ಹಿಂದೂಪರ ಕಾರ್ಯಕರ್ತ, ಮುಖಂಡರ ಮೇಲೆ ವಿನಾಕಾರಣ ರಾಜ್ಯ ಸರ್ಕಾರ ಕೇಸ್ ದಾಖಲಿಸುವುದನ್ನು ಬಿಜೆಪಿ ಖಂಡಿಸುತ್ತದೆ | ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜೇಯೇಂದ್ರ

Picture of Savistara

Savistara

Bureau Report

ಹಿಂದೂಪರ ಕಾರ್ಯಕರ್ತರು ಹಾಗೂ ಸಂಘಟನೆಗಳ ಮುಖಂಡರುಗಳನ್ನು ಗುರಿಯಾಗಿಸಿಕೊಂಡು ರಾಜ್ಯ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ – ಕರ್ನಾಟಕ ಸರ್ಕಾರ ಪೊಲೀಸರ ಮೂಲಕ ಹಗೆತನ ಸಾಧಿಸುತ್ತಿದೆ. ಇಂದು ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಪೂರ್ವ ಠಾಣೆಯಲ್ಲಿ ಹಿಂದೂ ಮುಖಂಡರಾದ ಶ್ರೀ ಶರಣ್ ಕುಮಾರ್ ಪಂಪ್ ವೆಲ್ ಅವರನ್ನು ಕ್ಷುಲ್ಲಕ ಕಾರಣಕ್ಕೆ ಬಂಧಿಸಿ FIR ದಾಖಲಿಸಿರುವುದು ಅಭಿವ್ಯಕ್ತಿ ಸ್ವಾಂತಂತ್ರ್ಯ ಹತ್ತಿಕ್ಕುವ ಕ್ರಮವಾಗಿದೆ.ಶಾಂತಿ, ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಸಮತೋಲನ ಕಾಯ್ದುಕೊಳ್ಳಬೇಕಾದ ಪೊಲೀಸ್ ವ್ಯವಸ್ಥೆ ಸರ್ಕಾರದ ಪ್ರಭಾವಕ್ಕೆ ಒಳಗಾಗಿ ಹಿಂದೂಪರ ಸಂಘಟಕರನ್ನು ಗುರಿಯಾಗಿಸಿಕೊಂಡು ಬಂಧಿಸುವುದು ಹಾಗೂ ಅನಗತ್ಯ ಕಿರುಕುಳ ನೀಡುವುದು ದಮನಕಾರಿ ಧೋರಣೆಯಾಗುತ್ತದೆ, ಅಭಿವೃದ್ಧಿ ಕಾರ್ಯಗಳನ್ನು ಸಂಪೂರ್ಣ ಮರೆತು ಪೊಲೀಸರನ್ನು ‘ಚೂ ಬಿಟ್ಟು ‘ಸಮಾಜದ ಶಾಂತಿ-ಸುವ್ಯವಸ್ಥೆಗೆ ಸರ್ಕಾರವೇ ಭಂಗ ತರುತ್ತಿರುವುದು ಅತ್ಯಂತ ಖಂಡನೀಯ. ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜೇಯೇಂದ್ರ ಅವರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

[t4b-ticker]
error: Content is protected !!