ಪಾಕಿಸ್ತಾನದಲ್ಲಿ ಲವ ದೇವಸ್ಥಾನದ ಪುನರ್‌ನಿರ್ಮಾಣ: ಸಾರ್ವಜನಿಕ ದರ್ಶನಕ್ಕೆ ಅವಕಾಶ

Picture of Savistara

Savistara

Bureau Report

ಲಾಹೋರ್: ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿನಲಾಹೋರ್‌ನ ಕೋಟೆಯಲ್ಲಿರುವ ಲವ ದೇವಸ್ಥಾನದ ಪುನರ್‌ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದು, ಸಾರ್ವಜನಿಕರಿಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.

ಲವ ದೇಗುಲದ ಜೊತೆಗೆ ಸ್ಮಾರಕಗಳಾದ ಸಿಬ್ಬರ ಹಮ್ಮಾಮ್ ಹಾಗೂ ಮಹಾರಾಜ ರಂಜಿತ್ ಸಿಂಗ್ ಅವರಿಂದ ನಿರ್ಮಾಣವಾಗಿದ್ದ ಅಷ್ಟದ್ವಾರ ಮಂಟಪವನ್ನು ಆಗಾ ಖಾನ್ ಸಾಂಸ್ಕೃತಿಕ ಸೇವಾ ಕೇಂದ್ರದ ಸಹಯೋಗದಲ್ಲಿ ಪುನರುಜ್ಜಿವನಗೊಳಿಸಲಾಗಿದೆ ಎಂದು ವಾಲ್ಡ್ ಸಿಟಿ ಲಾಹೋರ್ ಪ್ರಾಧಿಕಾರ (ಡಬ್ಲ್ಯುಸಿಎಲ್‌ಎ) ಮಂಗಳವಾರ ತಿಳಿಸಿದೆ.ಲಾಹೋರ್ ಕೋಟೆಯ ಒಳಗಿರುವ ಲವ ದೇವಾಲಯವು ಇದೀಗ ಐತಿಹಾಸಿಕ ಸ್ಮಾರಕ. ಭಗವಾನ್ ರಾಮನ ಪುತ್ರರಲ್ಲಿ ಒಬ್ಬರಾದ ಲವನಿಗೆ ಸಮರ್ಪಿತವಾಗಿರುವ ದೇಗುಲ. ಲವನ ದೇಗುಲ ಇಲ್ಲಿರುವುದರಿಂದಲೇ ಲಾಹೋರ್ ಎಂಬ ಹೆಸರು ಬಂದಿದೆ ಎಂಬ ನಂಬಿಕೆ ಹಿಂದೂಗಳದ್ದು. 2018ರಲ್ಲಿ ಭಾಗಶಃ ಪುನರುಜ್ಜಿವನಗೊಂಡಿತ್ತು.ಪುನರ್‌ನಿರ್ಮಾಣ ಕಾರ್ಯದಲ್ಲಿ ತಂತ್ರಜ್ಞಾನ ಬಳಸಲಾಗಿದೆ. ಇದು ಲಾಹೋರ್ ಕೋಟೆಯ ಸಾಂಸ್ಕೃತಿಕ ಸಿರಿಯನ್ನು ಹೆಚ್ಚಿಸಿದೆ ಎಂದು ಡಬ್ಲ್ಯುಸಿಎಲ್‌ಎ ವಕ್ತಾರರಾದ ತಾನಿಯಾ ಖುರೇಷಿ ತಿಳಿಸಿದ್ದಾರೆ.

ಸಿಖ್ ಆಡಳಿತದಲ್ಲಿ (1799-1849) ನಿರ್ಮಾಣಗೊಂಡಿದ್ದ ನೂರಕ್ಕೂ ಹೆಚ್ಚು ಸ್ಮಾರಕಗಳನ್ನು ಲಾಹೋರ್ ಕೋಟೆಯಲ್ಲಿ ಸಿಖ್ ಸಂಶೋಧಕರು ಕಳೆದ ವರ್ಷ ಪತ್ತೆ ಹಚ್ಚಿದ್ದರು. ಅವುಗಳ ಐತಿಹಾಸಿಕ ಮಹತ್ವವನ್ನು ವಿವರಿಸಿದ್ದರು. ಅವುಗಳಲ್ಲಿ ಅಂದಾಜು 30 ಸ್ಮಾರಕಗಳು ಇಂದು ಅಸ್ತಿತ್ವದಲ್ಲೇ ಇಲ್ಲ ಎಂಬುದು ತಿಳಿದುಬಂದಿದೆ.

News Updates

ಎಸ್‌ಐಆ‌ರ್ ವಿಚಾರದಲ್ಲಿ ಬಿಜೆಪಿ ಕಾರ್ಯಕರ್ತರ ಬೆದರಿಸಿದರೆ ಸುಮ್ಮನಿರಲ್ಲ: ಪೊಲೀಸರಿಗೆ ಸಂಸದ ಕ್ಯಾ. ಚೌಟ ಎಚ್ಚರಿಕೆ – ಕಾಂಗ್ರೆಸ್ ತನ್ನ ಆರೋಪಗಳಿಗೆ ಸೂಕ್ತ ಸಾಕ್ಷ್ಯಾಧಾರಗಳನ್ನು ಒದಗಿಸಲಿ ಅಕ್ರಮವಾಗಿ ಮತ ರದ್ದು -ಮಾಡಲಾದ ವ್ಯಕ್ತಿಯನ್ನು ತಂದು ಚುನಾವಣಾಧಿಕಾರಿ ಮುಂದೆ ನಿಲ್ಲಿಸಲಿ: ಸಂಸದ ಸವಾಲು

News Updates

ಕೇಂದ್ರ ಸರ್ಕಾರದಿಂದ ಶಿವಮೊಗ್ಗ ನಗರ ಬೈಪಾಸ್ ಹಾಗೂ ನಗರ ವ್ಯಾಪ್ತಿಯ ಹೆದ್ದಾರಿ ಅಭಿವೃದ್ಧಿಗೆ 466.74 ಕೋಟಿ ರೂ. ಮಂಜೂರು; ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ಕೃತಜ್ಞತೆ ಸಲ್ಲಿಸಿದ ಸಂಸದ ಬಿ.ವೈ. ರಾಘವೇಂದ್ರ

[t4b-ticker]
error: Content is protected !!