ತಿಲಕ ಹಚ್ಚಿದ್ದಕ್ಕೆ ಲಂಡನ್‌ ಶಾಲೆಯಲ್ಲಿ ಹಿಂದೂ ಬಾಲಕನಿಗೆ ತಾರತಮ್ಯ: ಘಟನೆಗೆ ಬ್ರಿಟನ್‌ನಲ್ಲಿನ ಹಿಂದೂ ಸಮುದಾಯಗಳ ಆಕ್ರೋಶ

Picture of Savistara

Savistara

Bureau Report

ಲಂಡನ್‌ನ ಹೆಸರಾಂತ ಶಾಲೆಯೊಂದರಲ್ಲಿ 8 ವರ್ಷದ ಹಿಂದೂ ಬಾಲಕ ತಿಲಕ ಧರಿಸಿದ್ದಕ್ಕಾಗಿ ಧಾರ್ಮಿಕ ತಾರತಮ್ಯ ಎದುರಿಸಿದ ಘಟನೆ ಜಗತ್ತಿನಾದ್ಯಂತ ಸದ್ದು ಮಾಡುತ್ತಿದೆ. ಬಾಲಕ ಹಣೆಗೆ ತಿಲಕ ಇಟ್ಟುಕೊಂಡು ಶಾಲೆಗೆ ಬಂದಿದ್ದನ್ನು ವಿರೋಧಿಸಿದ ಶಾಲಾ ಆಡಳಿತ ಮಂಡಳಿ ಮತ್ತು ಶಿಕ್ಷಕರು, ಇದು ಶಾಲಾ ನಿಯಮಗಳಿಗೆ ವಿರುದ್ಧ ಎಂದು ಆಕ್ಷೇಪಿಸಿದ್ದರು.

ಅಷ್ಟೇ ಅಲ್ಲದೆ, ಈ ಬಗ್ಗೆ ಬಾಲಕನಿಗೆ ಮಾನಸಿಕ ಹಿಂಸೆ ನೀಡಿ, ಆತನನ್ನು ಶಾಲೆಯ ಜವಾಬ್ದಾರಿಗಳಿಂದ ತೆಗೆದುಹಾಕಲಾಗಿತ್ತು ಎಂಬ ಗಂಭೀರ ಆರೋಪ ಕೇಳಿಬಂದಿದೆ. ಮಗುವಿನ ತಂದೆ-ತಾಯಿ ಶಾಲಾ ಮಂಡಳಿಗೆ ಮನವರಿಕೆ ಮಾಡಲು ಪ್ರಯತ್ನಿಸಿದರೂ ಪ್ರಯೋಜನವಾಗದಿದ್ದಾಗ, ಮಗುವಿನ ಆತ್ಮಗೌರವಕ್ಕಾಗಿ ಆತನನ್ನು ಶಾಲೆಯಿಂದಲೇ ಬಿಡಿಸಿದ್ದಾರೆ.

ಈ ಘಟನೆಯನ್ನು ಬ್ರಿಟನ್‌ನಲ್ಲಿರುವ ಹಿಂದೂ ಸಮುದಾಯಗಳು ತೀವ್ರವಾಗಿ ಖಂಡಿಸಿದ್ದು, ಇದು ಧಾರ್ಮಿಕ ಸ್ವಾತಂತ್ರ್ಯದ ಉಲ್ಲಂಘನೆ ಎಂದು ಆಕ್ರೋಶ ವ್ಯಕ್ತಪಡಿಸಿವೆ.

News Updates

ನಿಮ್ಮಪ್ಪನಿಂದಲೇ ಆರ್‌ಎಸ್‌ಎಸ್‌ಗೆ ಏನು ಮಾಡೋಕೆ ಆಗಿಲ್ಲ, ನಿಮ್ಮಿಂದ ಆಗುತ್ತಾ? ಅಧಿಕಾರದಲ್ಲಿ ಮೆರೆದವರಿಗೆ ಬಂಗಾಳದ ಜನ್ನು ಅಟ್ಟಾಡಿಸಿ ಹೊಡೆಯುತ್ತಿದ್ದಾರೆ, ಗೃಹ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಸಿಟಿ ರವಿ ವಾಗ್ದಾಳಿ

[t4b-ticker]
error: Content is protected !!