ಇಂದು ಚುನಾವಣೆ ನಡೆದರೆ ಎನ್‌ಡಿಎ 352, ಇಂಡಿಯಾ 182 ಸ್ಥಾನ ಗೆಲುವು: ಸಮೀಕ್ಷೆ

Picture of Savistara

Savistara

Bureau Report

ಇಂದು ಲೋಕಸಭಾ ಚುನಾವಣೆಯೇನಾದರೂ ನಡೆದರೆ ಬಿಜೆಪಿ ನೇತೃತ್ವದ ಎನ್‌ಡಿಎ ಒಕ್ಕೂಟ ಒಟ್ಟು 543 ಲೋಕಸಭಾ ಕ್ಷೇತ್ರಗಳ ಪೈಕಿ 352ರಲ್ಲಿ ಭರ್ಜರಿ ಗೆಲುವು ಸಾಧಿಸಲಿದೆ.

ಇಂಡಿಯಾ ಒಕ್ಕೂಟ 182 ಸ್ಥಾನಗಳಿಗೆ ತೃಪ್ತಿಪಡಲಿದೆ ಎಂದು ಇಂಡಿಯಾ ಟುಡೇ-ಸಿ ವೋಟರ್ ಮೂಡ್ ಆಫ್ ದಿ ನೇಷನ್ ಸಮೀಕ್ಷೆ ತಿಳಿಸಿದೆ.

ದೇಶಾದ್ಯಂತ ಎನ್‌ಡಿಎ ಪರ ಜನರ ಒಲವು ವ್ಯಕ್ತವಾಗಿದ್ದು, ಇಂಡಿಯಾ ಒಕ್ಕೂಟದ 52 ಸ್ಥಾನ ಕುಸಿತವಾಗುವ ಸಾಧ್ಯತೆ ಇದೆ ಎಂದು ಮೂಡ್ ಆಫ್ ದಿ ನೇಷನ್ ಸಮೀಕ್ಷೆ ಮಾಹಿತಿ ನೀಡಿದೆ.

2024ರ ಚುನಾವಣೆಯಲ್ಲಿ ಪ್ರಧಾನಿ ಮೋದಿಯವರು ‘ಅಬ್ಕಿ ಬಾರ್‌ 400 ಪಾರ್‌’ ಘೋಷಣೆ ಮೂಲಕ ಪ್ರಚಾರ ನಡೆಸಿದ್ದರು. ಆದರೆ ಎನ್‌ಡಿಎ 293 ಸ್ಥಾನಗಳಲ್ಲಿ ಜಯ ಗಳಿತ್ತು.

2026ರಲ್ಲೂ ಮಹಾರಾಷ್ಟ್ರ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಜಯಭೇರಿ ಬಾರಿಸಿದೆ. ದೇಶಾದ್ಯಂತ ಎನ್‌ಡಿಎ ಪರ ಜನರ ಒಲವಿದ್ದು, ಇಂದು ಚುನಾವಣೆಯೇನಾರೂ ನಡೆದರೆ 352 ಸ್ಥಾನಗಳಲ್ಲಿ ಜಯ ಸಾಧಿಸಲಿದೆ.

ಆದರೆ 2024ರಲ್ಲಿ 234 ಸ್ಥಾನ ಗಳಿಸಿದ್ದ ಇಂಡಿಯಾ ಒಕ್ಕೂಟ ಕೇವಲ 182 ಸ್ಥಾನಗಳಿಗೆ ತೃಪ್ತಿ ಪಡಲಿದೆ ಎಂದು ಸಮೀಕ್ಷೆ ತಿಳಿಸಿದೆ. ಈ ವರ್ಷ ಪಶ್ಚಿಮ ಬಂಗಾಳ, ತಮಿಳುನಾಡು ಸೇರಿ ಪಂಚ ರಾಜ್ಯಗಳಲ್ಲಿ ಚುನಾವಣೆ ನಡೆಯಲಿದ್ದು, ಈ ಸಮೀಕ್ಷೆ ಗಮನ ಸೆಳೆದಿದೆ.

2024ರ ಲೋಕಸಭಾ ಚುನಾವಣೆಯಲ್ಲಿ ಎನ್‌ಡಿಎ 293 ಸ್ಥಾನ ಸಂಪಾದಿಸಿದ್ದರೆ, ಇಂಡಿಯಾ ಒಕ್ಕೂಟ 234 ಸ್ಥಾನ ಗೆದ್ದಿದೆ. ಮೂಡ್‌ ಆಫ್‌ ದಿ ನೇಷನ್‌ ಪ್ರಕಾರ ಈಗ ಚುನಾವಣೆ ನಡೆದರೆ ಎನ್‌ಡಿಎ 352 ಸ್ಥಾನ ಗೆಲ್ಲಲಿದ್ದರೆ, ಇಂಡಿಯಾ ಒಕ್ಕೂಟದ ಸ್ಥಾನ 182ಕ್ಕೆ ಕುಸಿಯಲಿದೆ.

News Updates

ಎಸ್‌ಐಆ‌ರ್ ವಿಚಾರದಲ್ಲಿ ಬಿಜೆಪಿ ಕಾರ್ಯಕರ್ತರ ಬೆದರಿಸಿದರೆ ಸುಮ್ಮನಿರಲ್ಲ: ಪೊಲೀಸರಿಗೆ ಸಂಸದ ಕ್ಯಾ. ಚೌಟ ಎಚ್ಚರಿಕೆ – ಕಾಂಗ್ರೆಸ್ ತನ್ನ ಆರೋಪಗಳಿಗೆ ಸೂಕ್ತ ಸಾಕ್ಷ್ಯಾಧಾರಗಳನ್ನು ಒದಗಿಸಲಿ ಅಕ್ರಮವಾಗಿ ಮತ ರದ್ದು -ಮಾಡಲಾದ ವ್ಯಕ್ತಿಯನ್ನು ತಂದು ಚುನಾವಣಾಧಿಕಾರಿ ಮುಂದೆ ನಿಲ್ಲಿಸಲಿ: ಸಂಸದ ಸವಾಲು

News Updates

ಕೇಂದ್ರ ಸರ್ಕಾರದಿಂದ ಶಿವಮೊಗ್ಗ ನಗರ ಬೈಪಾಸ್ ಹಾಗೂ ನಗರ ವ್ಯಾಪ್ತಿಯ ಹೆದ್ದಾರಿ ಅಭಿವೃದ್ಧಿಗೆ 466.74 ಕೋಟಿ ರೂ. ಮಂಜೂರು; ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ಕೃತಜ್ಞತೆ ಸಲ್ಲಿಸಿದ ಸಂಸದ ಬಿ.ವೈ. ರಾಘವೇಂದ್ರ

[t4b-ticker]
error: Content is protected !!