ನಿವೃತ್ತಿ ಘೋಷಿಸಿದ ಒಲಿಂಪಿಕ್ ವಿಜೇತ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್

Picture of Savistara

Savistara

Bureau Report

ನವದೆಹಲಿ: ಒಲಿಂಪಿಕ್ಸ್ ಪದಕ ವಿಜೇತ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್‌ ಅವರು ಸ್ಪರ್ಧಾತ್ಮಕ ಆಟಕ್ಕೆ ನಿವೃತ್ತಿ ಘೋಷಿಸಿದ್ದಾರೆ. ಮೊಣಕಾಲು ನೋವಿನಿಂದ ಬಳಲುತ್ತಿರುವ ಅವರು, ಕಳೆದ ಎರಡು ವರ್ಷಗಳಿಂದ ಬ್ಯಾಡ್ಮಿಂಟನ್ ಅಂಗಳದಿಂದ ದೂರ ಉಳಿದಿದ್ದರು.

35 ವರ್ಷದ ಸೈನಾ ಕೊನೆಯದಾಗಿ 2023ರ ಸಿಂಗಪುರ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಆಡಿದ್ದರು. ಅವರು 2012ರ ಲಂಡನ್‌ ಒಲಿಂಪಿಕ್‌ನಲ್ಲಿ ಭಾರತಕ್ಕೆ ಚಾರಿತ್ರಿಕ ಕಂಚಿನ ಪದಕ ಗೆದ್ದಿದ್ದರು. ವೃತ್ತಿಜೀವನದಲ್ಲಿ ಒಟ್ಟು 24 ಅಂತರರಾಷ್ಟ್ರೀಯ ಪ್ರಶಸ್ತಿಗಳಿಗೆ ಮುತ್ತಿಕ್ಕಿದ್ದಾರೆ.’ಎರಡು ವರ್ಷಗಳ ಹಿಂದೆಯೇ ನಾನು ಬ್ಯಾಡ್ಮಿಂಟನ್ ಆಡುವುದನ್ನು ನಿಲ್ಲಿಸಿದ್ದೆ. ನನ್ನ ದೇಹವು ನನ್ನ ಆಟಕ್ಕೆ ಸ್ಪಂದಿಸುತ್ತಿಲ್ಲ. ನನ್ನದೇ ಇಚ್ಛೆಯಿಂದ ಈ ಕ್ರೀಡೆಯನ್ನು ಆಟವಾಡಲು ಆರಂಭಿಸಿದೆ. ಈಗ ನನ್ನದೇ ಇಚ್ಛೆಯಿಂದ ಬ್ಯಾಡ್ಮಿಂಟನ್ ಅಂಗಳದಿಂದ ಹಿಂದೆ ಸರಿದಿದ್ದೇನೆ. ಅದನ್ನು ಅಧಿಕೃತವಾಗಿ ಹೇಳುವ ಅವಶ್ಯಕತೆಯಿಲ್ಲ’ ಎಂದು ವಿಶ್ವದ ಮಾಜಿ ಅಗ್ರಮಾನ್ಯ ಆಟಗಾರ್ತಿ ಸೈನಾ ನೆಹ್ವಾಲ್‌ ಅವರು ಪಾಡ್‌ಕಾಸ್ಟ್‌ನಲ್ಲಿ ತಿಳಿಸಿದ್ದಾರೆ.’ವಿದಾಯ ಹೇಳುವುದನ್ನು ಅಷ್ಟು ದೊಡ್ಡ ವಿಷಯವೆಂದು ನಾನು ಭಾವಿಸಿರಲಿಲ್ಲ. ಆದರೆ, ಇನ್ನು ಮುಂದೆ ಆಡಲು ಸಾಧ್ಯವಿಲ್ಲ ಎಂಬುದನ್ನು ನಾನು ಅರಿತುಕೊಂಡಿದ್ದೇನೆ. ಏಕೆಂದರೆ, ನನ್ನ ಮೊಣಕಾಲುಗಳು ಮೊದಲಿನಂತೆ ಈಗ ಆಟಕ್ಕೆ ಸ್ಪಂದಿಸುತ್ತಿಲ್ಲ’ ಎಂದು ಅವರು ಹೇಳಿದರು.

‘ಬ್ಯಾಡ್ಮಿಂಟನ್‌ನಲ್ಲಿ ಯಶಸ್ಸು ಗಳಿಸಬೇಕಾದರೆ ದಿನಕ್ಕೆ 8ರಿಂದ 9 ಗಂಟೆಗಳ ಕಾಲ ಅಭ್ಯಾಸ ನಡೆಸಬೇಕು. ಆದರೆ, ನನ್ನ ಮೊಣಕಾಲು ಒಂದು ಅಥವಾ ಎರಡು ಗಂಟೆಗಳಲ್ಲಿ ಬಲ ಕಳೆದುಕೊಳ್ಳುತ್ತಿದೆ. ಮಾತ್ರವಲ್ಲ ಅದು ಊದಿಕೊಳ್ಳುತ್ತಿದೆ. ಹಾಗಾಗಿ, ನಿವೃತ್ತಿಯನ್ನು ಮುಂದೆ ತಳ್ಳಲು ಸಾಧ್ಯವಿಲ್ಲ’ ಎಂದು ಅಭಿಪ್ರಾಯಪಟ್ಟರು.2016ರ ರಿಯೊ ಒಲಿಂಪಿಕ್ಸ್‌ ನಲ್ಲಿ ಸೈನಾ ಮೊಣಕಾಲಿನ ಗಾಯಕ್ಕೆ ಒಳಗಾಗಿದ್ದರು. ಇದು ಅವರ ವೃತ್ತಿಜೀವನದ ಮೇಲೆ ಭಾರೀ ಪರಿಣಾಮ ಬೀರಿತು. ಗಾಯದಿಂದ ಚೇತರಿಸಿಕೊಂಡು 2017ರ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಕಂಚು ಮತ್ತು 2018ರ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಚಿನ್ನ ಗೆದ್ದಿದ್ದರು. ಆದರೆ, ನಂತರ ಪದೇ ಪದೇ ಕಾಡುತ್ತಿದ್ದ ಮೊಣಕಾಲು ನೋವು ಅವರ ಪ್ರಗತಿಗೆ ಅಡ್ಡಿಯಾಯಿತು.

2018ರಲ್ಲಿ ಸೈನಾ ಅವರು ಅಂತರರಾಷ್ಟ್ರೀಯ ಬ್ಯಾಡ್ಮಿಂಟನ್ ಆಟಗಾರ ಪರುಪಳ್ಳಿ ಕಶ್ಯಪ್ ಅವರನ್ನು ವಿವಾಹವಾಗಿದ್ದಾರೆ. ಕಳೆದ ಜುಲೈನಲ್ಲಿ ಈ ದಂಪತಿ ಪರಸ್ಪರ ಬೇರ್ಪಡುವ ನಿರ್ಧಾರ ಪ್ರಕಟಿಸಿದ್ದರು. ಆದರೆ, ಎರಡು ವಾರಗಳ ಬಳಿಕ ‘ಮತ್ತೆ ಒಂದಾಗುತ್ತಿದ್ದೇವೆ’ ಎಂದು ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿದ್ದರು.

ನೆಹ್ವಾಲ್ ಸಾಧನೆಯ ಹಾದಿ

ಜನ್ಮ ದಿನಾಂಕ: 17 ಮಾರ್ಚ್ 1990 ಊರು: ಹರಿಯಾಣಹಿಸಾರ್‌ಪತಿ: ಪರುಪಳ್ಳಿ ಕಶ್ಯಪ್ (ಅಂತರರಾಷ್ಟ್ರೀಯ ಬ್ಯಾಡ್ಮಿಂಟನ್ ಆಟಗಾರ) ಗೆದ್ದ ಪ್ರಶಸ್ತಿಗಳು ಮತ್ತು ಗೌರವ 2012ರ ಲಂಡನ್ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ2015ರ ಜಕಾರ್ತ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಬೆಳ್ಳಿ ಪದಕ2017ರ ಗ್ಲಾಸ್ಕೊ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಕಂಚು2024 ಮತ್ತು 2016ರ ಉಬರ್ ಕಪ್‌ನಲ್ಲಿ ತಂಡದಲ್ಲಿ ಕಂಚಿನ ಪದಕಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ 3 ಚಿನ್ನ 2 ಬೆಳ್ಳಿ ಮತ್ತು 1 ಕಂಚು2014 2018ರ ಏಷ್ಯನ್ ಗೇಮ್ಸ್‌ನಲ್ಲಿ ಕಂಚಿನ ಪದಕಗಳುಏಷ್ಯನ್ ಚಾಂಪಿಯನ್‌ಷಿಪ್‌ನಲ್ಲಿ ಮೂರು ಕಂಚಿನ ಪದಕಬಿಡಬ್ಲ್ಯುಎಫ್ ವಿಶ್ವ ಟೂರ್‌ನಲ್ಲಿ 1 ಪ್ರಶಸ್ತಿ ಮೂರು ರನ್ನ‌ರ್ ಅಪ್‌ಬಿಡಬ್ಲ್ಯುಎಫ್ ಸೂಪರ್ ಸೀರಿಸ್‌ನಲ್ಲಿ 10 ಕಿರೀಟ ಐದು ರನ್ನರ್ ಅಪ್‌ಬಿಡಬ್ಲ್ಯುಎಫ್ ಗ್ರಾನ್‌ಪ್ರಿನಲ್ಲಿ 10 ಪ್ರಶಸ್ತಿ ಒಂದು ರನ್ನ‌ರ್ ಅಪ್ ಕೇಂದ್ರ ಸರ್ಕಾರದ ಗೌರವಗಳು 2009ರಲ್ಲಿ ಅರ್ಜುನ ಪ್ರಶಸ್ತಿ2010ರಲ್ಲಿ ಮೇಜರ್ ಧ್ಯಾನ್ ಚಂದ್ ಪ್ರಶಸ್ತಿ2010ರಲ್ಲಿ ಪದ್ಮಶ್ರೀ ಗೌರವ 2016ರಲ್ಲಿ ಪದ್ಮಭೂಷಣ ಗೌರವ

[t4b-ticker]
error: Content is protected !!