ನಾನ್ಯಾವತ್ತೂ ಹೂಡಿಕೆ ಬಗ್ಗೆ ಮಾತನಾಡಲ್ಲ, ನಕಲಿ ವಿಡಿಯೋಗಳ ಬಗ್ಗೆ ಎಚ್ಚರದಿಂದಿರಿ: ಸುಧಾ ಮೂರ್ತಿ

Picture of Savistara

Savistara

Bureau Report

ಬೆಂಗಳೂರು: ಡೀಪ್ ಫೇಕ್ ತಂತ್ರಜ್ಞಾನ ಬಂದ ಬಳಿಕ ಸೋಷಿಯಲ್ ಮೀಡಿಯಾಗಳಲ್ಲಿ ನಾನಾ ಸೆಲಬ್ರಿಟಿಗಳ ವಿಡಿಯೋಗಳು ಹರಿದಾಡುತ್ತಿವೆ. ಇಷ್ಟು ಹಣ ಹೂಡಿಕೆ ಮಾಡಿ, ಇಷ್ಟು ಲಾಭ ಮಾಡಿ ಎಂಬಿತ್ಯಾದಿ ಪ್ರಲೋಭನೆಗಳನ್ನು ಈ ವಿಡಿಯೋಗಳಲ್ಲಿ ಕಾಣಬಹುದು. ಇಂಥ ಬಹುತೇಕ ವಿಡಿಯೋಗಳು ಡೀಪ್​ಫೇಕ್ ಬಳಸಿ ತಯಾರಾದ ನಕಲಿ ವಿಡಿಯೋಗಳೇ ಆಗಿವೆ. ನಿರ್ಮಲಾ ಸೀತಾರಾಮನ್, ಸುಧಾ ಮೂರ್ತಿ ಇತ್ಯಾದಿ ಗಣ್ಯ ವ್ಯಕ್ತಿಗಳೇ ಮಾತನಾಡಿರುವಂತೆ ಈ ವಿಡಿಯೋಗಳಿವೆ. ಸ್ವತಃ ನರೇಂದ್ರ ಮೋದಿ ಅವರನ್ನೇ ಬಿಟ್ಟಿಲ್ಲ. ಇನ್ಫೋಸಿಸ್ ಪ್ರತಿಷ್ಠಾನದ ಮುಖ್ಯಸ್ಥೆ ಸುಧಾ ಮೂರ್ತಿ ಅವರು ತಮ್ಮ ಮುಖ ಬಳಸಿ ಸೃಷ್ಟಿ ಮಾಡಲಾಗಿರುವ ನಕಲಿ ವಿಡಿಯೋಗಳ ಬಗ್ಗೆ ಜಾಗ್ರತೆಯಿಂದ ಇರುವಂತೆ ಸಾರ್ವಜನಿಕರನ್ನು ಎಚ್ಚರಿಸಿ ಸೋಷಿಯಲ್ ಮೀಡಿಯಾದಲ್ಲಿ ಹಾಕಿದ್ದಾರೆ.

200 ಡಾಲರ್ ಹೂಡಿಕೆ ಮಾಡಿ ಹತ್ತು ಪಟ್ಟು ಹೆಚ್ಚು ರಿಟರ್ನ್ ಗಳಿಸಬಹುದು ಎಂದು ಅವರು ಹೇಳಿರುವ ಫೇಕ್ ವಿಡಿಯೋವೊಂದರ ಸಂಬಂಧ ಸುಧಾ ಮೂರ್ತಿ ಸ್ಪಷ್ಟನೆ ಕೊಟ್ಟು ವಿಡಿಯೋ ಹಾಕಿದ್ದಾರೆ. ನನ್ನ ಚಿತ್ರ ಮತ್ತು ಧ್ವನಿ ಬಳಸಿ ಹಣಕಾಸು ಯೋಜನೆ ಮತ್ತು ಹೂಡಿಕೆಗಳ ಬಗ್ಗೆ ಪ್ರಚಾರ ಮಾಡುತ್ತಿರುವ ವಿಡಿಯೋಗಳನ್ನು ರಚಿಸಿ ಆನ್​ಲೈನ್​ನಲ್ಲಿ ಹರಿಯಿಸಲಾಗುತ್ತಿದೆ. ಇವು ನನಗೆ ಗೊತ್ತಿಲ್ಲದಂತೆ ಮಾಡಿರುವ ಡೀಪ್​ಫೇಕ್ ವಿಡಿಯೋಗಳಾಗಿವೆ. ಇವುಗಳ ಬಗ್ಗೆ ಎಚ್ಚರದಿಂದಿರಿ’ ಎಂದು ಸುಧಾ ಮೂರ್ತಿ ಅವರು ತಿಳಿಸಿದ್ದಾರೆ. 200 ಡಾಲರ್ ಹೂಡಿಕೆ ಮಾಡಿ ಹತ್ತು ಪಟ್ಟು ಹೆಚ್ಚು ಹಣ ಗಳಿಸಿ ಎಂದು ತಾನು ಹೇಳಿದ್ದೆನ್ನಲಾದ ವಿಡಿಯೋಗಳು ಹರಿದಾಡುತ್ತಿವೆ. ಇದರಲ್ಲ ತಿಳಿಸಲಾಗಿರುವುದೆಲ್ಲವೂ ಸುಳ್ಳು. ತನಗೆ ಗೊತ್ತಿರುವ ಕೆಲ ಜನರು ಇಂಥ ಸ್ಕ್ಯಾಮ್​ಗಳಿಗೆ ಬಲಿಯಾಗಿ ಹಣ ಕಳೆದುಕೊಂಡಿದ್ದಾರೆ ಎಂದೂ ಸುಧಾ ಮೂರ್ತಿ ವಿವರಿಸಿದ್ದಾರೆ.

[t4b-ticker]
error: Content is protected !!