆ. ಇದಕ್ಕೆ ಪ್ರತ್ಯೇಕವಾಗಿ, ಅವರು ಈ ಹಿಂದೆ ನೀಡಿದ್ದ ಬಂಧಪತ್ರ (Bond) ಮುಟ್ಟುಗೋಲು ಹಾಕಿಕೊಳ್ಳಲು (ಫೋರ್ಫೀಚರ್ ಮಾಡಲು) ಕ್ರಮ ಕೈಗೊಳ್ಳಲಾಗಿದೆ ಎಂದು ಮಂಗಳೂರು ಪೊಲೀಸ್ ಕಮೀಷನ‌ರ್ ಸುಧೀರ್ ಕುಮಾರ್ ರೆಡ್ಡಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಶರಣ್ ಪಂಪ್‌ ವೆಲ್ ಬಂಧನ – ಅಭಿವ್ಯಕ್ತಿ ಸ್ವಾಂತಂತ್ರ್ಯ ಹತ್ತಿಕ್ಕುವ ಕ್ರಮ : ಬಿವೈ ವಿಜಯೇಂದ್ರ

ಇನ್ನು ಈ ಪ್ರಕರಣದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಬಿಜೆಪಿ ರಾಜ್ಯಾದ್ಯಕ್ಷ ಹಾಗೂ ಶಿಕಾರಿಪುರ ಶಾಸಕ ಬಿವೈ ವಿಜಯೇಂದ್ರರವರು ” ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಪೂರ್ವ ಠಾಣೆಯಲ್ಲಿ ಹಿಂದೂ ಮುಖಂಡರಾದ ಶರಣ್ ಕುಮಾರ್ ಪಂಪ್‌ ವೆಲ್ ಅವರನ್ನು ಕ್ಷುಲ್ಲಕ ಕಾರಣಕ್ಕೆ ಬಂಧಿಸಿ FIR ದಾಖಲಿಸಿರುವುದು ಅಭಿವ್ಯಕ್ತಿ ಸ್ವಾಂತಂತ್ರ್ಯ ಹತ್ತಿಕ್ಕುವ ಕ್ರಮವಾಗಿದೆ ಎಂದು ಬರೆದುಕೊಂಡಿದ್ದಾರೆ

ಅವರ ಪೋಸ್ಟ್ ನಲ್ಲಿ ಏನಿದೆ ?

ಹಿಂದೂಪರ ಕಾರ್ಯಕರ್ತರು ಹಾಗೂ ಸಂಘಟನೆಗಳ ಮುಖಂಡರುಗಳನ್ನು ಗುರಿಯಾಗಿಸಿಕೊಂಡು ರಾಜ್ಯ Indian National Congress – Karnataka ಸರ್ಕಾರ ಪೊಲೀಸರ ಮೂಲಕ ಹಗೆತನ ಸಾಧಿಸುತ್ತಿದೆ.ಇಂದು ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಪೂರ್ವ ಠಾಣೆಯಲ್ಲಿ ಹಿಂದೂ ಮುಖಂಡರಾದ ಶ್ರೀ ಶರಣ್ ಕುಮಾರ್ ಪಂಪ್‌ ವೆಲ್ ಅವರನ್ನು ಕ್ಷುಲ್ಲಕ ಕಾರಣಕ್ಕೆ ಬಂಧಿಸಿ FIR ದಾಖಲಿಸಿರುವುದು ಅಭಿವ್ಯಕ್ತಿ ಸ್ವಾಂತಂತ್ರ್ಯ ಹತ್ತಿಕ್ಕುವ ಕ್ರಮವಾಗಿದೆ.

ಶಾಂತಿ, ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಸಮತೋಲನ ಕಾಯ್ದುಕೊಳ್ಳಬೇಕಾದ ಪೊಲೀಸ್ ವ್ಯವಸ್ಥೆ ಸರ್ಕಾರದ ಪ್ರಭಾವಕ್ಕೆ ಒಳಗಾಗಿ ಹಿಂದೂಪರ ಸಂಘಟಕರನ್ನು ಗುರಿಯಾಗಿಸಿಕೊಂಡು ಬಂಧಿಸುವುದು ಹಾಗೂ ಅನಗತ್ಯ ಕಿರುಕುಳ ನೀಡುವುದು ದಮನಕಾರಿ ಧೋರಣೆಯಾಗುತ್ತದೆ. ಅಭಿವೃದ್ಧಿ ಕಾರ್ಯಗಳನ್ನು ಸಂಪೂರ್ಣ ಮರೆತು ಪೊಲೀಸರನ್ನು ‘ಚೂ ಬಿಟ್ಟು ‘ಸಮಾಜದ ಶಾಂತಿ ಸುವ್ಯವಸ್ಥೆಗೆ ಸರ್ಕಾರವೇ ಭಂಗ ತರುತ್ತಿರುವುದು ಅತ್ಯಂತ ಖಂಡನೀಯ.

[t4b-ticker]
error: Content is protected !!