ದೇಶದ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಸುಧಾರಣೆಯನ್ನು ಕ್ರಾಂತಿಕಾರಿ ಎಂದು ಬಣ್ಣಿಸುತ್ತಿರುವ ನಡುವೆ, ಕಾಪರ್ ಸಲ್ವೇಟ್ ಮೇಲಿನ ಜಿಎಸ್‌ಟಿ ದರ ಕಡಿಮೆ ಮಾಡದ ಹಿನ್ನೆಲೆಯಲ್ಲಿ ಅಡಿಕೆ ಬೆಳೆಗಾರರು ಮುನಿಸಿಕೊಂಡಿದ್ದಾರೆ. ಅಡಕೆಗೆ ಬಾಧಿಸುವ ಕೊಳೆರೋಗ ನಿವಾರಣೆಗೆ ಬೋರ್ಡೋ ಮಿಶ್ರಣ(ಆಟ್ಟಭಿಭಿಚ್ಚ ಞಜಿಛಿ)ಕ್ಕೆ ಪ್ರಮುಖ ಔಷಧವಾಗಿ ಕಾಪರ್ ಸಲ್ವೇಟ್ ಬಳಸುತ್ತಿದ್ದು, ಇದಕ್ಕೆ ಬಹಳಷ್ಟು ಬೇಡಿಕೆ ಇದೆ. ಶೇ.18 ಇರುವ ಜಿಎಸ್‌ಟಿಯನ್ನು ಶೇ.5ಕ್ಕೆ ಇಳಿಸಬೇಕೆಂದು ಕಳೆದ 3 ವರ್ಷಗಳಿಂದ ಕೇಂದ್ರ ಗೃಹ, ವಿತ್ತ ಸಹಿತ ಸಚಿವರು, ಸಂಸದರಿಗೆ ಮನವಿ ಮಾಡಿದ್ದರೂ, ಹಾಗೆಯೇ ಉಳಿಸಿರುವ ಕೇಂದ್ರ ಸರಕಾರದ ನಿರ್ಧಾರಕ್ಕೆ ಅಡಕೆ ಬೆಳೆಗಾರರು ಮತ್ತು ಅಡಕೆ ಮಾರುಕಟ್ಟೆ ಮಾಡುವ ಸಹಕಾರಿ ಸಂಸ್ಥೆಗಳು ಅಸಮಾಧಾನ ವ್ಯಕ್ತಪಡಿಸಿವೆ.”ರಸಗೊಬ್ಬರಗಳು, ಮೈಕ್ರೋ ನ್ಯೂಟ್ರಿಯೆಂಟ್ಸ್‌ಗಳ ಮೇಲಿನ ಜಿಎಸ್‌ಟಿ
ಶೇ.12ರಿಂದ ಶೇ.5ಕ್ಕೆ ಇಳಿಸಲಾಗಿದೆ, ಹಾಗಾದರೆ ನಾವಿಷ್ಟು ವರ್ಷಗಳಿಂದ ಮನವಿ ಮಾಡಿಕೊಂಡು ಬಂದು ಏನು ಪ್ರಯೋಜನ?,” ಎಂದು ಕ್ಯಾಂಪ್ಯೂ ಅಧ್ಯಕ್ಷ ಎ.ಕಿಶೋರ್ ಕುಮಾರ್ ಕೊಡ್ಲಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.ಅಡಕೆ ಬೆಳೆ ಹಳದಿ ರೋಗ, ಎಲೆಚುಕ್ಕೆ ರೋಗದಿಂದ ತತ್ತರಿಸುತ್ತಿರುವಾಗ ಬೆಳೆಗಾರರು ಬಹುತೇಕ ಅಗತ್ಯ ಕೃಷಿ ಶಿಲೀಂಧ್ರ ನಾಶಕವಾಗಿ ಕಾಪರ್ ಸಲ್ವೇಟ್ ಬಳಸುತ್ತಿದ್ದಾರೆ. ಅಡಕೆಯಲ್ಲಿ ಹಣ್ಣಿನ ಕೊಳೆತ ಅಥವಾ ಕೊಳೆರೋಗ, ಕಾಫಿ, ಬಲಕ್ಕಿ, ರಬ್ಬರ್ ಮತ್ತು ಮೆಣಸಿನ ಕಾಯಿಯಂತಹ
ಇತರ ತೋಟದ ಬೆಳೆಗಳಲ್ಲೂ ಶಿಲೀಂಧ್ರ ರೋಗಗಳ ವಿರುದ್ಧ ಪರಿಣಾಮಕಾರಿ ಔಷಧವಾಗಿ ಬಳಕೆ ಮಾಡಲಾಗುತ್ತಿದೆ.’ತಾಂತ್ರಿಕ ದರ್ಜೆಯ ಕಾಪರ್ ಸಲ್ವೇಟ್ ಮೇಲೆ ಶೇ.18 ಜಿಎಸ್ ಹಾಕಿರುವುದು
ಅನ್ಯಾಯ ಮತ್ತು ಅಸಹನೀಯ. ಈಗಾಗಲೇ ಭಾರಿ ಮಳೆ, ಬೆಳೆ ನಷ್ಟ ಮತ್ತು ಹೆಚ್ಚುತ್ತಿರುವ ನಿರ್ವಹಣೆ ವೆಚ್ಚಗಳ ಹೊರೆಯಿಂದ ತತ್ತರಿಸಿರುವ ರೈತರಿಗೆ ತೆರಿಗೆ ಹೊರೆಯಾಗಿದೆ,” ಎನ್ನುತ್ತಾರೆ ಕಿಶೋರ್ ಕುಮಾರ್ ಕೊಡ್ಡಿ,
ಬೀಡಿಗಿಂತ ಕಡೆಯೇ?ಬೀಡಿ ಎಲೆ ಮೇಲೆ ಶೇ.5 ಮತ್ತು ಬೀಡಿಗೆ 28ರಿಂದ ಶೇ.18ಕ್ಕೆ ಜಿಎಸ್‌ಟಿ ಇಳಿಸಿದ್ದರೆ, ಪಾನ್ ಮಸಾಲಕ್ಕೆ ಶೇ.28ರಿಂದ ಶೇ.40 ಹೆಚ್ಚಳ ಮಾಡಿದ್ದು, ಬೀಡಿಗಿಂತಲೂ ಪಾನ್ ಮಸಾಲ ಕಡೆಯಾಯಿತೇ ಎಂಬುದು ಬೆಳೆಗಾರರ ಪ್ರಶ್ನೆ. ಪಾನ್ ಮಸಾಲದಲ್ಲಿ ಅಡಕೆ, ಸುಣ್ಣ, ಏಲಕ್ಕಿ, ಲವಂಗ ಮತ್ತು ಮಸಾಲೆಗಳಿವೆ. ಇದು ಯಾವುದೂ ಆರೋಗ್ಯಕ್ಕೆ ಹಾನಿಕರವಲ್ಲ, ಹೊಗೆಸೊಪ್ಪು ಸೇರಿಸಿದರೆ ಮಾತ್ರ ಹಾನಿಕರ. ಹೊಗೆಸೊಪ್ಪಿಗೆ ಬಹಳಷ್ಟು ತೆರಿಗೆ ಹಾಕಿದ್ದು, ಅದು ಬೇರೆ ವಿಷಯ ಎಂದು ಕಿಶೋರ್ ಕುಮಾರ್ ಕೊಡ್ಲಿ ಹೇಳುತ್ತಿದ್ದಾರೆ.
ಬೀಡಿಗಿಂತ ಕಡೆಯೇ?
ಬೀಡಿ ಎಲೆ ಮೇಲೆ ಶೇ.5 ಮತ್ತು ಬೀಡಿಗೆ 28ರಿಂದ ಶೇ.18ಕ್ಕೆ ಜಿಎಸ್‌ಟಿ ಇಳಿಸಿದ್ದರೆ, ಪಾನ್ ಮಸಾಲಕ್ಕೆ ಶೇ.28ರಿಂದ ಶೇ.40 ಹೆಚ್ಚಳ ಮಾಡಿದ್ದು, ಬೀಡಿಗಿಂತಲೂ ಪಾನ್ ಮಸಾಲ ಕಡೆಯಾಯಿತೇ ಎಂಬುದು ಬೆಳೆಗಾರರ ಪ್ರಶ್ನೆ. ಪಾನ್ ಮಸಾಲದಲ್ಲಿ ಅಡಕೆ, ಸುಣ್ಣ, ಏಲಕ್ಕಿ, ಲವಂಗ ಮತ್ತು ಮಸಾಲೆಗಳಿವೆ. ಇದು ಯಾವುದೂ ಆರೋಗ್ಯಕ್ಕೆ ಹಾನಿಕರವಲ್ಲ, ಹೊಗೆಸೊಪ್ಪು ಸೇರಿಸಿದರೆ ಮಾತ್ರ ಹಾನಿಕರ. ಹೊಗೆಸೊಪ್ಪಿಗೆ ಬಹಳಷ್ಟು ತೆರಿಗೆ ಹಾಕಿದ್ದು, ಅದು ಬೇರೆ ವಿಷಯ ಎಂದು ಕಿಶೋರ್ ಕುಮಾರ್ ಕೊಡ್ಲಿ ಹೇಳುತ್ತಿದ್ದಾರೆ.
ಕಾಪರ್ ಸಲ್ವೇಟ್ ಮೇಲಿನ ಜಿಎಸ್ ದರ ಶೇ.18ರಿಂದ ಶೇ.5ಕ್ಕೆ ಇಳಿಸಬೇಕೆಂಬುದು ನಮ್ಮ ಬೇಡಿಕೆ. ಸರಕಾರ ಅದನ್ನು ಪರಿಶೀಲಿಸಬೇಕು. ಇಲ್ಲದಿದ್ದರೆ ಸಣ್ಣ ರೈತರಿಗೆ ಬಹಳಷ್ಟು ಕಷ್ಟವಾಗಲಿದೆ. ಪಾನ್ ಮಸಾಲ ಮೇಲಿನ ಜಿಎಸ್‌ಟಿ ಹೆಚ್ಚಳದಿಂದ ಕೆಂಪಡಕೆ ಮಾಡುವವರಿಗೆ ಸಮಸ್ಯೆಯಾಗಲಿದೆ. ಮಾರುಕಟ್ಟೆಗೆ ಹಿನ್ನಡೆಯಾಗುವ ಸಾಧ್ಯತೆ ಇದೆ.
–ಎ.ಕಿಶೋರ್ ಕುಮಾರ್ ಕೊಡ್ಲಿಅಧ್ಯಕ್ಷ, ಕ್ಯಾ೦ಪ್ಯೂ








































