11 ದಿನದ ಮಳೆ ರಜೆ ಸರಿದೂಗಿಸಲು 20 ಶನಿವಾರ ಪೂರ್ತಿ ದಿನ ಶಾಲೆ; ದ.ಕ. ಶಿಕ್ಷಣ ಇಲಾಖೆ ನಿರ್ಧಾರ

Picture of Savistara

Savistara

Bureau Report

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕು ಸೇರಿದಂತೆ ವಿವಿಧೆಡೆ ಈ ಬಾರಿಯ ಮಳೆಗಾಲದಲ್ಲಿ ಸುರಿದ ಭಾರೀ ಮಳೆಯಿಂದಾಗಿ ಶಾಲೆಗಳಿಗೆ ನೀಡಲಾಗಿದ್ದ ರಜೆಯನ್ನು ಸರಿದೂಗಿಸಲು, ಪ್ರತಿ ಶನಿವಾರ ಪೂರ್ಣ ದಿನ ತರಗತಿ ನಡೆಸಲು ಶಾಲಾ ಶಿಕ್ಷಣ ಇಲಾಖೆ ತೀರ್ಮಾನಿಸಿದೆ.

ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕು ಸೇರಿದಂತೆ ವಿವಿಧೆಡೆ ಈ ಬಾರಿಯ ಮಳೆಗಾಲದಲ್ಲಿ ಸುರಿದ ಭಾರೀ ಮಳೆಯಿಂದಾಗಿ ಶಾಲೆಗಳಿಗೆ ನೀಡಲಾಗಿದ್ದ ರಜೆಯನ್ನು ಸರಿದೂಗಿಸಲು, ಪ್ರತಿ ಶನಿವಾರ ಪೂರ್ಣ ದಿನ ತರಗತಿ ನಡೆಸಲು ಶಾಲಾ ಶಿಕ್ಷಣ ಇಲಾಖೆ ತೀರ್ಮಾನಿಸಿದೆ.

1ನೇ ತರಗತಿಯಿಂದ ಪ್ರೌಢ ಶಾಲೆ ವರೆಗಿನ ಮಕ್ಕಳಿಗೆ ಮಾರ್ಚ್ 2026ರ ವರೆಗೆ ಪ್ರತಿ ಶನಿವಾರ ಪೂರ್ಣ ದಿನ ತರಗತಿ ನಡೆಸಲು ನಿರ್ಧರಿಸಲಾಗಿದೆ.

11 ರಜೆಯನ್ನು 20 ಶನಿವಾರಗಳಲ್ಲಿ ಪೂರ್ತಿಗೊಳಿಸಬೇಕು“ಮಳೆಯ ಕಾರಣದಿಂದಾಗಿ 11 ದಿನ ರಜೆ ನೀಡಲಾಗಿದೆ. ಈ 11 ದಿನಗಳನ್ನು ಸರಿದೂಗಿಸಲು ಶನಿವಾರದಂದು ಪೂರ್ಣ ದಿನ ತರಗತಿಗಳನ್ನು ನಡೆಸಿ, ಮುಂದಿನ 20 ಶನಿವಾರಗಳಲ್ಲಿ ಇದನ್ನು ಪೂರ್ಣಗೊಳಿಸಬೇಕು. ಮಕ್ಕಳಿಗೆ ವಾರದಲ್ಲಿ ಒಂದು ದಿನ ವಿಶ್ರಾಂತಿ ಬೇಕಿರುವುದರಿಂದ, ರಜೆ ನೀಡಲಾಗುತ್ತದೆ. ಗಣತಿ ರಜೆಯನ್ನು ಸರಿದೂಗಿಸುವ ಬಗ್ಗೆ ಸರ್ಕಾರದಿಂದ ಇನ್ನೂ ಯಾವುದೇ ನಿರ್ದೇಶನ ಬಂದಿಲ್ಲ” ಎಂದು ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ ವಿಷ್ಣುಪ್ರಸಾದ್ ತಿಳಿಸಿದ್ದಾರೆ.

[t4b-ticker]
error: Content is protected !!