ಗಗನದಿಂದ ಕೆಳಗಿಳಿದ ಚಿನ್ನ ಬೆಳ್ಳಿ ಬೆಲೆ: 14 ಸಾವಿರ ರೂ ಇಳಿಕೆ ಕಂಡ ಚಿನ್ನ 20 ಸಾವಿರ ರೂ. ಇಳಿಕೆ ಕಂಡ ಬೆಳ್ಳಿ

Picture of Savistara

Savistara

Bureau Report

ನವದೆಹಲಿ: ಕಳೆದ ಕೆಲವು ದಿನಗಳಿಂದ ಸತತವಾಗಿ ಏರಿಕೆ ಕಂಡು ಜನಸಾಮಾನ್ಯರ ಕೈಗೆಟುಕದಂತಾಗಿದ್ದ ಚಿನ್ನ ಮತ್ತು ಬೆಳ್ಳಿಯ ದರವು ಶುಕ್ರವಾರ ದಿಢೀರ್ ಕುಸಿತ ಕಂಡಿದೆ. ದೆಹಲಿಯ ಚಿನಿವಾರ ಪೇಟೆಯ ಇಂದಿನ ವಹಿವಾಟಿನಲ್ಲಿ ಚಿನ್ನದ ಬೆಲೆ 10 ಗ್ರಾಂಗೆ ಬರೋಬ್ಬರಿ ₹14,000 ಹಾಗೂ ಬೆಳ್ಳಿಯ ಬೆಲೆ ಪ್ರತಿ ಕೆ.ಜಿ.ಗೆ ₹20,000 ರಷ್ಟು ಇಳಿಕೆಯಾಗಿದೆ.

ಬೆಲೆ ಕುಸಿತಕ್ಕೆ ಪ್ರಮುಖ ಕಾರಣಗಳು:ಅಮೆರಿಕದ ಡಾಲರ್ ಮೌಲ್ಯದಲ್ಲಿನ ಚೇತರಿಕೆ ಮತ್ತು ಹೂಡಿಕೆದಾರರು ತಾವು ಹೂಡಿದ್ದ ಹಣದ ಮೇಲೆ ಲಾಭಗಳಿಸಲು ಚಿನ್ನ ಮತ್ತು ಬೆಳ್ಳಿಯನ್ನು ದೊಡ್ಡ ಮಟ್ಟದಲ್ಲಿ ಮಾರಾಟ ಮಾಡಿದ್ದು ಈ ದಿಢೀರ್ ದರ ಕುಸಿತಕ್ಕೆ ಕಾರಣ ಎಂದು ಮಾರುಕಟ್ಟೆ ತಜ್ಞರು ವಿಶ್ಲೇಷಿಸಿದ್ದಾರೆ.

ಇಂದಿನ ದರ ಹೀಗಿದೆ:ಚಿನ್ನ: ಶೇ 7.65ರಷ್ಟು ಕುಸಿದಿದ್ದು, ಹತ್ತು ಗ್ರಾಂ ಚಿನ್ನದ ಬೆಲೆ ₹1.69 ಲಕ್ಷಕ್ಕೆ ತಲುಪಿದೆ.ಬೆಳ್ಳಿ: ಶೇ 5ರಷ್ಟು ಇಳಿಕೆಯಾಗಿದ್ದು, ಕೆ.ಜಿ ಬೆಳ್ಳಿಯ ಬೆಲೆ ₹3,84,500 ಕ್ಕೆ ಇಳಿದಿದೆ.

“ಇತ್ತೀಚಿನ ದಿನಗಳಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆ ಗರಿಷ್ಠ ಮಟ್ಟಕ್ಕೆ ಏರಿತ್ತು. ಹೀಗಾಗಿ ದೊಡ್ಡ ಸಾಂಸ್ಥಿಕ ಹೂಡಿಕೆದಾರರು ಲಾಭ ಮಾಡಿಕೊಳ್ಳುವ ಉದ್ದೇಶದಿಂದ ತಮ್ಮಲ್ಲಿದ್ದ ಸಂಗ್ರಹವನ್ನು ನಗದೀಕರಣಕ್ಕೆ (ಮಾರಾಟಕ್ಕೆ) ಮುಂದಾಗಿದ್ದಾರೆ. ಇದರ ಜೊತೆಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಡಾಲರ್ ಬಲಗೊಂಡಿರುವುದು ಕೂಡ ಬೆಲೆ ಇಳಿಕೆಗೆ ಪುಷ್ಟಿ ನೀಡಿದೆ” ಎಂದು ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್‌ನ ಹಿರಿಯ ವಿಶ್ಲೇಷಕ ಸೌಮಿಲ್ ಗಾಂಧಿ ತಿಳಿಸಿದ್ದಾರೆ.

News Updates

ಕೇಂದ್ರ ಸರ್ಕಾರದಿಂದ ಶಿವಮೊಗ್ಗ ನಗರ ಬೈಪಾಸ್ ಹಾಗೂ ನಗರ ವ್ಯಾಪ್ತಿಯ ಹೆದ್ದಾರಿ ಅಭಿವೃದ್ಧಿಗೆ 466.74 ಕೋಟಿ ರೂ. ಮಂಜೂರು; ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ಕೃತಜ್ಞತೆ ಸಲ್ಲಿಸಿದ ಸಂಸದ ಬಿ.ವೈ. ರಾಘವೇಂದ್ರ

[t4b-ticker]
error: Content is protected !!